ETV Bharat / bharat

ಬೃಹತ್​ ಮೊಸಳೆ ಹೆಗಲ ಮೇಲೆ ಹೊತ್ತು ತಂದ ಜನರು... ವಿಡಿಯೋ ವೈರಲ್​! - ಮೊಸಳೆ ಹೊತ್ತು ಸೆಲ್ಫಿ

ಮಳೆಯಾರ್ಭಟದಿಂದ ಗ್ರಾಮದೊಳಗೆ ನುಗ್ಗಿದ್ದ ಮೊಸಳೆವೊಂದನ್ನ ಹಗ್ಗದಿಂದ ಕಟ್ಟಿ, ಹೆಗಲ ಮೇಲೆ ಹೊತ್ತುಕೊಂಡು ಸೆಲ್ಫಿ ತೆಗೆದುಕೊಂಡಿರುವ ಘಟನೆ ನಡೆದಿದೆ.

crocodile
crocodile
author img

By

Published : Aug 5, 2021, 3:26 PM IST

ಶಿವಪುರಿ(ಮಧ್ಯಪ್ರದೇಶ): ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದ ಕೆಲವೊಂದು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಇನ್ನಿಲ್ಲದ ತೊಂದರೆ ಎದುರಾಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಪ್ರಾಣಿ - ಪಕ್ಷಿಗಳು ತೊಂದರೆಗೊಳಗಾಗಿ ನರಕಯಾತನೆ ಅನುಭವಿಸುವಂತಾಗಿದೆ. ಕೆಲವೊಂದು ಜಲಚರ ಪ್ರಾಣಿಗಳು ಪ್ರವಾಹದಿಂದಾಗಿ ಊರಿನೊಳಗೆ ಲಗ್ಗೆ ಹಾಕುತ್ತಿವೆ.

ಬೃಹತ್​ ಮೊಸಳೆ ಹೆಗಲ ಮೇಲೆ ಹೊತ್ತು ತಂದ ಜನರು

ಮಧ್ಯಪ್ರದೇಶದ ಶಿವಪುರಿಯಲ್ಲಿ ಪ್ರವಾಹದಿಂದಾಗಿ ಬೃಹತ್​ ಮೊಸಳೆವೊಂದು ಊರಿಗೆ ಲಗ್ಗೆ ಹಾಕಿದೆ. ಇದನ್ನ ನೋಡಿರುವ ಕೆಲ ಯುವಕರು, ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಇದಾದ ಬಳಿಕ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಚಂದ್ರಪತ್​ ಕೆರೆಗೆ ಬಿಟ್ಟು ಬಂದಿದ್ದಾರೆ.

ಅನೇಕರು ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದಲ್ಲಿ ಮಳೆಯಾರ್ಭಟ ಜೋರಾಗಿದ್ದು, ಅನೇಕ ತಗ್ಗುಪ್ರದೇಶಗಳಿಗೆ ನೀರು ನುಗ್ಗಿರುವ ಕಾರಣ ಜನರು ತೊಂದರೆಗೊಳಗಾಗಿದ್ದಾರೆ. ಇದರ ಜೊತೆಗೆ ಅನೇಕರು ಪ್ರವಾಹಕ್ಕೆ ಸಿಲುಕಿ ತಮ್ಮ ಪ್ರಾಣ ಸಹ ಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ನಿನ್ನೆ ಸಮೀಕ್ಷೆ ನಡೆಸಿದರು.

ಇದನ್ನೂ ಓದಿರಿ: ಸಾಮಾನ್ಯ ಜನರು ತೆರಿಗೆ ಕಟ್ಟುವಾಗ, ನಿಮಗೇನು ತೊಂದರೆ? ನಟ ಧನುಷ್​ ಪ್ರಶ್ನಿಸಿದ ಮದ್ರಾಸ್​ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.