ಪುಣೆ (ಮಹಾರಾಷ್ಟ್ರ): ಈವರೆಗೆ ನೀವು ಅನೇಕ ರೀತಿಯ ಕಳ್ಳತನ ಪ್ರಕರಣಗಳನ್ನು ನೋಡಿರಬಹುದು. ಸಿನಿಮಾದ ರೀತಿಯಲ್ಲೂ ಕಳ್ಳತನದ ಕೇಸ್ಗಳು ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ, ಸೋಮವಾರ ರಾತ್ರಿ ಚಿನ್ನದ ಕಳ್ಳ ಸಾಗಣೆಯ ವಿಚಿತ್ರ ಪ್ರಕರಣಯೊಂದು ಬೆಳಕಿಗೆ ಬಂದಿದೆ. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯೊಬ್ಬರು ಈ ಚಿನ್ನದ ಪುಡಿಯನ್ನು ಕ್ಯಾಪ್ಸುಲ್‌ನಲ್ಲಿ ತುಂಬಿ ತನ್ನ ಖಾಸಗಿ ಅಂಗದಲ್ಲಿ ಬಚ್ಚಿಟ್ಟಿದ್ದಳು.
ಹೌದು, ಈ ಪ್ರಕರಣಕ್ಕೆ 41 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಆಕೆಯ ವಿರುದ್ಧ ಕಸ್ಟಮ್ಸ್ ಕಾಯ್ದೆಯಡಿ ದೂರೂ ದಾಖಲಿಸಲಾಗಿದೆ. ಮಹಿಳೆ ತನ್ನ ಖಾಸಗಿ ಅಂಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದರಿಂದ, ಅಧಿಕಾರಿಗಳಿಗೆ ಈ ಪ್ರಕರಣ ಭೇದಿಸಲು ಕೂಡ ತುಂಬಾ ತಲೆ ಕೆಡಿಸಿಕೊಂಡಿದ್ದಾರೆ.
ಕ್ಯಾಪ್ಸುಲ್ಗಳಲ್ಲಿತ್ತು ಚಿನ್ನದ ಪುಡಿ: ಮಹಿಳೆಯೊಬ್ಬರು ದುಬೈನಿಂದ ಚಿನ್ನ ತರುತ್ತಿರುವ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಮಾಹಿತಿ ಸಿಕ್ಕಿದೆ. ಅದರಂತೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ಹೆಚ್ಚಿಸಿದ್ದರು. ದುಬೈನಿಂದ ಬಂದ ವಿಮಾನವು ಪುಣೆಗೆ ಬಂದಾಗ, ಒಬ್ಬ ಮಹಿಳೆ ಗಾಬರಿಯಿಂದ ವಿಮಾನ ನಿಲ್ದಾಣದಿಂದ ಹೊರಗೆ ಹೋಗುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದರು. ಮಹಿಳೆಯ ವರ್ತನೆಯು ಅವರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಭದ್ರತಾ ಸಿಬ್ಬಂದಿ ಮಹಿಳೆಯನ್ನು ನಿಲ್ಲಿಸಿ ಅವಳನ್ನು ಪ್ರಶ್ನಿಸಲು ಪ್ರಾರಂಭಿಸಿತು.
ಆಗ ಮಹಿಳೆ ತನ್ನ ಗುಪ್ತಾಂಗದಲ್ಲಿ ಚಿನ್ನದ ಪುಡಿ ತುಂಬಿದ ಕ್ಯಾಪ್ಸುಲ್ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಹಿಳೆಯನ್ನು ಎಕ್ಸ್- ರೇ ವ್ಯವಸ್ಥೆಯಿಂದ ಪರೀಕ್ಷಿಸಿದಾಗ ಸತ್ಯ ಸಂಗತಿ ಬಯಲಿಗೆ ಬಂದಿದೆ. ಮಹಿಳೆಯಿಂದ 20 ಲಕ್ಷ 30 ಸಾವಿರ ಮೌಲ್ಯದ 423 ಗ್ರಾಂ 41 ಮಿಲಿಗ್ರಾಂ ಚಿನ್ನದ ಪುಡಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪೊಲೀಸರಿಂದ ಹೆಚ್ಚುವರಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಭಾರತ - ಪಾಕ್ ಗಡಿ ಗ್ರಾಮದಲ್ಲಿ 55 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ
ಚಿನ್ನ ಕಳ್ಳಸಾಗಣೆದಾರರ ವಿರುದ್ಧ ಕ್ರಮ: 2022ರಲ್ಲಿ ಕಸ್ಟಮ್ಸ್ ಇಲಾಖೆ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟು 604 ಕೆಜಿ ಚಿನ್ನಾಭರಣ ವಶಕ್ಕೆ ಪಡೆದು ಕಳ್ಳಸಾಗಣೆದಾರರ ವಿರುದ್ಧ ಕ್ರಮ ಕೈಗೊಂಡಿತ್ತು. ಆ ಚಿನ್ನದ ಬೆಲೆ 360 ಕೋಟಿ ರೂಪಾಯಿ. ಕಳೆದ ಆರು ತಿಂಗಳಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಂದಾಯ ಗುಪ್ತಚರ ಸಂಸ್ಥೆ 144 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಅಲ್ಲದೇ ಇತ್ತೀಚೆಗೆ ನಡೆದ ಅಕ್ರಮ ಸಾಗಣೆ ಕಾರ್ಯಾಚರಣೆಯಲ್ಲಿ ಚಿನ್ನವನ್ನು ಪುಡಿ ಮಾಡಿ ದೇಹದಲ್ಲಿ ಬಚ್ಚಿಟ್ಟಿರುವುದು ಪ್ರಕರಣಗಳು ಕಂಡು ಬರುತ್ತಿವೆ.
ಇದನ್ನೂ ಓದಿ: ವಿದೇಶಿ ಪ್ರಜೆಯ ಬ್ಯಾಗ್‌ನಲ್ಲಿತ್ತು 12 ಕೋಟಿ ರೂಪಾಯಿ ಮೌಲ್ಯದ ಕೊಕೇನ್! ಹೇಗೆ ಬಚ್ಚಿಟ್ಟಿದ್ದ ನೋಡಿ