ಚೈಬಾಸಾ(ಜಾರ್ಖಂಡ್): ಮಗನ ಸಾವಿನ ಸುದ್ದಿ ತಿಳಿದ ಆ ತಾಯಿಯೂ ಪ್ರಾಣ ಕಳೆದುಕೊಂಡಳು. ತಾಯಿ-ಮಗನ ಅಂತ್ಯಕ್ರಿಯೆಗೆ ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಬಾಂಡ್ರೇಯ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ
ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಾಂಡೇಯ ಗ್ರಾಮದ ನಿವಾಸಿ ನಾರಾ ಗೋಪ್ (45) ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಮಗನ ಸಾವಿನ ಆಘಾತದಲ್ಲಿ 75 ವರ್ಷದ ತಾಯಿ ರಾಯಬಾರಿ ಗೋಪ್ ಕೂಡ ಕೊನೆಯುಸಿರೆಳೆದರು. ತಾಯಿ-ಮಗನ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಗೋಪ್ ಸಮಾಜದ ಸ್ಮಶಾನದಲ್ಲಿ ಸಿದ್ಧತೆ ನಡೆಸಲಾಯಿತು. ಈ ಸಮಯದಲ್ಲಿ ಗ್ರಾಮೀಣ ಮುಂಡಾ ಸಮಾಜದ ಜೊತೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.
ಈ ವೇಳೆ ಗ್ರಾಮಸ್ಥರ ವಿರೋಧವನ್ನು ನೋಡಿದ ಮೃತರ ಸಂಬಂಧಿಗಳು ಮುಫಾಸಿಲ್ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಈ ಮಾಹಿತಿಯ ಮೇರೆಗೆ ಮುಫಾಸಿಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ಬಳಿಕ ಪೊಲೀಸರ ನೇತೃತ್ವದಲ್ಲಿ ಸಂಬಂಧಿಕರು ಚೈಬಾಸಾದ ಶವಾಗಾರದಲ್ಲಿ ತಾಯಿ-ಮಗನ ಅಂತ್ಯಸಂಸ್ಕಾರ ನಡೆಸಿದರು.
ಗ್ರಾಮದಲ್ಲಿ ಐದು ಎಕರೆ ಜಮೀನು ನಮ್ಮ ಹೆಸರಿನಲ್ಲಿದೆ. ಇದನ್ನು ಕೆಲವರು ನಮ್ಮಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಸಂಬಂಧ ಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿತ್ತು. ಆದ್ರೆ ನ್ಯಾಯಾಲಯದ ತೀರ್ಮಾನವು ನಮ್ಮ ಪರವಾಗಿ ಬಂದಿದ್ದು, ಗಡಿರೇಖೆ ಮಾಡುವ ಆದೇಶವೂ ಇದೆ. ಗಡಿರೇಖೆಗಾಗಿ ಸಿಒ ಹಲವಾರು ಬಾರಿ ಬಂದ್ರೂ ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ. ಭೂ ವಿವಾದದ ಆಗಿರುವುದರಿಂದ ಅವರನ್ನು ಗಡಿರೇಖೆಗೆ ಅನುಮತಿಸಲಿಲ್ಲ ಎಂದು ಅವರು ಹೇಳ್ತಿದ್ದಾರೆ. ಹೀಗಾಗಿ ಅವರು ಶವವನ್ನು ಅಂತ್ಯಕ್ರಿಯೆ ಮಾಡಲು ಅನುಮತಿ ನೀಡಲಿಲ್ಲ ಎಂದು ಮೃತರ ಸಹೋದರರು ಹೇಳಿದ್ದಾರೆ.