ಭೋಪಾಲ್ (ಮಧ್ಯಪ್ರದೇಶ): ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಪ್ರಶ್ನಿಸಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿರುವ ಘಟನೆ ಇಲ್ಲಿನ ಸಾಗರ್ ಜಿಲ್ಲೆಯ ರಾಹ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಗಾಂಧಿ ಪ್ರತಿಮೆ ಬಳಿ ಮಾಸ್ಕ್ ಹಾಕದೆ ಓಡಾಡುತ್ತಿದ್ದ ತಾಯಿ ಮಗಳನ್ನು ತಡೆದಾಗ ಮಹಿಳಾ ಕಾನ್ಸ್ಸ್ಟೇಬಲ್ ಜೊತೆ ವಾಗ್ವಾದ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ ಒಬ್ಬಾಕೆ ಮಹಿಳಾ ಕಾನ್ಸ್ಸ್ಟೇಬಲ್ ಕಾಲರ್ ಹಿಡಿದು ರೇಗಾಡಿದ್ದಾಳೆ. ಆದರೆ ಪರಿಸ್ಥಿತಿ ಮಿತಿಮೀರಿದಾಗ ಸ್ಥಳಕ್ಕೆ ಇನ್ನಷ್ಟು ಪೊಲೀಸರು ಆಗಮಿಸಿದ್ದು, ಅವರೊಂದಿಗೂ ಮಾತಿನ ಚಕಮಕಿ ಮುಂದುವರಿದಿದ್ದು, ಸ್ಥಳದಲ್ಲಿ ಹೈಡ್ರಾಮಾ ನಡೆದಿದೆ.
ಇದಾದ ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ತಾಯಿ ಮಗಳು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.