ಭೋಪಾಲ್(ಮಧ್ಯಪ್ರದೇಶ): ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾಗಿರುವ ಉನ್ನತ ಸ್ಥಾನದ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಧಿವೇಶನದಲ್ಲಿ ಖುದ್ದಾಗಿ ಮಾಹಿತಿ ನೀಡಿದೆ.
ಮಧ್ಯಪ್ರದೇಶದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ಕಾಂಗ್ರೆಸ್ ಶಾಸಕ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಐಎಎಸ್ - ಐಪಿಎಸ್ ಮತ್ತು ಐಎಫ್ಎಸ್ನ 100ಕ್ಕೂ ಹೆಚ್ಚು ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 35 ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುತ್ತಿದ್ದು, 28 ಮಂದಿ ವಿರುದ್ಧ ಇಒಡಬ್ಲ್ಯೂ ಹಾಗೂ 20 ಐಪಿಎಸ್ ಮತ್ತು 39 ಐಎಫ್ಎಸ್ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ದೂರು ದಾಖಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿರಿ: ಕಳೆದ ಐದು ತಿಂಗಳಲ್ಲಿ 1,076 ಅನ್ನದಾತರು ಆತ್ಮಹತ್ಯೆ: ಸದನದಲ್ಲಿ ಮಾಹಿತಿ ನೀಡಿದ ಮಹಾರಾಷ್ಟ್ರ ಸರ್ಕಾರ
ಇತ್ತೀಚೆಗಷ್ಟೇ ಹಿರಿಯ ಐಎಎಸ್ ಅಧಿಕಾರಿ ಕಲ್ಪನಾ ಶ್ರೀವಾತ್ಸವ್ ವರ್ಗಾವಣೆ ವಿಚಾರ ಸುದ್ದಿಯಲ್ಲಿದ್ದು, ತೋಟಗಾರಿಕಾ ನಿರ್ದೇಶಕರ ಹುದ್ದೆಯಿಂದ ವಜಾಗೊಂಡಿರುವ ಮನೋಜ್ ಅಗರ್ವಾಲ್ ಹೆಸರು ಇದರಲ್ಲಿ ಕೇಳಿ ಬಂದಿದೆ.
ವಿಧಾನಸಭೆಯಲ್ಲಿ ಸಚಿವರು ನೀಡಿರುವ ಮಾಹಿತಿ ಪ್ರಕಾರ, ಭ್ರಷ್ಟಾಚಾರದಲ್ಲಿ ಕಾಣಿಸಿಕೊಂಡಿರುವ ಅನೇಕ ಅಧಿಕಾರಿಗಳು ಈಗಾಗಲೇ ನಿವೃತ್ತಿ ಹೊಂದಿದ್ದು, ಕೆಲವರು ಅಮಾನತುಗೊಂಡಿದ್ದಾರೆ. ಆದರೆ, ಬಸಂತ್ ಕುರ್ರೆ, ಲಲಿತ್ ದಹಿಮಾ, ಜೆಡಿಯು ಶೇಖ್, ಅಶೋಕ್ ಕುಮಾರ್, ವೀರೇಂದ್ರ ಕುಮಾರ್, ಮನೀಶ್ ಸೇಥಿಯಾ, ಪವನ್ ಕುಮಾರ್ ಜೈನ್, ನಿಲಯ್ ಸತ್ಭಯ್ಯಾ, ವಿವೇಕ್ ಸಿಂಗ್, ಪಂಕಜ್ ಶರ್ಮಾ ಸೇವೆ ಸಲ್ಲಿಸುತ್ತಿದ್ದಾರೆಂದು ತಿಳಿಸಿದ್ದಾರೆ.