ಹೈದರಾಬಾದ್: ಕಳೆದ ನಾಲ್ಕು ದಿನಗಳ ಹಿಂದೆ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ಎರಡು ರೂಪಾಯಿ ಏರಿಕೆ ಮಾಡಿ ಅಮುಲ್ ಘೋಷಣೆ ಹೊರಹಾಕಿತ್ತು. ಇದರ ಬೆನ್ನಲ್ಲೇ ಇದೀಗ ಮದರ್ ಡೈರಿ ಕೂಡ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.
ಮದರಿ ಡೈರಿ ಕಂಪನಿಯ ಪ್ರತಿ ಲೀಟರ್ ಹಾಲಿನ ಮೇಲೆ 2 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದ್ದು, ಪರಿಷ್ಕೃತ ದರ ನಾಳೆಯಿಂದಲೇ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಾರಿಗೆ ಬರಲಿದೆ.
ಮದರ್ ಡೈರಿ ಈ ಹಿಂದೆ 2021ರ ಜುಲೈ ತಿಂಗಳಲ್ಲಿ ಬೆಲೆ ಏರಿಕೆ ಮಾಡಿತ್ತು ಎಂದು ಕಂಪನಿ ಹೇಳಿಕೊಂಡಿದೆ. ಕಳೆದ ಒಂದು ವರ್ಷದಿಂದ ಹಾಲು ಖರೀದಿಯಲ್ಲಿ ಶೇ 8ರಿಂದ 9ರಷ್ಟು ಏರಿಕೆಯಾಗಿದ್ದು, ಇದರ ಜತೆಗೆ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
-
Mother Dairy increases the price of milk by Rs 2. The prices will come into effect from tomorrow (March 6, 2022) pic.twitter.com/tuUy4u1Y6N
— ANI (@ANI) March 5, 2022 " class="align-text-top noRightClick twitterSection" data="
">Mother Dairy increases the price of milk by Rs 2. The prices will come into effect from tomorrow (March 6, 2022) pic.twitter.com/tuUy4u1Y6N
— ANI (@ANI) March 5, 2022Mother Dairy increases the price of milk by Rs 2. The prices will come into effect from tomorrow (March 6, 2022) pic.twitter.com/tuUy4u1Y6N
— ANI (@ANI) March 5, 2022
ಇದನ್ನೂ ಓದಿರಿ: ಮತ್ತೆ ಹಿಜಾಬ್ ಗದ್ದಲ: ಚಿಕ್ಕಮಗಳೂರು ಕಾಲೇಜಿನಲ್ಲಿ 25 ವಿದ್ಯಾರ್ಥಿನಿಯರಿಗೆ ತಡೆ
ಉತ್ತರ ಪ್ರದೇಶ, ಮುಂಬೈ, ನಾಗ್ಪುರ್ ಮತ್ತು ಕೋಲ್ಕತ್ತಾ, ದೆಹಲಿ ಸೇರಿದಂತೆ 11 ನಗರಗಳಲ್ಲಿ ಈ ಪರಿಷ್ಕೃತ ದರ ಜಾರಿಗೊಳ್ಳಲಿದೆ. ದೇಶದ 100 ನಗರಗಳಲ್ಲಿ ಮದರ್ ಡೈರಿ ಹಾಲು ಲಭ್ಯವಾಗುತ್ತಿದ್ದು, ಪ್ರತಿದಿನ 150 ಲಕ್ಷ ಲೀಟರ್ ಹಾಲು ಮಾರಾಟ ಮಾಡ್ತಿದೆ.
ಪ್ರಮುಖವಾಗಿ ದೆಹಲಿ-ಎನ್ಸಿಆರ್ನಲ್ಲಿ 37 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ದೇಶದಲ್ಲಿ ಪ್ರತಿ ಲೀಟರ್ ಮದರ್ ಡೈರಿ ಹಾಲಿನ ಬೆಲೆ 44 ರೂ. ಆಗಿದ್ದು, ಇದೀಗ 46 ರೂ. ಆಗಲಿದೆ. ಫುಲ್ ಕ್ರೀಮ್ ಹಾಲಿನ ದರ ಲೀಟರ್ಗೆ ₹ 59 ಆಗಲಿದೆ.