ETV Bharat / bharat

ದಲಿತರ ಮೇಲೆ ದೌರ್ಜನ್ಯ: ಸಿಎಂಗೆ ರಾಜೀನಾಮೆ ಪತ್ರ ರವಾನಿಸಿದ ಕಾಂಗ್ರೆಸ್ ಶಾಸಕ - ಈಟಿವಿ ಭಾರತ ಕನ್ನಡ

ನಮ್ಮ ಸಮುದಾಯದ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲರಾದಾಗ ಆ ಹುದ್ದೆಯಲ್ಲಿ ಉಳಿಯುವ ಅರ್ಹತೆ ನಮಗಿಲ್ಲ ಎಂದು ಕಾಂಗ್ರೆಸ್​ ಶಾಸಕ ಪಾನಾ ಚಂದ್​ ಮೇಘ್ವಾಲ್​ ಹೇಳಿದ್ದಾರೆ.

Miffed over atrocities against Dalits, Cong MLA sends resignation to Gehlot
ದಲಿತರ ಮೇಲೆ ದೌರ್ಜನ್ಯ: ಸಿಎಂಗೆ ರಾಜೀನಾಮೆ ಪತ್ರ ರವಾನಿಸಿದ ಶಾಸಕ
author img

By

Published : Aug 15, 2022, 9:19 PM IST

ಜೈಪುರ (ರಾಜಸ್ಥಾನ): ದಲಿತರ ಮೇಲಿನ ದೌರ್ಜನ್ಯದಿಂದ ನೊಂದು ರಾಜಸ್ಥಾನದ ಕಾಂಗ್ರೆಸ್​ ಶಾಸಕ ಪಾನಾ ಚಂದ್​ ಮೇಘ್ವಾಲ್​ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ತಮ್ಮ ಸಮುದಾಯವನ್ನು ರಕ್ಷಿಸಲು ಸಾಧ್ಯವಾಗದೇ ಇದ್ದರೆ ನಾನು ಶಾಸಕನಾಗಿ ಮುಂದುವರೆಯುವ ಅರ್ಹತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಜಾಲೋರ್​​ನಲ್ಲಿ ಮಡಕೆಯಲ್ಲಿದ್ದ ನೀರು ಕುಡಿದ ಕಾರಣಕ್ಕೆ 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕ ಥಳಿಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇದಾದ ಎರಡು ದಿನಗಳಲ್ಲಿ ಬರನ್-ಆತು ಕ್ಷೇತ್ರದ ಶಾಸಕರಾದ ಮೇಘ್ವಾಲ್​ ಈ ನಿರ್ಧಾರ ಪ್ರಕಟಿಸಿದರು.

ನನ್ನ ಆತ್ಮಸಾಕ್ಷಿಯ ಮಾತು ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಯಾವುದೇ ಹುದ್ದೆ ಇಲ್ಲದೆಯೇ ಸಮಾಜದ ಸೇವೆ ಮಾಡುತ್ತೇನೆ. ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದರೂ ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ದೌರ್ಜನ್ಯಗಳನ್ನು ನೋಡಿ ನನಗೆ ನೋವಾಗಿದೆ. ನನ್ನ ಸಮುದಾಯವನ್ನು ಹಿಂಸಿಸುತ್ತಿರುವ ರೀತಿಯನ್ನು ನನ್ನ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದೂ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಡಿಸಿ-ಎಸ್ಪಿಗೆ ನೋಟಿಸ್: ವಿದ್ಯಾರ್ಥಿಯ ಸಾವಿನ ಪ್ರಕರಣದ ಬಗ್ಗೆ ರಾಜಸ್ಥಾನ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಆಯೋಗದ ಅಧ್ಯಕ್ಷ ನ್ಯಾ.ಜಿ.ಕೆ.ವ್ಯಾಸ್ ನಾಳೆ (ಆಗಸ್ಟ್​ 16ರಂದು) ಜಲೋರ್‌ಗೆ ಭೇಟಿ ನೀಡಲಿದ್ದಾರೆ.

ಸೋಮವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಕಿಲಾಡಿ ಲಾಲ್ ಬೈರ್ವಾ ಜಲೋರ್​​ಗೆ ತೆರಳಿ ಮೃತನ ಬಾಲಕನ ಪೋಷಕರನ್ನು ಭೇಟಿ ಮಾಡಿದ್ದಾರೆ. ಈಗಾಗಲೇ ಆರೋಪಿ ಶಿಕ್ಷಕ ಚೈಲ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ.

ಇದನ್ನೂ ಓದಿ: ಮಡಕೆ ನೀರು ಕುಡಿದಿದ್ದಕ್ಕೆ ಶಿಕ್ಷಕನಿಂದ ಥಳಿತಕ್ಕೊಳಗಾದ ಬಾಲಕ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.