ETV Bharat / bharat

ಮಗನ ಮೇಲೆ ತಂದೆಯ ರಾಕ್ಷಸಿ ಕೃತ್ಯ: ತಾಯಿ ಮೊಬೈಲ್​​ನಲ್ಲಿ ದೌರ್ಜನ್ಯದ ದೃಶ್ಯ ಸೆರೆ - ಹೆತ್ತ ಮಗನ ಮೇಲೆ ತಂದೆ ಹಲ್ಲೆ

ಎಂಟು ವರ್ಷದ ಬಾಲಕನೋರ್ವ ಶಾಲೆಯಲ್ಲಿ ನೀಡಿದ್ದ ಹೋಮ್​ ವರ್ಕ್​ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಆತನ ಮೇಲೆ ಪಾಪಿ ತಂದೆಯೊಬ್ಬ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ.

Father atrocity viral video
Father atrocity viral video
author img

By

Published : Nov 24, 2021, 8:08 PM IST

ಚಿತ್ತೋರ​ಗಢ(ರಾಜಸ್ಥಾನ): ತಂದೆಯೋರ್ವ ಹೆತ್ತ ಮಗನ ಮೇಲೆ ಅತ್ಯಂತ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ರಾಜಸ್ಥಾನದ ಚಿತ್ತೋರಗಢದಲ್ಲಿ ನಡೆದಿದೆ. ಘಟನೆಯ ವಿಡಿಯೋ ತಾಯಿಯ ಮೊಬೈಲ್​​ನಲ್ಲೇ ಸೆರೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ದೂರು ನೀಡಿದ್ದಾರೆ.

ಶಾಲೆಗೆ ತೆರಳಿದ್ದ ಬಾಲಕನೋರ್ವ ಹೋಮ್​ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕಾಗಿ ತಂದೆ ಆತನ ಕೈ-ಕಾಲು ಕಟ್ಟಿಹಾಕಿ, ತಲೆ ಕೆಳಗೆ ಮಾಡಿ ನೇತು ಹಾಕಿದ್ದಾನೆ. ಇದಾದ ಮೇಲೆ, ಅಮಾನವೀಯ ರೀತಿಯಲ್ಲಿ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಇದರ ವಿಡಿಯೋವನ್ನು ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿರುವ ತಾಯಿ, ಚಿತ್ತೋರಗಢದ ಬೇಗೊದಲ್ಲಿರುವ ತನ್ನ ಸಹೋದರನ ಮೊಬೈಲ್​ಗೆ ಕಳುಹಿಸಿಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ರಾಯ್​ಬರೇಲಿ ಬಂಡಾಯ​ ಶಾಸಕಿ ಅದಿತಿ, ಬಿಎಸ್ಪಿಗೂ ಆಘಾತ

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನ ಮಾಡಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ರಾಜೇಂದ್ರ ಸಿಂಗ್​ ಜೈನ್​ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.