ನೀಚಮ್ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ನಾಪತ್ತೆಯಾಗಿದ್ದ 65 ವರ್ಷದ ಮಾನಸಿಕ ಅಸ್ವಸ್ಥನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಸಾವಿನ ಮುನ್ನ ಈತನ ಹೆಸರು ಪತ್ತೆಯಾಗಿ ವ್ಯಕ್ತಿಯೊಬ್ಬ ನಿನ್ನ ಹೆಸರು ಏನೆಂದು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತಯನ್ನು ಭನ್ವರ್‌ಲಾಲ್ ಜೈನ್ ಎಂದು ಗುರುತಿಸಲಾಗಿದೆ. ರತ್ಲಾಮ್ ಜಿಲ್ಲೆಯ ಸರ್ಸಿಯ ಈತ ಧಾರ್ಮಿಕ ಕೆಲಸಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದ. ನಂತರ ಮೇ 15ರಂದು ನಾಪತ್ತೆಯಾಗಿದ್ದರು. ಮನೆಗೆ ಮರಳಿ ಬಾರದ ಕಾರಣ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಭನ್ವರ್‌ಲಾಲ್ ಜೈನ್ ಮೃತದೇಹ ನೀಮಚ್ ಜಿಲ್ಲೆಯ ರಸ್ತೆ ಬಳಿ ಪತ್ತೆಯಾಗಿದೆ.
ರಸ್ತೆ ಬಿದ್ದಿದ್ದ ಈತನಿಗೆ ನಿನ್ನ ಹೆಸರು ಏನೆಂದು ಪ್ರಶ್ನಿಸಿ, ಆತನಿಗೆ ಉತ್ತರಿಸಲೂ ಅವಕಾಶವನ್ನೂ ನೀಡದೇ ಪದೇ ಪದೆ ಹಲ್ಲೆ ಮಾಡಲಾಗಿರುವ ವಿಡಿಯೋ ಹರಿದಾಡುತ್ತಿದೆ. ಈ ಹಲ್ಲೆ ನಡೆಸಿದ ವ್ಯಕ್ತಿ ಬಿಜೆಪಿ ಮುಖಂಡ ದಿನೇಶ್ ಕುಶ್ವಾ ಎಂದು ಕಾಂಗ್ರೆಸ್ ಆರೋಪಿಸಿದೆ.