ETV Bharat / bharat

ನಾಗ್ಪುರ ಹಿಂಗಾನಾ MIDC ಕಂಪನಿಯಲ್ಲಿ ಬೆಂಕಿ ಅವಘಡ.. ಮೂವರು ಕಾರ್ಮಿಕರು ಸಾವು - Sonegaon Nipani

ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿರುವ ಹಿಂಗಾನಾ ಎಂಐಡಿಸಿ ಕಂಪನಿಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.

MIDC ಯ ಕಂಪನಿಯಲ್ಲಿ ಬೆಂಕಿ ಅವಘಡ
MIDC ಯ ಕಂಪನಿಯಲ್ಲಿ ಬೆಂಕಿ ಅವಘಡ
author img

By

Published : Apr 24, 2023, 3:24 PM IST

ನಾಗ್ಪುರ (ಮಹಾರಾಷ್ಟ್ರ): ನಗರದ ಹಿಂಗಾನಾ ಎಂಐಡಿಸಿ ಕಂಪನಿಯಲ್ಲಿ ಅಗ್ನಿ ಅವಘಡ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೂವರು ಕಾರ್ಮಿಕರು ಸಜೀಹದಹನವಾಗಿದ್ದಾರೆ ಎಂದು ವರದಿಯಾಗಿದೆ. ಇನ್ನೂ 10 ರಿಂದ 12 ಕಾರ್ಮಿಕರು ಒಳಗೆ ಸಿಲುಕಿರುವ ಆತಂಕ ಉಂಟಾಗಿದೆ.

ಹಿಂಗಾನಾ MIDC ಯಲ್ಲಿನ ಸೋನೆಗಾಂವ್ ನಿಪಾನಿಯಲ್ಲಿ ಕಟಾರಿಯಾ ಆಗ್ರೋ ಪ್ರೈವೇಟ್​ ಲಿಮಿಟೆಡ್‌ನ ಈ ಕಂಪನಿಯಲ್ಲಿ ಬೆಂಕಿಯಿಂದ ಮೂವರು ಕಾರ್ಮಿಕರ ದುರಾದೃಷ್ಟಕರ ಸಾವಿನ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸುವಂತೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸೂಚಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಬೇಕು ಎಂದು ದೇವೇಂದ್ರ ಫಡ್ನವೀಸ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮುಂಬೈನ ಸಭೆಯಲ್ಲಿದ್ದರೂ ನಿರಂತರವಾಗಿ ಸಮನ್ವಯ ಸಾಧಿಸುತ್ತಿದ್ದಾರೆ. ತಹಶೀಲ್ದಾರ್​ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.

ಕಂಪೆನಿಯೊಂದರಲ್ಲಿ ಬೆಂಕಿ ಅವಘಡ: ಇಲ್ಲಿನ ಕಲ್ಪತರು ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಕಂಪನಿಯೊಂದರಲ್ಲಿ (ಏಪ್ರಿಲ್ 15 -2023)ರಂದು ಬೆಂಕಿ ಅವಘಡ ಸಂಭವಿಸಿತ್ತು. ಕಂಪನಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿತ್ತು.

ಈ ವೇಳೆ ಕಂಪನಿಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದರು. ಬೆಂಕಿ ಅವಘಡಕ್ಕೆ ಸೂಕ್ತ ಕಾರಣ ತಿಳಿದು ಬಂದಿರಲಿಲ್ಲ.

ಇದನ್ನೂ ಓದಿ: ಪ್ಲಾಸ್ಟಿಕ್​ ಗೋದಾಮಿನಲ್ಲಿ ಬೆಂಕಿ ಅವಘಡ : 25 ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಇತ್ತೀಚಿಗೆ ಪಶ್ಚಿಮ ದೆಹಲಿಯ ಪ್ಲಾಸ್ಟಿಕ್​ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿಯ ತೀವ್ರತೆಗೆ ಗೋಡಾನ್​ನಲ್ಲಿದ್ದ ಅಪಾರ ಪ್ರಮಾಣದ ವಸ್ತಗಳು ಸುಟ್ಟು ಕರಕಲಾಗಿದ್ದವು. ಬೆಂಕಿಯನ್ನು ನಂದಿಸಲು ಸುಮಾರು 25 ಅಗ್ನಿಶಾಮಕದ ದಳ ವಾಹನಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ದೆಹಲಿಯ ಟಿಕ್ರಿ ಕಲಾನ್ ಪಿವಿಸಿ ಮಾರುಕಟ್ಟೆಯಲ್ಲಿನ ಪ್ಲಾಸ್ಟಿಕ್​ ಗೋದಾಮಿಗೆ ಬೆಂಕಿ ಆವರಿಸಿತ್ತು.

ಪ್ಲಾಸ್ಟಿಕ್​ ಗೋದಾಮಿನಲ್ಲಿ ಬೆಂಕಿ ಅವಘಡ.. 25 ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ: ಇನ್ನೊಂದೆಡೆ ಪಶ್ಚಿಮ ದೆಹಲಿಯ ಪ್ಲಾಸ್ಟಿಕ್​ ಗೋದಾಮಿನಲ್ಲಿ (ಏಪ್ರಿಲ್ 8-2023)ರಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿತ್ತು. ಬೆಂಕಿಯ ತೀವ್ರತೆಗೆ ಗೋಡಾನ್​ನಲ್ಲಿದ್ದ ಅಪಾರ ಪ್ರಮಾಣದ ವಸ್ತಗಳು ಸುಟ್ಟು ಕರಕಲಾಗಿದ್ದವು. ಇನ್ನು ಸುಮಾರು 25 ಅಗ್ನಿಶಾಮಕದ ದಳ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದವು.

ದೆಹಲಿಯ ಟಿಕ್ರಿ ಕಲಾನ್ ಪಿವಿಸಿ ಮಾರುಕಟ್ಟೆಯಲ್ಲಿನ ಪ್ಲಾಸ್ಟಿಕ್​ ಗೋದಾಮು ಇದಾಗಿದ್ದು, ಅಂದು ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು. ಬೆಂಕಿ ಅವಘಡಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ : ಕಂಪನಿಯೊಂದರಲ್ಲಿ ಅಗ್ನಿ ಅವಘಡ; ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.