ಮಧ್ಯಪ್ರದೇಶ: ಇಂದೋರ್ ಅನ್ನು 'ಭಿಕ್ಷುಕ-ಮುಕ್ತ' ನಗರವನ್ನಾಗಿ ಮಾಡಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ.
ಭಿಕ್ಷುಕರ ಪುನರ್ವಸತಿ ಕಾರ್ಯಕ್ರಮದಡಿ ನಗರದಲ್ಲಿ ವಾಸಿಸುತ್ತಿರುವ ಮನೆಯಿಲ್ಲದ ಜನರು ಮತ್ತು ಭಿಕ್ಷುಕರ ಪುನರ್ವಸತಿಗಾಗಿ ಇಂದೋರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಸಿಂಗ್ ಅವರು ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ವಿಷಯಗಳನ್ನು ಚರ್ಚಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಮನೀಶ್ ಸಿಂಗ್, ಇಂದೋರ್ ಅನ್ನು "ಭಿಕ್ಷುಕ ಮುಕ್ತ" ನಗರವನ್ನಾಗಿ ಮಾಡುವ ಉದ್ದೇಶದಿಂದ ಭಿಕ್ಷುಕ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಜೊತೆಗೆ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ, ಆಹಾರ, ಬಟ್ಟೆ ಇತ್ಯಾದಿ ಒದಗಿಸುವಂತೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇನ್ನು ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎನ್‌ಜಿಒಗಳು ಹಾಗೂ ಜನ ಸಾಮಾನ್ಯರು ಹಾಗೂ ಸ್ವಯಂಪ್ರೇರಿತ ಸಂಸ್ಥೆಗಳು ಸಲಹೆ ಸೂಚನೆಗಳು ಹಾಗೂ ಕೊಡುಗೆ ನೀಡುವಂತೆ ಸೂಚಿಸಿದರು.