ನವದೆಹಲಿ : ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆ ಕಂಪನಿಗಳು ಮತ್ತು ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುವ ಮೂಲಕ ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕುವ ಪ್ರಕ್ರಿಯೆ ಪ್ರಾರಂಭಿಸಿದೆ.
ಲಾಕ್‌ಡೌನ್‌ನಿಂದಾಗಿ ತಮ್ಮ ಊರುಗಳಿಗೆ ವಾಪಸ್ ಹೋಗಿದ್ದ ಕಾರ್ಮಿಕರು ಈಗ ಕೆಲಸಕ್ಕಾಗಿ ನಗರಕ್ಕೆ ಮರಳುತ್ತಿದ್ದಾರೆ. ಉತ್ತರಪ್ರದೇಶದ ಸೀತಾಪುರದಿಂದ ವಲಸೆ ಬಂದ ಕಾರ್ಮಿಕರೊಬ್ಬರು ಈಟಿವಿ ಭಾರತ್ ಜೊತೆ ಮಾತನಾಡಿ, ಲಾಕ್‌ಡೌನ್ ಹೇರಿದ ಆರಂಭದಲ್ಲಿ ಮನೆಗೆ ಹೋಗಿದ್ದೆ ಎಂದು ಹೇಳಿದರು. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಸುಮಾರು ಒಂದು ವರ್ಷದಿಂದ ಯಾವುದೇ ಕೆಲಸವಿಲ್ಲ ಮತ್ತು ಬದುಕುವುದು ಕಷ್ಟಕರವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಕೋವಿಡ್ -19 ಎರಡನೇ ಅಲೆ ನಿಯಂತ್ರಣಕ್ಕೆ ದೆಹಲಿ ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಿಸಿದಾಗ, ವಲಸೆ ಕಾರ್ಮಿಕರು ದೆಹಲಿಯನ್ನು ತೊರೆದರು. ಕಾರ್ಮಿಕರನ್ನು ನಗರದಿಂದ ಹೊರ ಹೋಗದಂತೆ ತಡೆಯಲು ದೆಹಲಿಯ ಸರ್ಕಾರವು ಉಚಿತ ಪಡಿತರ ಘೋಷಿಸಿತ್ತು.