ETV Bharat / bharat

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; 8 ಆರೋಪಿಗಳ ಬಂಧನ

author img

By

Published : Dec 18, 2022, 2:17 PM IST

16ರ ಹರೆಯದ ಸಂತ್ರಸ್ಥೆ ದೂರಿನಲ್ಲಿ, ನನ್ನನ್ನು ಮಾಹಿಮ್ ಗ್ರಾಮದ ಖಾಲಿ ಬಂಗಲೆಗೆ ಕರೆದೊಯ್ದರು. ಅಲ್ಲಿ ಅತ್ಯಾಚಾರವೆಸಗಿ, ಸಮುದ್ರ ತೀರಕ್ಕೆ ಕರೆದೊಯ್ದು ಪುನಃ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ದೂರು ನೀಡಿದ್ದಾಳೆ.

Gang rape of a minor
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಮಹಾರಾಷ್ಟ್ರ: ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಪಾಲ್ಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಒಟ್ಟು 8 ಮಂದಿಯಿಂದ ಈ ಕ್ರೌರ್ಯ ನಡೆದಿದ್ದು ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಕಳೆದ ಶುಕ್ರವಾರ ಮತ್ತು ಶನಿವಾರದ ಮಧ್ಯ ರಾತ್ರಿಯಲ್ಲಿ ಈ ಘಟನೆ ಸಂಭವಿಸಿದೆ. 16ರ ಹರೆಯದ ಸಂತ್ರಸ್ಥೆ ದೂರಿನಲ್ಲಿ, ನನ್ನನ್ನು ಮಾಹಿಮ್ ಗ್ರಾಮದ ಖಾಲಿ ಬಂಗಲೆಗೆ ಕರೆದೊಯ್ದರು. ಅಲ್ಲಿ ಅತ್ಯಾಚಾರವೆಸಗಿ, ಸಮುದ್ರ ತೀರಕ್ಕೆ ಕರೆದೊಯ್ದು ಪುನಃ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ದೂರು ನೀಡಿದ್ದಾಳೆ.

ಈ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಸತ್ಪತಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್​ 376 (ಡಿ), 366 (ಎ) ,341, 342, 323 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು.

ಇದನ್ನೂ ಓದಿ: ಓವರ್​ ಟೇಕ್​ ಮಾಡಲು ಹೋಗಿ ಭೀಕರ ಅಪಘಾತ: 3 ಸಾವು, 13 ಜನರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.