ರಾಜ್‌ಗಢ್ (ಮಧ್ಯಪ್ರದೇಶ): ಲವ್ ಜಿಹಾದ್ ವಿರುದ್ಧದ ಕಾನೂನು ಪರ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಮತ್ತೆ ಬ್ಯಾಟ್ ಬೀಸಿದ್ದಾರೆ. ಇಡೀ ದೇಶದಲ್ಲಿಯೇ ಈ ಕಾನೂನು ರೂಪಿಸಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
"ವಿರೋಧ ಪಕ್ಷಗಳೇ ಈ ಸಮಸ್ಯೆಯನ್ನು ಸೃಷ್ಟಿಸಿವೆ. ಈ ಮೊದಲು ಲವ್ ಜಿಹಾದ್‌ನಂತಹ ಯಾವುದೇ ಕ್ರಮ ಇರಲಿಲ್ಲ. ಪ್ರೀತಿ ಅಂದರೆ ದೇವರು ಇದ್ದ ಹಾಗೆ. ಆದರೆ ಕೆಲವು ಅಪರಾಧಿಗಳು ಆ ಪ್ರೀತಿಯನ್ನು ಭ್ರಷ್ಟಗೊಳಿಸಿದ್ದಾರೆ. ಅಂತಹ ಜನರಿಗೆ ವಿಶೇಷ ಕಾನೂನುಗಳನ್ನು ರೂಪಿಸಲೇಬೇಕು ಹಾಗೂ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯಾಕೆಂದರೆ ಒಬ್ಬರ ನಮ್ರತೆಯನ್ನು ಕೊಲ್ಲುವುದು ಒಂದು ದೊಡ್ಡ ಅಪರಾಧವಾಗುತ್ತದೆ. ಅಂತಹ ಜನರು ಮುಕ್ತವಾಗಿ ವಿಹರಿಸುವುದು ಸೂಕ್ತವಲ್ಲ." ಎಂದು ಠಾಕೂರ್ ಹೇಳಿದರು.
ಇದನ್ನೂ ಓದಿ: 'ಮೇಡ್ ಇನ್ ಇಂಡಿಯಾ' ಕೊರೊನಾ ಲಸಿಕೆಗಳೊಂದಿಗೆ ಜೀವಗಳನ್ನು ಉಳಿಸಲು ಭಾರತ ಸಿದ್ಧ: ಪಿಎಂ ಮೋದಿ
ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಈಗಾಗಲೇ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿವೆ. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು.