ETV Bharat / bharat

ಅಪ್ಪ-ಅಮ್ಮ-ಮಗ ಸಾವು.. 13 ತಾಸುಗಳಲ್ಲಿ ಇಡೀ ಕುಟುಂಬವೇ ಕೊರೊನಾಗೆ ಬಲಿ!

author img

By

Published : May 20, 2021, 7:10 PM IST

ಕ್ರೂರಿ ಕೊರೊನಾ ತನ್ನ ರೌದ್ರಾವತಾರ ಮುಂದುವರಿಸಿದೆ. 13 ತಾಸುಗಳಲ್ಲೇ ಕುಟುಂಬವೊಂದನ್ನು ಬಲಿ ಪಡೆದಿದೆ. ಮಹಾರಾಷ್ಟ್ರದಲ್ಲಿ ಈ ದುರಂತ ಸಂಭವಿಸಿದೆ.

mother-father-and-son-died-due-to-corona-in-less-than-24-hours
13 ಗಂಟೆಯ ಒಳಗೆ ಇಡೀ ಕುಟುಂಬವನ್ನೇ ಬಲಿ ಪಡೆದ ಕ್ರೂರಿ ಕೊರೊನಾ

ಸಾಂಗ್ಲಿ (ಮಹಾರಾಷ್ಟ್ರ): ಇಲ್ಲಿನ ಶಿರಾಲಾ ತಾಲೂಕಿನ ಶಿರ್ಶಿಯಲ್ಲಿ ಕೇವಲ 13 ಗಂಟೆಗಳ ಒಳಗೆ ಇಡೀ ಕುಟುಂಬವೊಂದು ಕೊರೊನಾಗೆ ಬಲಿಯಾಗಿದೆ. ತಂದೆ-ತಾಯಿ ಮತ್ತು ಮಗ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ತಂದೆ ಮಹಾದೇವ್ ಜಿಮೂರ್ (75), ತಾಯಿ ಸುಶೀಲ್ ಜಿಮೂರ್ (66) ಮತ್ತು ಮಗ ಸಚಿನ್ ಜಿಮೂರ್​​(30) ಕೊರೊನಾಗೆ ಬಲಿಯಾದ ಕುಟುಂಬದ ಸದಸ್ಯರಾಗಿದ್ದಾರೆ.

ಕುಟುಂಬದಲ್ಲಿ ಮೊದಲಿಗೆ ತಾಯಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ತಂದೆಗೆ ಕೊರೊನಾ ದೃಢವಾಯಿತು. ಅವರು ಸಹ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾದರು. ಕೆಲ ದಿನಗಳ ಬಳಿಕ ಪೋಷಕರು ಕೋವಿಡ್​​ನಿಂದ ಸುಧಾರಿಸಿಕೊಳ್ಳುತ್ತಿದ್ದರು. ಈ ಮಧ್ಯೆ ತಂದೆಯ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಇಂತಹ ಸಮಯದಲ್ಲಿಯೇ ಪುತ್ರನಿಗೂ ಕೊರೊನಾ ಸೋಂಕು ದೃಢವಾಗಿತ್ತು.

ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾದೇವ್​ ಬುಧವಾರ ಬೆಳಗ್ಗೆ 5 ಗಂಟೆಗೆ ಮೃತಪಟ್ಟಿದ್ದಾರೆ. ಆದರೆ ಈ ವೇಳೆ ಪತ್ನಿ ಹಾಗೂ ಪುತ್ರ ವೆಂಟಿಲೇಟರ್​​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಪತಿಯ ಅಂತ್ಯಕ್ರಿಯೆ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ ಪತ್ನಿ ಸಹ ಕೊನೆಯುಸಿರೆಳೆದಿದ್ದಾರೆ. ಇದಲ್ಲದೆ ಪತಿ-ಪತ್ನಿ ಸಾವನ್ನಪ್ಪಿರುವ ಸುದ್ದಿ ಸಂಬಂಧಿಕರಿಗೆ ತಿಳಿಯುವ ಮೊದಲೇ ಅವರ ಪುತ್ರನೂ ಸಹ ಕೊರೊನಾಕ್ಕೆ ಬಲಿಯಾಗಿದ್ದಾನೆ.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಶಿಕ್ಷಕನ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.