ETV Bharat / bharat

ತಾಯಿ, ಮಗನ ಹತ್ಯೆ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ ಡಬಲ್ ಮರ್ಡರ್​

ಮನೆಯಲ್ಲಿದ್ದ ತಾಯಿ ಮತ್ತು ಮಗನನ್ನು ಕೊಂದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Mother, teenage son murdered in Kolkata
ತಾಯಿ, ಮಗನ ಹತ್ಯೆ: ಬ್ಯಾಂಕ್ ಉದ್ಯೋಗಿಯ ಮನೆಯಲ್ಲಿ ಡಬಲ್ ಮರ್ಡರ್​
author img

By

Published : Sep 7, 2021, 10:44 AM IST

ಕೋಲ್ಕತ್ತಾ ( ಪಶ್ಚಿಮ ಬಂಗಾಳ): ತಾಯಿ ಮತ್ತು ಅಪ್ರಾಪ್ತ ಮಗನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೋಲ್ಕತಾದ ಬೆಹಲಾ ಬಳಿಯಿರುವ ಪರ್ನಶ್ರೀ ಎಂಬ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

35 ವರ್ಷದ ಸುಶ್ಮಿತಾ ಮಂಡಲ್ ಮತ್ತು ಆಕೆಯ ಮಗ 14 ವರ್ಷದ ಸಂಜಿತ್ ಮಂಡಲ್ ಅವರನ್ನು ದುಷ್ಕರ್ಮಿಗಳು ಕೊಂದು ಪರಾರಿಯಾಗಿದ್ದಾರೆ. ಸುಶ್ಮಿತಾ ಮಂಡಲ್ ಪತಿ ತಪನ್ ಮಂಡಲ್ ಬ್ಯಾಂಕ್​ ಉದ್ಯೋಗಿಯಾಗಿದ್ದಾರೆ. ತಪನ್ ಮಂಡಲ್, ಬ್ಯಾಂಕ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಮೃತದೇಹಗಳು ಬಿದ್ದಿದ್ದು, ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರಲ್ಲಿ ಮತ್ತೊಂದು ಸಂಶಯ ವ್ಯಕ್ತವಾಗಿದ್ದು, ಪರಿಚಯಸ್ಥರಿಂದಲೇ ಕೃತ್ಯ ನಡೆದಿರಬಹುದು ಎನ್ನಲಾಗಿದೆ. ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: Explainer: ಏನಿದು ನಿಫಾ ಸೋಂಕು? ಲಕ್ಷಣಗಳು ಮತ್ತು ನಿಯಂತ್ರಣ.. ಇಲ್ಲಿದೆ ಸಂಪೂರ್ಣ ವಿವರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.