ಎರ್ನಾಕುಲಂ(ಕೇರಳ): ವ್ಯಾಪಾರಿಯೊಬ್ಬ ತನ್ನ ಮಸಾಜ್ ಪಾರ್ಲರ್ನಲ್ಲಿ ಬರೋಬ್ಬರಿ ಎಂಟು ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿದ್ದಾನೆಂದು ಸಂತ್ರಸ್ತ ಬಾಲಕಿಯೊಬ್ಬರು ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಆತನ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ.
ಎರ್ನಾಕುಲಂನಲ್ಲಿ ವ್ಯಾಪಾರಿಯಾಗಿರುವ ಮಾನ್ಸನ್ ಮಾವುಂಗಲ್ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿದ್ದು, ಇದೀಗ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಆತನ ಮಸಾಜ್ ಪಾರ್ಲರ್ನಲ್ಲಿ ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿದ್ದು, ಅಲ್ಲಿಗೆ ಬರುವ ಗ್ರಾಹಕರ ದೃಶ್ಯ ಸೆರೆ ಹಿಡಿದಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿರಿ: T-20 ವಿಶ್ವಕಪ್ನಲ್ಲಿ ಐರ್ಲೆಂಡ್ ಕನಸು ಭಗ್ನ.. ಸೂಪರ್-12 ಹಂತಕ್ಕೆ ನಮೀಬಿಯಾ ಎಂಟ್ರಿ
ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಬಾಲಕಿ ಮಾಹಿತಿ ನೀಡಿದ್ದು, ವ್ಯಾಪಾರಿ ಮಾನ್ಸನ್ ಪಾರ್ಲರ್ ಒಳಗೆ ಕ್ಯಾಮೆರಾ ಅಳವಡಿಕೆ ಮಾಡಿ ತನ್ನ ಹಾಗೂ ಇತರರ ನಗ್ನ ದೃಶ್ಯ ಸೆರೆ ಹಿಡಿದಿದ್ದಾನೆಂದು ಆರೋಪ ಮಾಡಿದ್ದಾರೆ. ಆತನ ಬ್ಲಾಕ್ ಮೇಲ್ಗೆ ಹೆದರಿ ದೂರು ನೀಡಲು ಯಾರು ಕೂಡ ಮುಂದೆ ಬರುತ್ತಿಲ್ಲ ಎಂದು ಬಾಲಕಿ ಹೇಳಿದ್ದಾಳೆ.
ಬಾಲಕಿ ದೂರಿನ ಆಧಾರದ ಮೇಲೆ ಮಾನ್ಸೂನ್ ಮನೆಯ ಮೇಲೆ ಅಪರಾಧ ವಿಭಾಗದ ತನಿಖಾ ತಂಡ ದಾಳಿ ನಡೆಸಿದಾಗ ಆತ ಅನೇಕ ವಂಚನೆ ಹಾಗೂ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.