ಮುಂಬೈ (ಮಹಾರಾಷ್ಟ್ರ): ಪರಾರಿಯಾಗಿರುವ ಡ್ರಗ್ ಪೆಡ್ಲರ್ ಕೈಲಾಶ್ ರಜಪೂತ್ ದರೋಡೆಕೋರರಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಜೊತೆ ಸಂಬಂಧ ಹೊಂದಿದ್ದು, ಆತನ ಗ್ಯಾಂಗ್ ಗಳಿಸಿದ ಹೆಚ್ಚಿನ ಹಣವನ್ನು ಭಯೋತ್ಪಾದನೆಗೆ ಒದಗಿಸಲು ಬಳಸಲಾಗಿದೆ ಎಂದು ಮಹಾರಾಷ್ಟ್ರದ ಮುಂಬೈ ಪೊಲೀಸರು ಗುರುವಾರ ಇಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು. ಮುಂಬೈ ಅಪರಾಧ ವಿಭಾಗದ ಸುಲಿಗೆ ನಿಗ್ರಹ ದಳ (ಎಇಸಿ) ರಜಪೂತ್‌ನ ಆಪ್ತ ಸಹಾಯಕ ಅಲಿ ಅಸ್ಗರ್ ಶಿರಾಜಿಯನ್ನು ಮೇ 22 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ದುಬೈಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿತ್ತು. ನ್ಯಾಯಾಲಯ ಕಸ್ಟಡಿಯನ್ನು ಜೂನ್ 5ರವರೆಗೆ ವಿಸ್ತರಿಸಿದೆ.
ಶಿರಾಜಿ 2012 ರಿಂದ ರಜಪೂತ್ ಜೊತೆ ಕೆಲಸ ಮಾಡುತ್ತಿದ್ದು, ಈ ಗ್ಯಾಂಗ್ ಮಾದಕ ದ್ರವ್ಯ ಮತ್ತು ನಿಷೇಧಿತ ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿದೆ ಎಂದು ಎಇಸಿ ನ್ಯಾಯಾಲಯಕ್ಕೆ ತಿಳಿಸಿದೆ. ರಜಪೂತ್ ಪರಾರಿಯಾಗಿರುವ ದರೋಡೆಕೋರರಾದ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ರಿಮಾಂಡ್ ಅರ್ಜಿಯಲ್ಲಿ ಹೇಳಲಾಗಿದೆ. ಮಾದಕ ದ್ರವ್ಯ ಮತ್ತು ನಿಷೇಧಿತ ಮಾದಕವಸ್ತುಗಳ ಕಳ್ಳಸಾಗಣೆಯಿಂದ ಪಡೆದ ಹೆಚ್ಚಿನ ಹಣವನ್ನು ಭಯೋತ್ಪಾದಕ ಹಣಕಾಸುಗಾಗಿ ಬಳಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮುಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಬಿಜೆಪಿ ಸೇರಿ ಪಾವನನಾಗಬಹುದು: ಕಾಂಗ್ರೆಸ್ ಟ್ವೀಟ್
ಈ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಶಿರಾಜಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಬಯಸಿದ್ದಾರೆ ಎಂದು ಎಇಸಿ ತಿಳಿಸಿದೆ. 2022 ರಿಂದ ಶಿರಾಜಿ ಯುಕೆ, ಯುಎಸ್ ಮತ್ತು ಆಸ್ಟ್ರೇಲಿಯಾಕ್ಕೆ ನಿಷೇಧಿತ ಡ್ರಗ್ಸ್, ಟ್ರಮಾಡೋಲ್, ಕಾಮಗ್ರಾ, ಸಿಗರೇಟ್, ಹುಕ್ಕಾ ಫ್ಲೇವರ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೆಟಮೈನ್‌ಗಳನ್ನು ಕಳುಹಿಸುತ್ತಿದ್ದಾರೆ ಎಂದು ಎಇಸಿ ಹೇಳಿದೆ. ಎಇಸಿ ಅಧಿಕಾರಿಗಳು ಅವರ ಕಚೇರಿಯ ಕಂಪ್ಯೂಟರ್‌ನಿಂದ ಕೋಡೆಡ್ ಭಾಷೆಯಲ್ಲಿ ಕಳ್ಳಸಾಗಣೆ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿ ಒಳಗೊಂಡ 'ಮ್ಯಾನಿಫೆಸ್ಟೋ' ಫೈಲ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ತನಿಖಾಧಿಕಾರಿಗಳು ಶಿರಾಜಿಯನ್ನು ಈ ನಿಟ್ಟಿನಲ್ಲಿ ಪ್ರಶ್ನಿಸಲು ಬಯಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಂಧಿತ ಮಾದಕವಸ್ತು ಕಳ್ಳಸಾಗಣೆದಾರ ಅಲಿ ಅಸ್ಗರ್ ಶಿರಾಜಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗಾಗಿ ಮುಂಬೈ ಪೊಲೀಸ್ ಅಪರಾಧ ವಿಭಾಗದ ಆ್ಯಂಟಿ ಎಕ್ಸ್‌ಟಾರ್ಶನ್ ಸೆಲ್ (ಎಇಸಿ) ಹಲವಾರು ಸಹಚರರು, ವ್ಯಾಪಾರ ಪಾಲುದಾರರು, ಕಸ್ಟಮ್ಸ್ ಕ್ಲಿಯರಿಂಗ್ ಏಜೆಂಟ್‌ಗಳು ಮತ್ತು ಕೊರಿಯರ್ ಕಂಪನಿ ಅಧಿಕಾರಿಗಳನ್ನು ಕರೆಸಿತ್ತು.
ಎಇಸಿ ಅಧಿಕಾರಿಗಳು ಸಕಿನಾಕಾ ಮೂಲದ ಎಂಟರ್‌ಪ್ರೈಸ್ ಹಸ್ಟ್ಲರ್ಸ್ ಹಾಸ್ಪಿಟಾಲಿಟಿ ಪ್ರವರ್ತಕ ಕೃನಾಲ್ ಓಜಾ ಅವರನ್ನು ಕರೆಸಿದರು ವಿಚಾರಣೆ ನಡೆಸಿದ್ದಾರೆ. ಕೆಲವೊಂದು ಹೂಡಿಕೆಯ ಬಗ್ಗೆಯೂ ಓಜಾರನ್ನು ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಇಸಿ ಅನೇಕರನ್ನು ಪ್ರಶ್ನಿಸಿದೆ.
ಇದನ್ನೂ ಓದಿ: ಕಾಲೇಜು ನಿರ್ಮಿಸಲು 80 ಲಕ್ಷ ಮೌಲ್ಯದ ಭೂಮಿ ದೇಣಿಗೆ ನೀಡಿದ ಮುಸ್ಲಿಂ ಸಹೋದರರು!