ETV Bharat / bharat

ಬಿಹಾರದಲ್ಲಿ ಗುಂಡಿನ ದಾಳಿ: ಖ್ಯಾತ ಉದ್ಯಮಿ, ಅಂಗರಕ್ಷಕ ಸಾವು.. ಮೂವರಿಗೆ ಗಾಯ - etv bharta kannada

ನಿನ್ನೆ ರಾತ್ರಿ ಬಿಹಾರದಲ್ಲಿ ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಖ್ಯಾತ ಉದ್ಯಮಿ ಸಾವನ್ನಪ್ಪಿದ್ದಾರೆ.

Etv Bharat
ಬಿಹಾರದಲ್ಲಿ ಗುಂಡಿನ ದಾಳಿ
author img

By

Published : Jul 22, 2023, 10:31 AM IST

ಮುಜಾಫರ್‌ಪುರ (ಬಿಹಾರ್): ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿಗೆ ಖ್ಯಾತ ಪ್ರಾಪರ್ಟಿ ಡೀಲರ್ ಉದ್ಯಮಿ ಮತ್ತು ಆತನ ಅಂಗರಕ್ಷಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಮೃತ ಉದ್ಯಮಿಯನ್ನು ಅಶುತೋಷ್ ಶಾಹಿ ಎಂದು ಗುರುತಿಸಲಾಗಿದೆ. ಇವರು ಪ್ರಾಪರ್ಟಿ ಡೀಲರ್ ಉದ್ಯಮ ನಡೆಸುತ್ತಿದ್ದರು.

ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದ್ದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ತಿ ವಿವಾದವೇ ಹತ್ಯೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 2 ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಘಟನೆ ವಿವರ: ಖ್ಯಾತ ಪ್ರಾಪರ್ಟಿ ಡೀಲರ್‌ ಅಶುತೋಷ್‌ ಶಾಹಿ ವಕೀಲರೊಬ್ಬರ ಮನೆಗೆ ಹೋಗಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ವಕೀಲರ ಮನೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ವೇಳೆ ಅಶುತೋಷ್ ಶಾಹಿಗೆ ಗುಂಡು ತಾಗಿ ಕೆಳಗೆ ಬಿದ್ದಿದ್ದಾರೆ. ಅವರ ರಕ್ಷಣೆಗೆ ಬಂದ ಅಂಗರಕ್ಷಕರ ಮೇಲೂ ದಾಳಿ ನಡೆಸಿದ್ದಾರೆ. ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಗರಕ್ಷಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಅಶುತೋಷ್ ಸಾಹಿ ಮತ್ತು ಅಂಗರಕ್ಷಕರ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಸ್ಥಳಕ್ಕೆ ಆಗಮಿಸುವ ವೇಳೆಗೆ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಉಪ ಪೊಲೀಸ್​ ವರಿಷ್ಠಾಧಿಕಾರಿ ರಾಕೇಶ್​ ಕುಮಾರ್​ ಮಾಹಿತಿ ನೀಡಿದ್ದು, ರಾತ್ರಿ ಸಮಯ ನಡೆದ ಗುಂಡಿನ ದಾಳಿಯಲ್ಲಿ ಉದ್ಯಮಿ ಅಶುತೋಷ್ ಶಾಹಿ ಮತ್ತು ಅವರ ಅಂಗರಕ್ಷಕ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ವಕೀಲರು ಸೇರಿದಂತೆ ಒಟ್ಟು ಮೂವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಖಬ್ರಾ ನಿವಾಸಿ ಅಂಗರಕ್ಷಕ ಓಂಕಾರ್ ನಾಥ್ ಸಿಂಗ್, ಲಕ್ಡಿಧಾಯ್ ನಿವಾಸಿ ಅಂಗರಕ್ಷಕ ರಾಹುಲ್ ಕುಮಾರ್ ಮತ್ತು ಹಿರಿಯ ವಕೀಲ ಸೈಯದ್ ಕಾಸಿಂ ಹುಸೇನ್ ಎಂದು ಗುರುತಿಸಲಾಗಿದೆ.

ಒಟ್ಟು ಐವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಅರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. 4 ಜನ ಸೇರಿ ಈ ಕೃತ್ಯ ಎಸಗಿದ್ದಾರೆ ತಿಳಿದು ಬಂದಿದೆ. ಎಫ್‌ಎಸ್‌ಎಲ್ ತಂಡವು ಘಟನಾ ಸ್ಥಳದಲ್ಲಿ ತನಿಖೆ ನಡೆಸಲಿದೆ. ಪ್ರಾಥಮಿಕ ತನಿಖೆಯಲ್ಲಿ ಆಸ್ತಿ ವಿವಾದವೇ ಇದಕ್ಕೆ ಕಾರಣ ತಿಳಿದು ಬಂದಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಭಾರಿ ಕಟ್ಟೆಚ್ಚರ: ಈವರೆಗೆ 6 ಸಾವಿರ ಕೇಸ್, 140 ಕ್ಕೂ ಅಧಿಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.