ETV Bharat / bharat

ಪ್ರೀತಿ ನಿರಾಕರಣೆ ಹಿನ್ನೆಲೆ, ತಾಯಿಯ ಎದುರೇ ಬಾಲಕಿಗೆ ಚಾಕುವಿನಿಂದ ಇರಿದು ಕೊಂದ ಯುವಕ..! - ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪ್ರೀತಿ ನಿರಾಕರಣೆ ಹಿನ್ನೆಲೆಯಲ್ಲಿ ತಾಯಿಯ ಎದುರೇ ಬಾಲಕಿಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಥಾಣೆಯ ಕಲ್ಯಾಣ್ ಪೂರ್ವದ ತಿಸ್‌ಗಾಂವ್ ಪ್ರದೇಶದಲ್ಲಿ ನಡೆದಿದೆ.

minor girl murder
ಪ್ರೀತಿ ನಿರಾಕರಣೆ ಹಿನ್ನೆಲೆ, ತಾಯಿಯ ಎದುರೇ ಅಪ್ರಾಪ್ತ ಬಾಲಕಿ ಚಾಕುವಿನಿಂದ ಇರಿದು ಕೊಂದ ಯುವಕ..!
author img

By

Published : Aug 17, 2023, 11:56 AM IST

ಥಾಣೆ (ಮಹಾರಾಷ್ಟ್ರ): ಥಾಣೆಯ ಕಲ್ಯಾಣ್ ಪೂರ್ವದ ತಿಸ್‌ಗಾಂವ್ ಪ್ರದೇಶದಲ್ಲಿ 20 ವರ್ಷದ ಯುವಕನೊಬ್ಬ 11 ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ನಿನ್ನೆ (ಬುಧವಾರ) ರಾತ್ರಿ 8 ಗಂಟೆ ಸುಮಾರಿಗೆ ಈ ದುರ್ಘಟನೆ ಜರುಗಿದ್ದು, ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಬಾಲಕಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಹೆಣ್ಣು ಮಕ್ಕಳ ಸುರಕ್ಷತೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಟ್ಯೂಷನ್​ಗೆ ಬರುತ್ತಿದ್ದ ಬಾಲಕಿಯೊಬ್ಬಳನ್ನು ಹತ್ಯೆ ಮಾಡಲಾಗಿದೆ. ತಿಸ್ಗಾಂವ್‌ನ ದುರ್ಗಾ ದರ್ಶನ್ ಸೊಸೈಟಿ ಆವರಣದಲ್ಲಿ ಈ ಘಟನೆ ನಡೆದಿದೆ. ಕೊಲೆ ಆರೋಪಿ ಯುವಕನನ್ನು ಸ್ಥಳೀಯರು ಹಿಡಿದು ಕೊಳಸೇವಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿಕೋರನ ಹೆಸರು ಆದಿತ್ಯ ಕಾಂಬಳೆ (20) ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಥಾಣೆ ಜಿಲ್ಲೆಯ ಜನರಲ್ಲಿ ಭೀತಿಯನ್ನುಂಟು ಮಾಡಿದೆ.

ಪೊಲೀಸರು ಹೇಳಿದ್ದೇನು?: ಪೊಲೀಸ್ ಮೂಲಗಳ ಪ್ರಕಾರ, ಸಂಜೆ ಏಳು ಗಂಟೆ ಸುಮಾರಿಗೆ ಆರೋಪಿ ಆದಿತ್ಯ ದುರ್ಗಾ ದರ್ಶನ್ ಸೊಸೈಟಿಯ ಆವರಣಕ್ಕೆ ಬರುತ್ತಿದ್ದನು. ಹುಡುಗಿ ಎಷ್ಟು ಗಂಟೆಗೆ ಮನೆಗೆ ಬರುತ್ತಿದ್ದಾಳೆ ಎಂದು ಪಕ್ಕದ ನಿವಾಸಿಗಳನ್ನು ಕೇಳುತ್ತಿದ್ದನು. ಯುವಕ ಏಕೆ ವಿಚಾರಿಸುತ್ತಿದ್ದಾನೆ ಎಂಬುದು ನಿವಾಸಿಗಳಿಗೆ ತಿಳಿದಿರಲಿಲ್ಲ. ಸಂತ್ರಸ್ತೆ ವಾಸಿಸುವ ಸೊಸೈಟಿ ಏರಿಯಾದಲ್ಲಿ ಆದಿತ್ಯ ಕುಳಿತಿದ್ದ.

ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ: ಬುಧವಾರ ರಾತ್ರಿ ಎಂಟು ಗಂಟೆಗೆ ಬಾಲಕಿ ತನ್ನ ತಾಯಿಯೊಂದಿಗೆ ಖಾಸಗಿ ಬೋಧನಾ ತರಗತಿಯಿಂದ ಮನೆಗೆ ಬರುತ್ತಿದ್ದಳು. ಸೊಸೈಟಿಯ ಮೆಟ್ಟಿಲಿನಿಂದ ಮನೆಗೆ ಹೋಗುತ್ತಿದ್ದಾಗ ಆದಿತ್ಯ ಹಿಂದಿನಿಂದ ಬಂದು ಬಾಲಕಿ ತಾಯಿಯನ್ನು ತಳ್ಳಿ ಬಾಲಕಿಗೆ ಚಾಕುವಿನಿಂದ ಎಂಟು ಬಾರಿ ಇರಿದಿದ್ದಾನೆ. ಆಕೆಯ ತಾಯಿ, ಮಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಹಲ್ಲೆಯ ಪರಿಣಾಮ ಎದೆಗೆ ತೀವ್ರ ಗಾಯವಾಗಿ ಬಾಲಕಿ ಮೆಟ್ಟಿಲುಗಳ ಮೇಲೆ ಕುಸಿದು ಬಿದ್ದಿದ್ದಾಳೆ. ತಾಯಿ ಕಿರುಚಾಡುತ್ತಿದ್ದಂತೆಯೇ ಸೊಸೈಟಿಯ ನಿವಾಸಿಗಳು, ಪಾದಚಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಆರೋಪಿ ಆದಿತ್ಯ ಅಲ್ಲಿಂದ ಓಡಿ ಹೋಗುತ್ತಿದ್ದ. ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ತಿಸ್ಗಾಂವ್ ನಿವಾಸಿ. ಘಟನೆಯ ಮಾಹಿತಿ ತಿಳಿದ ತಕ್ಷಣ ಸಹಾಯಕ ಪೊಲೀಸ್ ಕಮಿಷನರ್ ಕಲ್ಯಾಣಜಿ ಘೆಟೆ ಮತ್ತು ಹಿರಿಯ ಪೊಲೀಸ್ ಇನಸ್ಪೆಕ್ಟರ್ ಮಹೇಂದ್ರ ದೇಶಮುಖ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಪ್ರೀತಿ ನಿರಾಕರಿಸಿದ ಹಿನ್ನೆಲೆ ಯುವಕನಿಂದ ಕೊಲೆ ಆರೋಪ: ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಹುಡುಗಿಗೆ ಪ್ರೀತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದ. ಪ್ರೀತಿ ನಿರಾಕರಿಸಿದ ಹಿನ್ನೆಲೆ ಯುವಕ ಆಕ್ರೋಶಗೊಂಡಿದ್ದ. ಕೋಪದಿಂದ ಬಾಲಕಿಯ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಪತ್ನಿ, ಪುಟ್ಟ ಮಗುವನ್ನು ಕೊಡಲಿಯಿಂದ ಹತ್ಯೆಗೈದ ವ್ಯಕ್ತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.