ಕೋರಬಾ (ಛತ್ತೀಸಗಢ): ಇಲ್ಲಿನ ಮಾಣಿಕಪುರ ಚೌಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಆದರೆ, ಆಕೆಯ ಪ್ರಿಯಕರ ಈಗಿನ್ನೂ ಕೇವಲ 14 ವರ್ಷದ ಬಾಲಕ ಎನ್ನುವುದು ಈ ಸ್ಟೋರಿಯ ಟ್ವಿಸ್ಟ್!
ಅವಳು ಮದುವೆಯಾಗಿ ಎರಡು ಮಕ್ಕಳ ತಾಯಿ. ಅದ್ಯಾವ ಮಾಯವೋ ಏನೋ.. ಆಕೆಗೆ 14 ವರ್ಷದ ಬಾಲಕನೊಂದಿಗೆ ಪ್ರೇಮ ಅಂಕುರಿಸಿತ್ತು. ಇನ್ನು, ಅವನೊಂದಿಗೇ ಇರಬೇಕೆಂದು ಬಯಸಿದ ಆಕೆ ಆ ಅಪ್ರಾಪ್ತನನ್ನು ಪುಸಲಾಯಿಸಿ ಕರೆದುಕೊಂಡು ಮನೆಬಿಟ್ಟು ಹೋಗಿಬಿಟ್ಟಳು.
ಇವರಿಬ್ಬರೂ ಕಾಣೆಯಾದ ಬಗ್ಗೆ ಸಂಬಂಧಿಕರು ದೂರು ನೀಡಿದ ನಂತರ ಹುಡುಕಾಟಕ್ಕಿಳಿದ ಪೊಲೀಸರು, ಇಬ್ಬರನ್ನೂ ಜಾಂಜಗೀರ-ಚಂಪಾ ಪ್ರದೇಶದಲ್ಲಿ ಪತ್ತೆ ಮಾಡಿ ಕರೆದುಕೊಂಡು ಬಂದಿದ್ದಾರೆ. ಸದ್ಯ ಮಹಿಳೆಯ ವಿರುದ್ಧ ಪೊಲೀಸರು ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ಮಹಿಳೆಯ ಪತಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಹೀಗೆ ಮಕ್ಕಳು ಮರಿ, ಸುಖ ಸಂಸಾರ ಎಲ್ಲ ಇದ್ದರೂ ಅದನ್ನು ಬಿಟ್ಟು ಮಗನ ವಯಸ್ಸಿನ ಹುಡುಗನನ್ನು ಪ್ರೇಮಿಸಿ ಓಡಿ ಹೋದ ಈ ಪ್ರಸಂಗ ಪ್ರಸ್ತುತ ಈ ಭಾಗದಲ್ಲಿ ಜನರ ಚರ್ಚೆಯ ವಿಷಯವಾಗಿದೆ.