ಸೋಲನ್ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಧರಂಪುರದಲ್ಲಿ ಮಂಗಳವಾರ ಕಲ್ಕಾ-ಶಿಮ್ಲಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ- 5ರಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳ ಗುಂಪಿಗೆ ವೇಗವಾಗಿ ಬಂದ ಇನ್ನೋವಾ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಪಾದಚಾರಿಗಳು ಕೆಲಸಕ್ಕೆ ಹೋಗುತ್ತಿದ್ದ ವೇಳೆ ಅಪಘಾತ: ಪಾದಚಾರಿಗಳು ಕೆಲಸಕ್ಕೆ ಹೋಗುತ್ತಿದ್ದಾಗ ಕಾರು ಜೋರಾಗಿ ಡಿಕ್ಕಿ ಹೊಡೆದಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಮೃತರ ಗುರುತು ಪತ್ತೆ ಹಚ್ಚಲು ಸ್ಥಳೀಯ ಅಧಿಕಾರಿಗಳು ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಈಗಾಗಲೇ ಇನ್ನೋವಾ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ನಾಲ್ವರನ್ನು ಧರ್ಮಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ವೈದ್ಯರು ಸೂಚನೆ ಮೇರೆಗೆ, ಗಾಯಗೊಂಡ ಕಾರ್ಮಿಕರಲ್ಲಿ ಒಬ್ಬರನ್ನು ಹೆಚ್ಚಿನ ಆರೈಕೆಗಾಗಿ ಚಂಡೀಗಢದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಮತ್ತು ರಿಸರ್ಚ್ ಕಳುಹಿಸಲಾಗಿದೆ.
-
सोलन के धर्मपुर के पास एक तेज रफ्तार गाड़ी द्वारा सड़क के किनारे चल रहे करीब 7से9मजदूरों को कुचल देने की दुःखद खबर है। इस हादसे में 5 मजदूरों की मौत हो गई है और बाकी मजदूर काफी गंभीर हालत में हैं ।भगवान मृतकों की आत्मा को शांति प्रदान करें व घायल मजदूर जल्द से जल्द स्वस्थ हों। pic.twitter.com/nPxKOxD2ps
— Sukhvinder Singh Sukhu (@SukhuSukhvinder) March 7, 2023 " class="align-text-top noRightClick twitterSection" data="
">सोलन के धर्मपुर के पास एक तेज रफ्तार गाड़ी द्वारा सड़क के किनारे चल रहे करीब 7से9मजदूरों को कुचल देने की दुःखद खबर है। इस हादसे में 5 मजदूरों की मौत हो गई है और बाकी मजदूर काफी गंभीर हालत में हैं ।भगवान मृतकों की आत्मा को शांति प्रदान करें व घायल मजदूर जल्द से जल्द स्वस्थ हों। pic.twitter.com/nPxKOxD2ps
— Sukhvinder Singh Sukhu (@SukhuSukhvinder) March 7, 2023सोलन के धर्मपुर के पास एक तेज रफ्तार गाड़ी द्वारा सड़क के किनारे चल रहे करीब 7से9मजदूरों को कुचल देने की दुःखद खबर है। इस हादसे में 5 मजदूरों की मौत हो गई है और बाकी मजदूर काफी गंभीर हालत में हैं ।भगवान मृतकों की आत्मा को शांति प्रदान करें व घायल मजदूर जल्द से जल्द स्वस्थ हों। pic.twitter.com/nPxKOxD2ps
— Sukhvinder Singh Sukhu (@SukhuSukhvinder) March 7, 2023
ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯ: ಅಪಘಾತಕ್ಕೆ ಈಡಾಗಿರುವ ಕಾರ್ ಸೋಲನ್‌ನಿಂದ ಪರ್ವಾನೂಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಸುಕ್ಕಿ ಜೋರಿಯಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ. ಕಾರ್ ಚಾಲಕನೊಂದಿಗೆ ಇತರ ವಾಹನ ಸವಾರರು ತುರ್ತು ಸೇವಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಟ್ವೀಟ್: "ಸೋಲನ್‌ನ ಧರಂಪುರ ಬಳಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 7ರಿಂದ 9 ಕೂಲಿ ಕಾರ್ಮಿಕರಿಗೆ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆರುವುದು ದುಃಖದ ವಿಚಾರವಾಗಿದೆ. ಈ ಅಪಘಾತದಲ್ಲಿ 5 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಉಳಿದ ಕಾರ್ಮಿಕರ ಸ್ಥಿತಿ ತುಂಬಾ ಗಂಭೀರವಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಗಾಯಾಳು ಕಾರ್ಮಿಕರು ಬೇಗ ಗುಣಮುಖರಾಗಲಿ'' ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕ ವಿನೋದ್ ಸುಲ್ತಾನಪುರಿ ಭೇಟಿ: ಕಾಂಗ್ರೆಸ್ ಶಾಸಕ (ಕಸೌಲಿ ಅಸೆಂಬ್ಲಿ) ವಿನೋದ್ ಸುಲ್ತಾನಪುರಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಹ ಭೇಟಿ ಮಾಡಿದರು. ಗಾಯಾಳುಗಳ ಸ್ಥಿತಿಗತಿ ಕುರಿತು ವೈದ್ಯರ ಬಳಿಯೂ ಶಾಸಕರು ವಿಚಾರಿಸಿದರು. ಸೋಲನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೀರೇಂದ್ರ ಶರ್ಮಾ ಕೂಡ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದರು.
ವಿಚಾರಣೆ ಆರಂಭಿಸಿದ ಪೊಲೀಸರು: ಅಪಘಾತದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಧರಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸದ್ಯ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದಾರೆ. ಅಪಘಾತದ ಬಗ್ಗೆ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ₹245 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ; ಐವರು ಇರಾನ್ ಪ್ರಜೆಗಳ ಬಂಧನ