ETV Bharat / bharat

ಕಾಶ್ಮೀರದಲ್ಲಿ ಈ ವರ್ಷದ ಮೊದಲ 3 ತಿಂಗಳಲ್ಲಿ 42 ಉಗ್ರರು ಸೇರಿ 58 ಜನ ಹತ

author img

By

Published : Apr 2, 2022, 3:11 PM IST

ಈ ವರ್ಷದ ಮಾರ್ಚ್ ಅಂತ್ಯದವರೆಗೆ ಕಾಶ್ಮೀರದಲ್ಲಿ ನಡೆದ ಉಗ್ರ ದಮನ ಕಾರ್ಯಾಚರಣೆಯಲ್ಲಿ 58 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ 42 ಉಗ್ರರನ್ನು ಹತ್ಯೆ ಮಾಡಿದ್ದರೆ, ಭದ್ರತಾ ಸಿಬ್ಬಂದಿ, ನಾಗರಿಕರು ಸೇರಿ 16 ಜನರು ಅಸುನೀಗಿದ್ದಾರೆ.

militants
ಕಾಶ್ಮೀರ

ಶ್ರೀನಗರ (ಜಮ್ಮು- ಕಾಶ್ಮೀರ): ಕಾಶ್ಮೀರದಲ್ಲಿ ಉಗ್ರ ದಮನ ಕಾರ್ಯ ಮುಂದುವರಿದಿದ್ದು, ಈ ವರ್ಷದ ಮೊದಲ 3 ತಿಂಗಳಲ್ಲಿ 58 ಉಗ್ರರ ಪೈಕಿ 42 ಜನರನ್ನು ಮಟ್ಟ ಹಾಕಲಾಗಿದೆ. ಕಾರ್ಯಾಚರಣೆಯಲ್ಲಿ 8 ಭದ್ರತಾ ಸಿಬ್ಬಂದಿ, ಅನೇಕ ನಾಗರಿಕರು ಕೂಡ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿಯಲ್ಲಿ 13 ಸ್ಥಳೀಯ ಮತ್ತು ಪಾಕಿಸ್ತಾನ ಸೇರಿದಂತೆ ಇತರ ದೇಶಗಳಿಂದ ನುಸುಳಿದ 9 ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಈ ವೇಳೆ ಒಬ್ಬ ಭದ್ರತಾ ಸಿಬ್ಬಂದಿ ಹತನಾಗಿದ್ದಾನೆ. ಫೆಬ್ರವರಿಯಲ್ಲಿ 7 ಉಗ್ರರು, ಮೂವರು ಭದ್ರತಾ ಪಡೆ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸೇರಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಚ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಅಂದರೆ 24 ಪ್ರಾಣಗಳು ಆಹುತಿಯಾಗಿವೆ. ಇದರಲ್ಲಿ ಇಬ್ಬರು ವಿದೇಶಿ ಮತ್ತು 11 ಸ್ಥಳೀಯ ಉಗ್ರರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೇ, 7 ನಾಗರಿಕರು ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ.

3 ತಿಂಗಳಲ್ಲಿ ಹತರಾದ 42 ಉಗ್ರರ ಪೈಕಿ 24 ಮಂದಿ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್), 13 ಮಂದಿ ಜೈಶ್-ಎ-ಮಹಮದ್, ಇಬ್ಬರು ಅಲ್-ಬದ್ರ್ ಮತ್ತು ಒಬ್ಬರು ಹಿಜ್ಬುಲ್‌ಗೆ ಸೇರಿದವರಾಗಿದ್ದಾರೆ. ಉಳಿದ ಇಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಮಾಲಿಯಲ್ಲಿ ಸೇನಾ ಕಾರ್ಯಾಚರಣೆ.. 200ಕ್ಕೂ ಉಗ್ರರ ಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.