ETV Bharat / bharat

ವಿದ್ಯಾರ್ಥಿನಿ ಅಪಹರಿಸಿ ಟ್ರಕ್‌ನಲ್ಲಿ ಸಾಮಾಹಿಕ ಅತ್ಯಾಚಾರ; ಕೊಲೆಗೈದು ಚಂಬಲ್‌ ನದಿಗೆಸೆದ ಕ್ರೂರಿಗಳು! - Gwalior Gangrape news

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೋರ್ವಳನ್ನು ಅಪಹರಿಸಿರುವ ಸ್ನೇಹಿತ ಸೇರಿದಂತೆ ಆತ ಸಹಚರರು ಎರಡು ದಿನಗಳ ಕಾಲ ಅತ್ಯಾಚಾರವೆಸಗಿದ್ದು, ನಂತರ ಕೊಲೆ ಮಾಡಿ ಆಕೆಯನ್ನು ನದಿಗೆಸೆದ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.

Minor girl allegedly raped in Gwalior
Minor girl allegedly raped in Gwalior
author img

By

Published : Jan 17, 2022, 5:19 PM IST

ಗ್ವಾಲಿಯರ್(ಮಧ್ಯಪ್ರದೇಶ): ವಿದ್ಯಾರ್ಥಿನಿಯೋರ್ವಳನ್ನು ಅಪಹರಣ ಮಾಡಿರುವ ಆಕೆಯ ಸ್ನೇಹಿತನೋರ್ವ ತನ್ನ ಇತರೆ ಸಹಚರರೊಂದಿಗೆ ಸೇರಿಕೊಂಡು ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಕೃತ್ಯದ ಬಳಿಕ ಪ್ರಕರಣ ಮುಚ್ಚಿ ಹಾಕಲು ಕೊಲೆಗೈದು, ಚಂಬಲ್​ ನದಿಯಲ್ಲಿ ಮೃತದೇಹ ಎಸೆದಿದ್ದಾರೆ.

ಪ್ರಕರಣದ ವಿವರ:

ವಿದ್ಯಾರ್ಥಿನಿಯೋರ್ವಳನ್ನು ಭೇಟಿಯಾಗುವ ನೆಪದಲ್ಲಿ ಆಕೆಗೆ ಸ್ನೇಹಿತನೋರ್ವ ಕರೆ ಮಾಡಿದ್ದಾನೆ. ಈ ವೇಳೆ ಸ್ನೇಹಿತ ಹೇಳಿದ ಸ್ಥಳಕ್ಕೆ ಬಾಲಕಿ ಬರುತ್ತಿದ್ದಂತೆ ಸಹಚರರ ಸಹಾಯದಿಂದ ಅಪಹರಿಸಿದ್ದಾರೆ. ಇದಾದ ಬಳಿಕ ಎರಡು ದಿನಗಳ ಕಾಲ ಲಾರಿಯಲ್ಲಿ ಬಚ್ಚಿಟ್ಟು, ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣ ಮುಚ್ಚಿ ಹಾಕಲು ಕೊಲೆ ಮಾಡಿದ್ದು, ಚಂಬಲ್​ ನದಿಗೆ ಮೃತದೇಹ ಎಸೆದಿದ್ದಾರೆ.

ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಬಸ್​​ನಲ್ಲೇ ಅತ್ಯಾಚಾರ: ಕಂಡಕ್ಟರ್​, ಡ್ರೈವರ್​ ಅರೆಸ್ಟ್​

ಬಾಲಕಿ ನಾಪತ್ತೆಯಾಗಿರುವುದಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಬಳಿಕ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಬಾಲಕಿ ಜೊತೆ ಆಕೆಯ ಸ್ನೇಹಿತನೋರ್ವ ಇರುವುದನ್ನು ಗ್ರಾಮಸ್ಥರು ನೋಡಿರುವುದಾಗಿ ಪೊಲೀಸರಿಗೆ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಬಳಕೆ ಮಾಡಿರುವ ಮೊಬೈಲ್​ ಫೋನ್ ಪರಿಶೀಲನೆ ನಡೆಸಿದಾಗ ಯುವಕನ ಜೊತೆಗಿನ ಸಂಭಾಷಣೆ ಹಾಗೂ ಸಂದೇಶಗಳು ಕಂಡು ಬಂದಿವೆ. ಇದರ ಆಧಾರದ ಮೇಲೆ ಅತನ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.

ಕಳೆದ ವರ್ಷ ಡಿಸೆಂಬರ್​ 27ರಂದು ಈ ಘಟನೆ ನಡೆದಿದೆ. ಬಾಲಕಿಯನ್ನು ಆಕಾಶ್​, ಗೋಲು ಹಾಗೂ ಮತ್ತೋರ್ವ ವ್ಯಕ್ತಿ ಅಪಹರಣ ಮಾಡಿ, ಟ್ರಕ್​​ನಲ್ಲಿ ಕೂಡಿ ಹಾಕಿದ್ದಾರೆ. ಎರಡು ದಿನಗಳ ಕಾಲ ಅದರಲ್ಲೇ ಅತ್ಯಾಚಾರವೆಸಗಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದಂತೆ ಸಿಕ್ಕಿಬೀಳುವ ಭಯದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ಚಂಬಲ್​ ನದಿಯಲ್ಲಿ ಮೃತದೇಹ ಎಸೆದಿರುವುದಾಗಿ ತಿಳಿಸಿದ್ದಾರೆ.

ಬಾಲಕಿ ಮೃತದೇಹಕ್ಕಾಗಿ ಇದೀಗ ಚಂಬಲ್​ ನದಿಯಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಇಲ್ಲಿಯವರೆಗೆ ಆಕೆಯ ಶವ ಪತ್ತೆಯಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.