ETV Bharat / bharat

ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ! - ಇಸ್ರೋ

Moons South Pole: ಚಂದ್ರನ ದಕ್ಷಿಣ ಧ್ರುವದಲ್ಲಿ ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕಿನಿಂದ ರಕ್ಷಿಸಲ್ಪಟ್ಟ ಆಳವಾದ ಕುಳಿಗಳಿದ್ದು, ಇಲ್ಲಿನ ತಾಪಮಾನವು -248 ಡಿಗ್ರಿಗೆ ಇಳಿಯುತ್ತದೆ ಎಂದು ಬಿಸಿಸಿ ವರದಿ ಮಾಡಿದೆ.

Etv Bharat
Etv Bharat
author img

By ETV Bharat Karnataka Team

Published : Aug 23, 2023, 11:02 PM IST

ನವದೆಹಲಿ: ಭಾರತದ ಚಂದ್ರಯಾನ-3ರ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಬುಧವಾರ ಯಶಸ್ವಿಯಾಗಿ ಇಳಿದಿದೆ. ಈಗಾಗಲೇ ಅಮೆರಿಕ, ಚೀನಾ ಹಾಗೂ ರಷ್ಯಾಗಳು ಈ ಸಾಧನೆ ಮಾಡಿದ್ದರೂ, ಭಾರತ ಇಳಿದಿರುವ ದಕ್ಷಿಣ ಧ್ರುವವು ಇಡೀ ಜಗತ್ತಿನ ಗಮನ ಸೆಳೆದಿದೆ. ನಾಸಾದ ಪ್ರಕಾರ ಚಂದ್ರನ ದಕ್ಷಿಣ ಧ್ರುವವು ನಿಗೂಢತೆ, ವಿಜ್ಞಾನ ಮತ್ತು ಸಂಕೀರ್ಣತೆಗಳಿಂದ ಕೂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕಿನಿಂದ ರಕ್ಷಿಸಲ್ಪಟ್ಟ ಆಳವಾದ ಕುಳಿಗಳಿವೆ. ಅಲ್ಲಿ ತಾಪಮಾನವು -248 ಡಿಗ್ರಿ C (-414 ಎಫ್​)ನ ಬೆರಗುಗೊಳಿಸುವ ಕನಿಷ್ಠ ಮಟ್ಟಕ್ಕೆ ಕುಸಿಯಬಹುದು ಎಂದು ಬಿಸಿಸಿ ವರದಿ ಮಾಡಿದೆ. ಗಮನಾರ್ಹ ಸಂಗತಿ ಎಂದರೆ, ಭಾರತದ ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ ತನ್ನ ನಾಲ್ಕು ಕಾಲುಗಳನ್ನು ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವವನ್ನು ನಿರೀಕ್ಷೆಯಂತೆ ಮೃದು ಮತ್ತು ಸುರಕ್ಷಿತವಾಗಿ ಸ್ಪರ್ಶಿಸಿದೆ.

ಇದನ್ನೂ ಓದಿ: ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!

ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವದ ಸುತ್ತಲಿನ ಪ್ರದೇಶವನ್ನು ಅನ್ವೇಷಿಸಲು ಬಯಸುವುದಕ್ಕೆ ಪ್ರಮುಖ ಕಾರಣ ನೀರು ಎಂದು ಬಿಬಿಸಿ ವರದಿ ಹೇಳುತ್ತದೆ. ಲಕ್ಷಾಂತರ ವರ್ಷಗಳಿಂದ ಶೀತ ಧ್ರುವ ಪ್ರದೇಶಗಳಲ್ಲಿ ಹೆಪ್ಪುಗಟ್ಟಿದ ನೀರು ಸಂಗ್ರಹವಾಗಿರಬಹುದು. ನಮ್ಮ ಸೌರವ್ಯೂಹದಲ್ಲಿನ ನೀರಿನ ಇತಿಹಾಸವನ್ನು ವಿಶ್ಲೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ವಿಶಿಷ್ಟ ಮಾದರಿಯನ್ನು ಇದು ಒದಗಿಸಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ ಎಂದು ವರದಿ ಮಾಡಿದೆ.

ಚಂದ್ರನ ಮೇಲಿನ ನೀರಿನ ಮಂಜುಗಡ್ಡೆಯನ್ನು ಹೊರತೆಗೆಯಲು ಸಾಧ್ಯವಾದರೆ ಅದನ್ನು ಗಗನಯಾತ್ರಿಗಳು ಬಳಸಬಹುದೆಂದು ಕೆಲವರು ಭಾವಿಸುತ್ತಾರೆ. ಅಲ್ಲದೇ, ನೀರಿನ ಅಣುಗಳನ್ನು ಹೈಡ್ರೋಜನ್ ಮತ್ತು ಆಮ್ಲಜನಕ ಪರಮಾಣುಗಳಾಗಿ ವಿಭಜಿಸಬಹುದು. ಇದನ್ನು ಬಹುಶಃ ಒಂದು ದಿನ ರಾಕೆಟ್‌ಗಳಿಗೆ ಪ್ರೊಪೆಲ್ಲಂಟ್‌ಗಳಾಗಿ ಬಳಸಬಹುದು ಎಂದು ಬಿಬಿಸಿ ವರದಿ ಹೇಳಿದೆ. ಇನ್ನು, ಚಂದ್ರಯಾನ-3 ಮಿಷನ್ ಯಶಸ್ವಿ ಕುರಿತು ಬಿಬಿಸಿ "ಇದು ಭಾರತಕ್ಕೆ ಒಂದು ದೊಡ್ಡ ಕ್ಷಣ ಮತ್ತು ಇದು ಭಾರತವನ್ನು ಬಾಹ್ಯಾಕಾಶ ಸೂಪರ್​​ಪವರ್ ಪಟ್ಟಿಗೆ ಸೇರಿಸುತ್ತದೆ'' ವರದಿ ಮಾಡಿದೆ.

ಚಂದ್ರನ ಮೇಲೆ ಇಳಿಯುವುದು ಸುಲಭವಲ್ಲ. 2019ರಲ್ಲಿ ಭಾರತ ಮೊದಲ ಪ್ರಯತ್ನ ಮಾಡಿತ್ತು. ಇದು ಸೇರಿ ಹಲವು ಕಾರ್ಯಾಚರಣೆಗಳು ವಿಫಲವಾಗಿವೆ. ಇತ್ತೀಚೆಗೆ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಯೋಜಿಸಿದ್ದ ರಷ್ಯಾ ಕೊನೆ ಕ್ಷಣದಲ್ಲಿ ವಿಫಲವಾಗಿತ್ತು. ಚಂದ್ರನಲ್ಲಿಗೆ ಹಾರಿಬಿಡಲಾಗಿದ್ದ ಲೂನಾ-25 ಬಾಹ್ಯಾಕಾಶ ನೌಕೆಯು ಆಗಸ್ಟ್​ 21ರಂದು ತಾಂತ್ರಿಕ ಸಮಸ್ಯೆಗೆ ತುತ್ತಾಗಿ ಚಂದ್ರನ ಮೇಲೆ ಅಪ್ಪಳಿಸಿತ್ತು. (ಐಎಎನ್​ಎಸ್​)

ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್‌ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.