ETV Bharat / bharat

ಓವೈಸಿ ನವದೆಹಲಿ ನಿವಾಸದ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ.. ಪೊಲೀಸರಿಗೆ ದೂರು

author img

By

Published : Feb 20, 2023, 7:40 AM IST

ಎಐಎಂ ಮುಖ್ಯಸ್ಥ ಅಸಾದುದ್ದೀನ್​​ ಓವೈಸಿ ನವದೆಹಲಿ ನಿವಾಸ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಓವೈಸಿ ನವದೆಹಲಿ ನಿವಾಸದ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ.. ಪೊಲೀಸರಿಗೆ ದೂರು
http://10.10.50.90//ANI/20-February-2023/20230220020200_2002a_1676839323_377.xml

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಆಲ್ ಇಂಡಿಯಾ ಮಜ್ಲಿಸ್ -ಎ-ಇತ್ತೆಹಾದುಲ್ ಮುಸ್ಲಿಮೀನ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ನಿವಾಸಕ್ಕೆ ಭಾನುವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ಆಗಮಿಸಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಎಐಎಂಐಎಂ ಮುಖ್ಯಸ್ಥರು ಈ ಸಂಬಂಧ ನವದೆಹಲಿ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ತಮ್ಮ ದೆಹಲಿ ನಿವಾಸದ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಓವೈಸಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ಎಐಎಂಐಎಂ ಮುಖ್ಯಸ್ಥರ ನಿವಾಸ ಮೇಲೆ ಸಂಜೆ 5.30ರ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

  • My Delhi residence has been attacked again. This is the fourth incident since 2014. Earlier tonight, I returned from Jaipur & was informed by my domestic help that a bunch of miscreants pelted stones that resulted in broken windows. @DelhiPolice must catch them immediately pic.twitter.com/vOkHl8IcNH

    — Asaduddin Owaisi (@asadowaisi) February 19, 2023 " class="align-text-top noRightClick twitterSection" data=" ">

ಇದನ್ನು ಓದಿ:ಶಿವಸೇನಾ ಹೆಸರು, ಚಿಹ್ನೆ ಖರೀದಿಗೆ 2 ಸಾವಿರ ಕೋಟಿ ಡೀಲ್: ಸಂಜಯ್ ರಾವತ್ ಗಂಭೀರ ಆರೋಪ

ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಡಿಸಿಪಿ ನೇತೃತ್ವದ ದೆಹಲಿ ಪೊಲೀಸರ ತಂಡ ಅವರ ನಿವಾಸಕ್ಕೆ ಭೇಟಿ ನೀಡಿ ಸ್ಥಳದಿಂದಲೇ ಸಾಕ್ಷ್ಯ ಸಂಗ್ರಹಿಸಿದೆ. ದುಷ್ಕರ್ಮಿಗಳ ಗುಂಪೊಂದು ತಮ್ಮ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳನ್ನು ಹಾನಿಗೊಳಿಸಿದೆ ಎಂದು ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಓವೈಸಿ ಆರೋಪಿಸಿದ್ದಾರೆ. "ನಾನು ರಾತ್ರಿ 11:30 ಕ್ಕೆ ನನ್ನ ನಿವಾಸಕ್ಕೆ ಬಂದಾಗ ಮನೆಯ ಕಿಟಕಿಗಳ ಗಾಜು ಒಡೆದಿತ್ತು. ಹಾಗೂ ಪ್ರಾಂಗಣದ ಸುತ್ತಮುತ್ತ ಕಲ್ಲುಗಳು ಬಿದ್ದಿರುವುದು ಕಂಡು ಬಂತು. ಈ ಬಗ್ಗೆ ನನ್ನ ಮನೆಯ ಸಹಾಯಕರು ಮಾಹಿತಿ ನೀಡಿದರು. ದುಷ್ಕರ್ಮಿಗಳ ಗುಂಪು ಸಂಜೆ 5:30 ರ ಸುಮಾರಿಗೆ ನಿವಾಸದ ಮೇಲೆ ಕಲ್ಲು ಎಸೆದಿದೆ ಎಂದು ಓವೈಸಿ ಘಟನೆಯ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಮದ್ಯ ಸೇವೆನೆಗೆ ಹಣ ನೀಡುವಂತೆ ಪೀಡಿಸಿದ್ದಕ್ಕೆ ಕೊಲೆ - ಆರೋಪಿ ಬಂಧನ

ತಮ್ಮ ನಿವಾಸದ ಮೇಲೆ ಇದು ನಾಲ್ಕನೇ ದಾಳಿಯಾಗಿದೆ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಹೇಳಿದ್ದಾರೆ. ನನ್ನ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳಿದ್ದು, ಅದನ್ನು ನೀವು ಪರಿಶೀಲಿಸಬಹುದು ಮತ್ತು ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಬೇಕು. ಇಂತಹ ವಿಧ್ವಂಸಕ ಕೃತ್ಯಗಳು ಮುಂದುವರಿಯಬಾರದು. ಇದು ಹೆಚ್ಚಿನ ಭದ್ರತಾ ವಲಯವಾಗಿದ್ದರೂ ದಾಳಿ ಆಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಓವೈಸಿ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಪತ್ರದಲ್ಲಿ ಓವೈಸಿ ಒತ್ತಾಯಿಸಿದ್ದಾರೆ.

ಇದನ್ನು ಓದಿ: ನಿಕ್ಕಿ ಯಾದವ್​ ಹತ್ಯೆ ಪ್ರಕರಣ: ವಿವಾಹ ಸಾಕ್ಷಿ ಪಡೆಯಲು ಆರೋಪಿಯೊಂದಿಗೆ ಆರ್ಯ ಸಮಾಜ ಮಂದಿರಕ್ಕೆ ತೆರಳಿದ್ದ ಪೊಲೀಸರು

ಇದನ್ನು ಓದಿ: ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ: ಸರ್ಕಾರಿ ನೌಕರರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.