ETV Bharat / bharat

ಹಳೇ ವೈಷಮ್ಯ: ವ್ಯಕ್ತಿಯ ಕೈ - ಬೆರಳು ಕತ್ತರಿಸಿ ಆ್ಯಸಿಡ್​ ಸುರಿದು ವಿಕೃತಿ ಮೆರೆದ ಕಿರಾತಕರು - ಉತ್ತರಪ್ರದೇಶ ಇತ್ತೀಚಿನ ಸುದ್ದಿ

"ದುಷ್ಕರ್ಮಿಗಳು ಹಳೆಯ ದ್ವೇಷದಿಂದಾಗಿ ನನ್ನ ಗಂಡನ ಒಂದು ಕೈಯನ್ನು ಕೊಡಲಿಯಿಂದ ಕತ್ತರಿಸಿ ಆತನ ಕಾಲ್ಬೆರಳುಗಳನ್ನು ತುಂಡರಿಸಿ ದೇಹದ ಮೇಲೆ ಆಸಿಡ್ ಸುರಿದಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದಾರೆ

mathura
ವ್ಯಕ್ತಿಯ ಕೈ-ಬೆರಳು ಕತ್ತರಿಸಿ ಆ್ಯಸಿಡ್​ ಸುರಿದು ವಿಕೃತಿ ಮೆರೆದ ಕಿರಾತಕರು
author img

By

Published : Sep 15, 2021, 8:43 AM IST

ಮಥುರಾ(ಉತ್ತರಪ್ರದೇಶ): ಪತಿಯ ಕೈ ಮತ್ತು ಕಾಲಬೆರಳುಗಳನ್ನು ಕೊಡಲಿಯಿಂದ ಕತ್ತರಿಸಿ, ಆ್ಯಸಿಡ್​ ಸುರಿದು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಜಿಲ್ಲೆಯ ರಿಫೈನರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನ ಶಂಶಾಬಾದ್ ಗ್ರಾಮದಲ್ಲಿ ನಡೆದಿದೆ.

"ಗ್ರಾಮದಲ್ಲಿ ವಾಸಿಸುತ್ತಿದ್ದ ದುಷ್ಕರ್ಮಿಗಳು ಹಳೆಯ ದ್ವೇಷದಿಂದಾಗಿ ನನ್ನ ಗಂಡನ ಒಂದು ಕೈಯನ್ನು ಕೊಡಲಿಯಿಂದ ಕತ್ತರಿಸಿ ಆತನ ಕಾಲ್ಬೆರಳುಗಳನ್ನು ತುಂಡರಿಸಿ ದೇಹದ ಮೇಲೆ ಆ್ಯಸಿಡ್​ ಸುರಿದಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆಯಷ್ಟೇ ಆ ಮಹಿಳೆಯ ಮೇಲೆಯೂ ದರೋಡೆಕೋರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಆ ಬಳಿಕ ಕಿರಾತಕರು ಮತ್ತಷ್ಟು ಹಿಂಸೆ ನೀಡಲು ಪ್ರಾರಂಭಿಸಿದ್ದರಂತೆ. ಇನ್ನು ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವ ಮೂಲಕ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರನ್ನು ಆಗ್ರಹಿಸಿದ್ದಾರೆ.

ಘಟನೆ ಹಿನ್ನೆಲೆ: ಮಥುರಾ ಜಿಲ್ಲೆಯ ರಿಫೈನರಿ ಪೊಲೀಸ್ ಠಾಣೆ ವ್ಯಾಪ್ತಿಯ ಧನ ಶಂಶಾಬಾದ್ ಹಳ್ಳಿಯ ನಿವಾಸಿಯಾದ ಮೀರಾ ಎಂಬವರು ಕೆಲವು ದಿನಗಳ ಹಿಂದೆ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಅದೇ ಗ್ರಾಮದ ಕೆಲವರು ಅಡ್ಡಗಟ್ಟಿ ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಈ ಬಳಿಕ ಮೀರಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಅದೇ ಸಮಯದಲ್ಲಿ ದೂರನ್ನು ಹಿಂಪಡೆದುಕೊಳ್ಳುವಂತೆ ಒತ್ತಡ ಬಂದಿದೆ. ಆದರೆ, ಅದಕ್ಕೆ ಒಪ್ಪದ ಸಂದರ್ಭದಲ್ಲಿ ಮೀರಾ ಪತಿ ರಮೇಶ್​ನ ಮೇಲೆ ಈ ರೀತಿಯಲ್ಲಿ ದೌರ್ಜನ್ಯ ಎಸಗಲಾಗಿದೆ. ಅಷ್ಟೇ ಅಲ್ಲದೆ ಕೊಲೆ ಬೆದರಿಕೆಯನ್ನೂ ಸಹ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.