ETV Bharat / bharat

ಸ್ಕ್ರ್ಯಾಪ್​ ಮೆಟೀರಿಯಲ್​​ನಿಂದ ₹30 ಸಾವಿರ ವೆಚ್ಚದಲ್ಲಿ ನಿರ್ಮಾಣವಾಯ್ತು ಬೈಕ್​.. ಮಗನ ಹುಟ್ಟುಹಬ್ಬಕ್ಕೆ ​ಅದುವೇ ಗಿಫ್ಟ್​!

ಮಗನ ಹುಟ್ಟುಹಬ್ಬಕ್ಕಾಗಿ ಮೆಕ್ಯಾನಿಕ್ ತಂದೆಯೋರ್ವ ತಮ್ಮ ಗ್ಯಾರೇಜ್​ನಲ್ಲಿ ಸಿಕ್ಕ ಸಣ್ಣಪುಟ್ಟ ಸ್ಕ್ರ್ಯಾಪ್​ ವಸ್ತುಗಳಿಂದಲೇ ಮಿನಿ ಬೈಕ್ ತಯಾರಿಸಿದ್ದಾನೆ..

Mini rajdoot bike made from scrap in Patna

author img

By

Published : Apr 9, 2022, 8:38 PM IST

ಪಾಟ್ನಾ(ಬಿಹಾರ) : ಮಕ್ಕಳ ಹುಟ್ಟುಹಬ್ಬಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಹೊಸ ವಿನ್ಯಾಸದ ಬೈಕ್​​ಗಳನ್ನ​​ ಪೋಷಕರು ಕೊಡಿಸುವುದು ಸರ್ವೆ ಸಾಮಾನ್ಯ. ಆದರೆ, ಬಿಹಾರದ ಪಾಟ್ನಾದಲ್ಲಿನ ವ್ಯಕ್ತಿಯೋರ್ವ ತಮ್ಮ ಮಗನಿಗೆ ಸ್ಕ್ರ್ಯಾಪ್​​ನಿಂದಲೇ ವಿನ್ಯಾಸಗೊಳಿಸಿರುವ ವಿನೂತನ ಬೈಕ್​​​ ಉಡುಗೊರೆಯಾಗಿ ನೀಡಿದ್ದಾರೆ. ಅತ್ಯಂತ ಕಡಿಮೆ ಬೆಲೆಯಲ್ಲಿ ತಯಾರುಗೊಂಡಿರುವ ಈ ಬೈಕ್​​ ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಸ್ಕ್ರ್ಯಾಪ್​ ಮೆಟೀರಿಯಲ್​​ನಿಂದ ₹30 ಸಾವಿರ ವೆಚ್ಚದಲ್ಲಿ ನಿರ್ಮಾಣವಾಯ್ತು ಬೈಕ್..

ಕಳೆದ 39 ವರ್ಷಗಳ ಹಿಂದೆ ಭಾರತದಲ್ಲಿ ರಾಜ್‌ದೂತ್‌ ಬೈಕ್‌ ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಆದರೆ, ಕಾಲಕ್ರಮೇಣ ಅದು ಕಣ್ಮರೆಯಾಯಿತು. ಇದೀಗ ಅದನ್ನೇ ಹೋಲುವ ಮಿನಿ ಬೈಕ್​ವೊಂದನ್ನ ಮೆಕ್ಯಾನಿಕ್​​ವೋರ್ವರು ಸ್ಕ್ರ್ಯಾಪ್​ಗಳ ಸಹಾಯದಿಂದ ತಯಾರಿಸಿದ್ದಾರೆ. ಅದಕ್ಕಾಗಿ ಸುಮಾರು 30 ರಿಂದ 40 ಸಾವಿರ ರೂಪಾಯಿ ಖರ್ಚು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

Mini rajdoot bike made from scrap in Patna
ಮಗನ ಹುಟ್ಟುಹಬ್ಬಕ್ಕಾಗಿ ನಿರ್ಮಾಣವಾಯ್ತು ಬೈಕ್​​

ಇದನ್ನೂ ಓದಿ: ನಡು ರಸ್ತೆಯಲ್ಲೇ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ಅಮಾನುಷ ಹಲ್ಲೆ.. ವಿಡಿಯೋ ವೈರಲ್​!

ಪಾಟ್ನಾದ ಮೆಕ್ಯಾನಿಕ ಮೋಹನ್ ಈ ಬೈಕ್ ವಿನ್ಯಾಸಗೊಳಿಸಿದ್ದು, ಅದಕ್ಕಾಗಿ ತಮ್ಮ ಗ್ಯಾರೇಜ್​ನಲ್ಲಿನ ಕೆಲವೊಂದು ಬಿಡಿ ಭಾಗ ಉಪಯೋಗಿಸಿದ್ದಾರೆ. ಮಗನ ಹುಟ್ಟುಹಬ್ಬಕ್ಕೆ ಮಿನಿ ರಾಜದೂತ್​​ ಬೈಕ್​​ ಉಡುಗೊರೆಯಾಗಿ ನೀಡಿದ್ದಾರೆ. ವಿನೂತನ ಬೈಕ್ ನೋಡಿರುವ ಅನೇಕರು ಇದೀಗ ತಂಡೋಪ ತಂಡವಾಗಿ ಬಂದು ಅದರೊಂದಿಗೆ ಸೆಲ್ಫಿ ಸಹ ತೆಗೆದುಕೊಳ್ಳುತ್ತಿದ್ದಾರೆ. ಈ ಮಿನಿ ಬೈಕ್​ ಪ್ರತಿ ಲೀಟರ್​ಗೆ 40ರಿಂದ 45 ಕಿಲೋಮೀಟರ್​​ ಮೈಲೇಜ್​ ನೀಡ್ತಿದ್ದು, 40 ಕೆಜಿ ತೂಕ ಹೊಂದಿದೆ. ಚಿಕ್ಕದಾದ ಚಕ್ರಗಳು ಇರುವ ಕಾರಣ ಮಕ್ಕಳು, ವಯಸ್ಸಾದವರು ಹಾಗೂ ಹಿರಿಯರು ಇದನ್ನ ಓಡಿಸಬಹುದಾಗಿದೆ.

ಮೆಕ್ಯಾನಿಕ್​ ತಂದೆಯಿಂದ ಬೈಕ್​ ನಿರ್ಮಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.