ನವದೆಹಲಿ : ಇಲ್ಲಿನ ಮುಖರ್ಜಿನಗರದಲ್ಲಿ ವಾಸಿಸುತ್ತಿರುವ ವಕೀಲ ದಂಪತಿ ಸಮಾಜದ ಬಡವರಿಗೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನೆರವು ನೀಡುತ್ತಿದ್ದಾರೆ. ದೆಹಲಿಯಲ್ಲಿ ಚಳಿ ಮತ್ತು ಮಾಲಿನ್ಯದಿಂದಾಗಿ ಬಡವರ ಸಮಸ್ಯೆಗಳು ಹೆಚ್ಚಿವೆ.
ಈ ಚಳಿಯ ವಾತಾವರಣದಲ್ಲಿ ಪಾದಚಾರಿ ಮಾರ್ಗದಲ್ಲಿ ವಾಸಿಸುವ ಜನರು ನಡುಗುವಂತಾಗಿದೆ. ಈ ಮಧ್ಯೆ ತಲೆಯ ಮೇಲೆ ಸೂರಿಲ್ಲದ ನಿರ್ಗತಿಕರಿಗೆ ಮತ್ತು ನಿರಾಶ್ರಿತರಿಗೆ ಈ ದಂಪತಿ ಕಂಬಳಿ ಮತ್ತು ಆಹಾರ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಭಿಕ್ಷುಕರಿಂದ ಹಿಡಿದು ರಿಕ್ಷಾ ಚಾಲಕರಿಗೂ ಸಹಾಯ ಹಸ್ತ ಚಾಚುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಈ ದಂಪತಿ, ಮನೆಯಲ್ಲಿ 20 ಲೀಟರ್ ಚಹಾವನ್ನು ತಯಾರಿಸುವ ಮೂಲಕ ಅವರ ದಿನಚರಿ ಪ್ರಾರಂಭವಾಗುತ್ತದೆ. ಬಡವರಿಗೆ ಉಪಹಾರದ ಜತೆಗೆ ಚಹಾವನ್ನು ವಿತರಿಸುತ್ತಾರೆ. ಜೊತೆಗೆ ಚಳಿಯಿಂದ ರಕ್ಷಿಸಲು ಹೊದಿಕೆಗಳು ಮತ್ತು ಕಂಬಳಿಗಳನ್ನು ನೀಡುತ್ತಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕೋವಿಡ್ ಲಾಕ್ಡೌನ್ ಅವಧಿಯಲ್ಲಿಯೂ ಅವರು ಅಗತ್ಯವಿರುವ ಜನರಿಗೆ ಆಹಾರ, ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿದ್ದರು. ಈ ಎಲ್ಲಾ ಅಗತ್ಯ ವಸ್ತುಗಳನ್ನು ವಿತರಿಸಲು ಅವರು ತಮ್ಮ ಕಾರನ್ನು ಬಳಸುತ್ತಿದ್ದರು.
ಇವರಿಗೆ ಅನೇಕ ಸಂಸ್ಥೆಗಳು ಸಹಕರಿಸಿವೆಯಂತೆ. ಇನ್ನು ಬಡವರಿಗೆ ಸಹಾಯ ಮಾಡಲು ಈ ದಂಪತಿ ದೆಹಲಿಯಲ್ಲಿ 'ರಾಮ್ ಜಿ ಕಿ ಗಿಲಹರಿ' ಎಂಬ ಹೆಸರಿನ ಸ್ವಂತ ಸಂಸ್ಥೆಯನ್ನು ಸಹ ರಚಿಸಿದ್ದಾರಂತೆ.
ಈ ಬಗ್ಗೆ ಮಾತನಾಡಿದ ವಕೀಲ ದಿಶೇಶ್ ಭಾಟಿಯಾ, ಈ ಪ್ರದೇಶದಲ್ಲಿ ಪ್ರತಿದಿನ ಬೆಳಗ್ಗೆ 7 ರಿಂದ 9ರವರೆಗೆ ಮತ್ತು ಸಂಜೆ 7 ರಿಂದ 10ರವರೆಗೆ, ನಾವು ಆಹಾರ ಮತ್ತು ಚಹಾ ತಿಂಡಿಗಳು ಮತ್ತು ಬಡ ಜನರಿಗೆ ಕಂಬಳಿಯನ್ನು ವಿತರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ನೇತಾಜಿಯವರ 125ನೇ ಜನ್ಮವಾರ್ಷಿಕೋತ್ಸವ: ಮರಳು ಕಲಾಕೃತಿ ಮೂಲಕ ಗೌರವ