ETV Bharat / bharat

ಯುವಕನೊಂದಿಗೆ ಓಡಿ ಹೋದ ಯುವತಿ: ಪ್ರತೀಕಾರ ತೀರಿಸಿಕೊಳ್ಳಲು ಅಪ್ರಾಪ್ತೆ ಮೇಲೆ ಅತ್ಯಾಚಾರ - ಮೊರಾದಾಬಾದ್​ ಕ್ರೈಂ ನ್ಯೂಸ್​​

ಮಗಳು ಓಡಿಹೋಗಿರುವ ಆಕ್ರೋಶದಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಕುಟುಂಬ ಯುವಕನ ಕುಟುಂಬವನ್ನೇ ಅಪಹರಣ ಮಾಡಿ ಅದರಲ್ಲಿದ್ದ ಅಪ್ರಾಪ್ತೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

Minor Girl rape
Minor Girl rape
author img

By

Published : Jul 6, 2021, 10:36 PM IST

Updated : Jul 8, 2021, 3:36 PM IST

ಮೊರಾದಾಬಾದ್​(ಉತ್ತರ ಪ್ರದೇಶ): ಪೋಷಕರ ಎದುರೇ ಅಪ್ರಾಪ್ತೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳಿಗೋಸ್ಕರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?: ಕಳೆದ 10 ದಿನಗಳ ಹಿಂದೆ ಅಪ್ರಾಪ್ತೆಯ ಸಹೋದರನೋರ್ವ ತಾನು ಪ್ರೀತಿಸಿದ್ದ ಯುವತಿ ಜತೆ ಪರಾರಿಯಾಗಿದ್ದ. ಎಷ್ಟು ಹುಡುಕಿದರೂ ಇವರು ಸಿಕ್ಕಿರಲಿಲ್ಲ. ಇದರಿಂದ ಆಕ್ರೋಶಗೊಂಡಿರುವ ಯುವತಿ ಪೋಷಕರು ಯುವಕನ ಕುಟುಂಬಕ್ಕೆ ಪಾಠ ಕಲಿಸಲು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಅವರ ಮನೆಗೆ ತೆರೆಳಿ ಇಡೀ ಕುಟುಂಬದ ಸದಸ್ಯರನ್ನು ಅಪಹರಣ ಮಾಡಿದ್ದಾರೆ. ಇದೇ ವೇಳೆ ಓಡಿಹೋಗಿರುವ ಸಹೋದರನ ಅಪ್ರಾಪ್ತ ಸಹೋದರಿ ಮೇಲೆ ಕುಟುಂಬದ ಸದಸ್ಯರ ಎದುರೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಇದಾದ ಬಳಿಕ ಆಕೆಗಿಂತಲೂ ವಯಸ್ಸಿನಲ್ಲಿ ಎರಡು ಪಟ್ಟು ಹೆಚ್ಚಿರುವ ವ್ಯಕ್ತಿ ಜತೆ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿರಿ: ಗಂಗೂಲಿಗೆ ಬೌಲಿಂಗ್​​ ಮಾಡಿದ್ದ ರಣಜಿ​ ಆಟಗಾರನಿಂದ ಹೊಟ್ಟೆ ಪಾಡಿಗೆ 'ದಾಲ್​ ಪುರಿ' ಮಾರಾಟ

ಸಂತ್ರಸ್ತೆ ಕುಟುಂಬ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಅತ್ಯಾಚಾರದ ಪ್ರಕರಣ ದಾಖಲು ಮಾಡಿದ್ದಾರೆ. ಎಂಟು ಜನರ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳಿಗೋಸ್ಕರ ಶೋಧಕಾರ್ಯ ನಡೆಸಲಾಗುತ್ತಿದೆ. ಇನ್ನು ಓಡಿಹೋಗಿರುವ ಜೋಡಿ ಬಗ್ಗೆ ಕೂಡ ಇಲ್ಲಿಯವರೆಗೆ ಯಾವುದೇ ರೀತಿಯ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Jul 8, 2021, 3:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.