ETV Bharat / bharat

16 ವರ್ಷದ ಅಪ್ರಾಪ್ತ ವಿವಾಹಿತೆಯ ಮೇಲೆ 400ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ! - 16 ವರ್ಷದ ಬಾಲಕಿ ಮೇಲೆ ರೇಪ್​

16 ವರ್ಷದ ಅಪ್ರಾಪ್ತ (Minor girl Gang raped in Maharastra) ವಿವಾಹಿತೆಯ ಮೇಲೆ ಕಳೆದ ಆರು ತಿಂಗಳಲ್ಲಿ 400ಕ್ಕೂ ಹೆಚ್ಚು ಜನರು ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

Minor Rape
Minor Rape
author img

By

Published : Nov 15, 2021, 7:46 PM IST

ಬೀಡ್​(ಮಹಾರಾಷ್ಟ್ರ): 16 ವರ್ಷದ ಅಪ್ರಾಪ್ತೆಯ ಮೇಲೆ ಕಳೆದ 6 ತಿಂಗಳಿಂದ 400ಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಬೀಡ್​​ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದರಲ್ಲಿ ಓರ್ವ ಪೊಲೀಸ್ ಸಿಬ್ಬಂದಿ​​ ಕೂಡ ಭಾಗಿಯಾಗಿದ್ದಾನೆ. ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಘಟನೆಯ ಸಂಪೂರ್ಣ ವಿವರ:

ಸಂತ್ರಸ್ತೆಯ ತಾಯಿ ಕಳೆದ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಹೀಗಾಗಿ ಕಳೆದ ಎಂಟು ತಿಂಗಳ ಹಿಂದೆ ತಂದೆ ಮಗಳಿಗೆ ಮದುವೆ ಮಾಡಿಸಿದ್ದಾರೆ. ಗಂಡನ ಮನೆಯವರು ವಿಪರೀತ ಮಾನಸಿಕ, ದೈಹಿಕ ಕಿರುಕುಳ ನೀಡಲು ಶುರು ಮಾಡಿದ್ದ ಕಾರಣಕ್ಕೆ ನೊಂದ ಬಾಲಕಿ ವಾಪಸ್​ ತಂದೆಯ ಬಳಿ ಬಂದಿದ್ದಳು. ಈ ವೇಳೆ ತಂದೆ ಕೂಡ ಆಕೆಯನ್ನು ನೋಡಿಕೊಳ್ಳಲು ಹಿಂದೇಟು ಹಾಕಿದ್ದಾನೆ. ಹೀಗಾಗಿ ಅಸಹಾಯಕ ಬಾಲಕಿ ಬೀಡ್ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ (Ambajogai Bus stand) ವಾಸಿಸುತ್ತಿದ್ದಳು.

  • The minor girl was allegedly raped by 400 people in the last 6 months & even policemen are alleged to have sexually exploited the victim: SP Beed Raja Ramasamy

    — ANI (@ANI) November 14, 2021 " class="align-text-top noRightClick twitterSection" data=" ">

ಈ ಸಂದರ್ಭದಲ್ಲಿ ಆಕೆಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡ ಸುಮಾರು 400ಕ್ಕೂ ಹೆಚ್ಚು ಜನರು ಬಾಲಕಿಯ ಮೇಲೆ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದು, ಅತ್ಯಾಚಾರಕ್ಕೆ ಒಳಪಡಿಸಿದ್ದಾರೆ. ಇದರಿಂದ ಬೇಸತ್ತು ಅಂಬಾಜೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಂತ್ರಸ್ತೆ ಮುಂದಾಗಿದ್ದಳು. ಆಕೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸನೋರ್ವ ಕೂಡಾ ಅತ್ಯಾಚಾರವೆಸಗಿದ್ದಾನೆಂದು ಸ್ವತ: ಬಾಲಕಿ ದೂರಿದ್ದಾಳೆ. ಇದಾದ ಬಳಿಕ ಮೇಲಿಂದ ಮೇಲೆ ಬಾಲಕಿ ಪೊಲೀಸ್ ಠಾಣೆಗೆ ತೆರಳಿ ಸಹಾಯಕ್ಕೆ ಮನವಿ ಮಾಡಿದ್ದಾಳೆ. ಹೀಗಿದ್ದರೂ ದೂರು ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ.

ಕೊನೆಗೆ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದಳು. ಈ ವೇಳೆ ಆಕೆಯ ದೂರನ್ನು ಅಂಬಾಜೋಗಿ (Ambajogai Police) ಪೊಲೀಸ್ ಠಾಣೆಯವರು ಸ್ವೀಕರಿಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗ ಬಾಲಕಿ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಹಿಂದಿನ ಕಾಂಗ್ರೆಸ್​ ಸರ್ಕಾರದಿಂದ ಬುಡಕಟ್ಟು ಸಮುದಾಯದ ನಿರ್ಲಕ್ಷ್ಯ: ಪ್ರಧಾನಿ ಮೋದಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬೀಡ್​ ಪೊಲೀಸ್ ಅಧಿಕಾರಿ ರಾಜ್​ ರಾಮಸ್ವಾಮಿ, ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.