ETV Bharat / bharat

ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಮೇಲೆ ಹಲ್ಲೆ.. ಸ್ಥಳೀಯರ ಭೇಟಿಗೆ ಹೋದಾಗ ಘಟನೆ - ಈಟಿವಿ ಭಾರತ ಕರ್ನಾಟಕ

ಕಾಂಗ್ರೆಸ್​ ಪಕ್ಷದ ಶಾಸಕ ಜಿಗ್ನೇಶ್ ಮೇವಾನಿ ಮೇಲೆ ಹಲ್ಲೆ ನಡೆಸಲಾಗಿದ್ದು, ಗುಜರಾತ್​ನ ಅಹಮದಾಬಾದ್​​ನಲ್ಲಿ ಈ ಘಟನೆ ನಡೆದಿದೆ.

MLA Jignesh Mevani attacked
MLA Jignesh Mevani attacked
author img

By

Published : Sep 13, 2022, 12:31 PM IST

ಅಹಮದಾಬಾದ್​​(ಗುಜರಾತ್​): ಸ್ಥಳೀಯರ ಭೇಟಿಗೆ ತೆರಳಿದ್ದ ದಲಿತ ಮುಖಂಡ, ಗುಜರಾತ್​​ ಕಾಂಗ್ರೆಸ್​ ಪಕ್ಷದ ಶಾಸಕ ಜಿಗ್ನೇಶ್ ಮೇವಾನಿ ಮೇಲೆ ಹಲ್ಲೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಹಮದಾಬಾದ್​ನ ವಸ್ಟ್ರಲ್​ ಪ್ರದೇಶದಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಿಸಲಾಗಿದೆ. ಇಲ್ಲಿ ಕಳೆದ ಕೆಲ ತಿಂಗಳಿಂದ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಇದರಿಂದ ಜನರು ತೊಂದರೆಗೊಳಗಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ, ಸ್ಥಳೀಯರನ್ನು ಭೇಟಿ ಮಾಡುವ ಉದ್ದೇಶದಿಂದ ನಿನ್ನೆ ರಾತ್ರಿ ಜಿಗ್ನೇಶ್ ಮೇವಾನಿ ಆ ಪ್ರದೇಶಕ್ಕೆ ತೆರಳಿದ್ದರು. ಅಪಾರ್ಟ್​ಮೆಂಟ್​​ನಲ್ಲಿ ವಾಸವಾಗಿರುವ 100ಕ್ಕೂ ಹೆಚ್ಚು ಕುಟುಂಬಸ್ಥರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

  • Vadgam MLA Jignesh Mevani attacked by Gujarat's ex home minister Pradipsinh Jadega's goon at a public meeting in Ahmedabad's Vastral area in presence of police.

    -social media team pic.twitter.com/28Ya74q0e3

    — Jignesh Mevani (@jigneshmevani80) September 12, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಜಾಮೀನು ಸಿಕ್ಕ ಕೆಲ ನಿಮಿಷದಲ್ಲೇ ಮತ್ತೆ ಬಂಧನಕ್ಕೊಳಗಾದ ಶಾಸಕ ಜಿಗ್ನೇಶ್ ಮೇವಾನಿ

'ನನ್ನ ಮೇಲೆ ಲಾಬು ದೇಸಾಯಿ ಎಂಬುವವರು ಹಲ್ಲೆ ನಡೆಸಿದ್ದಾರೆಂದು' ಮೇವಾನಿ ಆರೋಪ ಮಾಡಿದ್ದಾರೆ. ಗುಜರಾತ್​ನ ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರೊಂದಿಗೆ ಲಾಬು ದೇಸಾಯಿ ಕೆಲಸ ಮಾಡಿದ್ದಾರೆ. ಗುಜರಾತ್​ನಲ್ಲಿ ಮುಂದಿನ ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​, ಬಿಜೆಪಿ, ಆಮ್​ ಆದ್ಮಿ ಸೇರಿದಂತೆ ಎಲ್ಲ ಪಕ್ಷಗಳು ಜನರ ಮನವೊಲಿಕೆ ಕಾರ್ಯ ಮಾಡ್ತಿವೆ.

  • वस्त्राल के नर्मदा अपार्टमेंट में @jigneshmevani80 व हमारी सभा चल रही थी, सभा में पूर्व गृह मंत्री @PradipsinhGuj के आदमी लाभु देसाई द्वारा हमला किया गया और सभा बर्खास्त करने के लिए जबरजस्ती की गई। पुलिस की उपस्थिति में हुआ ये हमला, गुजरात में क़ानून व्यवस्था की स्थिति दर्शाता है pic.twitter.com/tNK5FKs9iI

    — Hitendra Pithadiya हितेंद्र હિતેન્દ્ર ہٹندر 🇮🇳 (@HitenPithadiya) September 12, 2022 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್ ಮಾಡಿರುವ ಆರೋಪದ ಮೇಲೆ ಕಳೆದ ಕೆಲ ದಿನಗಳ ಹಿಂದೆ ಜಿಗ್ನೇಶ್ ಮೇವಾನಿ ಬಂಧನಕ್ಕೊಳಗಾಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಅವರು ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.