ಹೈದರಾಬಾದ್ : ಮೇಡ್ಚಲ್ ಜಿಲ್ಲೆಯ ಘಟಕೇಸರ್ ಉಪನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಸಚಿವರು ಮಾತನಾಡುತ್ತಿದ್ದಾಗ ಜನ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವೇಳೆ ಸಚಿವರು ತಮ್ಮ ಭಾಷಣವನ್ನು ಮಧ್ಯದಲ್ಲಿ ನಿಲ್ಲಿಸಿ ಹೋಗುತ್ತಿದ್ದಾಗ ಬೆಂಗಾವಲು ಪಡೆಯ ಮೇಲೆ ನೆರೆದಿದ್ದ ಜನ ಚಪ್ಪಲಿ, ಕುರ್ಚಿಗಳಿಂದ ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಲ್ಲಾರೆಡ್ಡಿ, ದಾಳಿ ಹಿಂದೆ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿಯವರ ಕೈವಾಡ ಅಡಗಿದೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ರಾಜ್ಯ ಕಾರ್ಮಿಕ ಸಚಿವ ಮಲ್ಲಾರೆಡ್ಡಿ ಪ್ರತಿಕ್ರಿಯಿಸಿ, ತಮ್ಮ ಮೇಲಿನ ಹಲ್ಲೆಯ ಹಿಂದೆ ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ಕೈವಾಡವಿದೆ ಎಂದು ಆರೋಪಿಸಿದರು. ರೇವಂತ್ ರೆಡ್ಡಿ ಪ್ರಜಾಪ್ರಭುತ್ವ ವಿರೋಧಿ ಆಚರಣೆಗಳನ್ನು ಪ್ರಶ್ನಿಸಿದಕ್ಕೆ ನಮ್ಮ ಮೇಲೆ ದಾಳಿ ನಡೆಸಿದ್ದಾರೆ. ಇಂತಹವುದಕ್ಕೆಲ್ಲ ನಾವು ಹೆದವುದಿಲ್ಲ. ಈ ಬಗ್ಗೆ ರೇವಂತ್ ವಿರುದ್ಧ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದರು.
ಓದಿ: ಮತಾಂತರ ಆರೋಪ: ಚಿಕ್ಕಮಗಳೂರಲ್ಲಿ ಬಜರಂಗದಳ ಕಾರ್ಯಕರ್ತರಿಂದ ಹೋಟೆಲ್ ಮೇಲೆ ದಾಳಿ
ಸಚಿವ ಮಲ್ಲಾರೆಡ್ಡಿ ಮೇಲೆ ದಾಳಿ : ರಾಜ್ಯ ಕಾರ್ಮಿಕ ಸಚಿವ ಮಲ್ಲಾರೆಡ್ಡಿ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ರಾತ್ರಿ ದಾಳಿ ನಡೆದಿತ್ತು. ಪೊಲೀಸರು ಜಾಗರೂಕತೆಯಿಂದ ಕಾರ್ಯನಿರ್ವಹಿಸಿ ಅವರನ್ನು ಸುರಕ್ಷಿತವಾಗಿ ಹೊರ ತಂದಿದ್ದರು. ಮೇಡ್ಚಲ್-ಮಲ್ಕಾಜಗಿರಿ ಜಿಲ್ಲೆಯ ಘಟಕೇಸರ ಉಪನಗರದಲ್ಲಿ ಭಾನುವಾರ ಸಂಜೆ ನಡೆದ ಸಾರ್ವಜನಿಕ ಸಭೆಯಲ್ಲಿ ಸಚಿವರ ಭಾಷಣಕ್ಕೆ ಕೆಲ ಕಾರ್ಯಕರ್ತರು ಅಡ್ಡಿ ಪಡಿಸಿದ್ದರು. ನಂತರ ವೇದಿಕೆಯಿಂದ ಕೆಳಗಿಳಿದ ಸಚಿವರು ಬೆಂಗಾವಲು ಪಡೆಯತ್ತ ತೆರಳಿದರು. ಈ ವೇಳೆ ಅಲ್ಲಿದ್ದ ಕೆಲ ಕಿಡಿಗೇಡಿಗಳು ಕುರ್ಚಿ, ಚಪ್ಪಲಿ ಎಸೆದು ದೌರ್ಜನ್ಯ ಮೆರೆದಿದ್ದರು. ಸಭೆಯಲ್ಲಿ ನಾನಾ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಭಾನುವಾರ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಹೊಗಳಿದ್ದಕ್ಕಾಗಿ ಜನರ ಆಕ್ರೋಶವನ್ನು ಎದುರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ತಮ್ಮ ಮೇಲೆ ಹಲ್ಲೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿದರು.
ರೇವಂತ್ ತನ್ನನ್ನು ಕೊಲೆ ಮಾಡಲು ಯೋಜನೆ ಹಾಕಿದ್ದ ಎಂದು ಹೇಳಿದ್ದಾನೆ. 8 ವರ್ಷಗಳಿಂದ ರೇವಂತ್ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಮಲ್ಲಾ ರೆಡ್ಡಿ ಆರೋಪಿಸಿದ್ದಾರೆ. ಸಂಸದ ರೇವಂತ್ ರೆಡ್ಡಿ ಅವರನ್ನು ಅಪರಾಧ ಪ್ರಕರಣಗಳ ವಿಚಾರಣೆ ನಡೆಸಿ ಜೈಲಿಗೆ ಹಾಕಲಾಗುವುದು. ನನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ' ಎಂದು ಸಚಿವ ಮಲ್ಲಾರೆಡ್ಡಿ ಹೇಳಿದರು.