ETV Bharat / bharat

ಸೈಬರ್​ ಕಳ್ಳರಿದ್ದಾರೆ ಹುಷಾರ್​.. ಇನ್​ಸ್ಟಾಗ್ರಾಂ ಸ್ನೇಹಿತನಿಂದ 1 ಲಕ್ಷ ರೂ ವಂಚನೆ.. ಒಂದೇ ಗಂಟೆಯಲ್ಲಿ ಹಣ ವಾಪಸ್​!

ಗಿಪ್ಟ್​ ಕೊರಿಯರ್​ ಕಳುಹಿಸುವ ನೆಪದಲ್ಲಿ ಇನ್​ಸ್ಟಾಗ್ರಾಂ ಸ್ನೇಹಿತನೊಬ್ಬ ಯುವತಿಯ ಬ್ಯಾಂಕ್​ ಮಾಹಿತಿಯನ್ನು ಪಡೆದು ಒಂದು ಲಕ್ಷ ರೂ ವಂಚನೆ ಮಾಡಿದ್ದಾನೆ.

mh-dahisar-cyber-police-recovered-rs-96000-from-fraudsters-account-within-1-hours
ಸೈಬರ್​ ಕ್ರೈಂ : ಇನ್​ಸ್ಟಾಗ್ರಾಂ ಸ್ನೇಹಿತನಿಂದ 1 ಲಕ್ಷ ರೂ ವಂಚನೆ
author img

By

Published : Feb 23, 2023, 5:22 PM IST

ಮುಂಬೈ (ಮಹಾರಾಷ್ಟ್ರ): ಟ್ರಾಕ್​ ಆನ್​ ಸರ್ವಿಸ್​ ಮೂಲಕ ಗಿಪ್ಟ್​ ಕೊರಿಯರ್​ ಕಳುಹಿಸುವ ನೆಪದಲ್ಲಿ ಇನ್​ಸ್ಟಾಗ್ರಾಂ ಸ್ನೇಹಿತನೊಬ್ಬ ಯುವತಿಗೆ ಒಂದು ಲಕ್ಷ ರೂ. ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ದಹಿಸರ್​ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೇವಲ ಒಂದು ಗಂಟೆಯಲ್ಲಿ ಸಂತ್ರಸ್ತೆಯ ಹಣವನ್ನು ಹಿಂದಿರುಗಿಸಿಕೊಟ್ಟಿದ್ದಾರೆ. ಡಿಜಿಟಲ್​ ಬ್ಯಾಂಕಿಗ್​ ಯುಗದಲ್ಲಿ ಸೈಬರ್​ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ.

ಇನ್​ಸ್ಟಾಗ್ರಾಮ್​ ಮೂಲಕ ಪರಿಚಯವಾದ ಸ್ನೇಹಿತ ಟ್ರಾಕ್​ ಆನ್​ ಸರ್ವಿಸ್​ ಮೂಲಕ ಉಡುಗೊರೆಯನ್ನು ಕೊರಿಯರ್​ ಕಳುಹಿಸಿದ್ಧೇನೆ ಎಂದು ಯುವತಿಗೆ ತಿಳಿಸಿದ್ದಾನೆ. ಪಾರ್ಸಲ್​ ವಿಳಂಬವಾದ ಕಾರಣ ಕೊರಿಯರ್​ ಬಗ್ಗೆ ಮಾಹಿತಿ ಪಡೆಯಲು ಸ್ನೇಹಿತನೇ ಸೇವಾ ಸಂಖ್ಯೆಯನ್ನು ನೀಡಿ ಯುವತಿಗೆ ಕರೆ ಮಾಡಲು ಹೇಳಿದ್ದಾನೆ.

ಯುವತಿಯು ಕರೆ ಮಾಡಿದ ನಂತರ ವಂಚಕ ಈ ಸಂಖ್ಯೆಗೆ 3 ರೂ ಕಳುಹಿಸಿದರೆ ಕೋರಿಯರ್​ನ ವಿವರವನ್ನು ಹೇಳುವುದಾಗಿ ಬೇಡಿಕೆ ಇಟ್ಟಿದ್ದಾನೆ. ಕೇವಲ ಮೂರು ರೂ. ಕಳುಹಿಸಲು ಯುವತಿಯು ತನ್ನ ಬ್ಯಾಂಕಿನ ಖಾತೆಯ ಎಲ್ಲಾ ವಿವರಗಳನ್ನು ವಂಚಕನ ಬಳಿ ಹಂಚಿಕೊಂಡಿದ್ದಾರೆ. ನಂತರ ವಂಚಕ ಯುವತಿಯ ಮೊಬೈಲ್​ನಲ್ಲಿ ಎನಿ ಡೆಸ್ಕ್​ ​ ಮತ್ತು ಸ್ಕ್ರೀನ್​ ಶೇರ್​ ಡೌನ್​ಲೋಡ್​ ಮಾಡಿ ಯುವತಿಯ ಖಾತೆಯಿಂದ 99,990ರೂ ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಯುವತಿಯು ತಕ್ಷಣವೇ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸ್​ ಅಧಿಕಾರಿಗಳು ಸೈಬರ್​ ಸೇಫ್​ ಪೋರ್ಟಲ್​ ಮೂಲಕ ಹೆಚ್​ಡಿಎಫ್​ಸಿ ಬ್ಯಾಂಕ್​ ಮತ್ತು ಆರ್​​ಬಿಎಲ್​ ಬ್ಯಾಂಕ್​ನ ನೋಡಲ್​ ಅಧಿಕಾರಿಗಳನ್ನು ಸಂಪರ್ಕಿಸಿ ಒಂದು ಗಂಟೆಯಲ್ಲಿ ಯುವತಿಯ ಹಣವನ್ನು ಹಿಂತಿರುಗಿಸಿಕೊಟ್ಟಿದ್ದಾರೆ.

ಬ್ಲೂ ಬಗ್ಗಿಂಗ್​: ಇತ್ತಿಚಿನ ದಿನಗಳಲ್ಲಿ ಬ್ಲೂಟೂತ್​ ಸಾಧನಗಳನ್ನು ಬಳಕೆ ಮಾಡವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಹ್ಯಾಕರ್​ಗಳು ಸ್ಮಾರ್ಟ್​ಫೋನ್​ ಮತ್ತು ಸ್ಮಾರ್ಟ್​ವಾಚ್​ಗಳನ್ನು ಹ್ಯಾಕ್​ ಮಾಡಲು ಬ್ಲೂ ಬಗ್ಗಿಂಗ್​ ಎಂಬ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ.

ಕೈಯಲ್ಲಿ ಡಿಜಿಟಲ್​ ವಾಚ್​ ಮತ್ತು ಕಿವಿಯಲ್ಲಿ ಇಯರ್​ ಪಾಡ್​ ಬ್ಲೂಟೂತ್​ ಸಾಧನಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸೈಬರ್​ ವಂಚಕರು ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು, ಕೇವಲ 10 ಮೀಟರ್​ ವ್ಯಾಪ್ತಿಯಲ್ಲಿ ಬ್ಲೂಟೂತ್​ ಮೂಲಕ ವಿನಂತಿ (ರಿಕ್ವೆಸ್ಟ್​) ಕಳುಹಿಸುವ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟಫೋನ್​ಗಳನ್ನು ಹ್ಯಾಕ್​ ಮಾಡುತ್ತಿದ್ದಾರೆ.

ಅವರು ತಮ್ಮ ಬ್ಲೂಟೂತ್​ ಹೆಸರನ್ನು ಫೋನ್​ನ ಕಂಪನಿಯ ಹೆಸರಿಗೆ ಮತ್ತು ಇತರ ಗ್ಯಾಡ್ಜೆಟ್​ಗಳಿಗೆ ಬದಲಾಯಿಸಿ ಜೋಡನೆ ಮಾಡಲು ವಿನಂತಿಯನ್ನು ಕಳುಹಿಸುತ್ತಾರೆ. ಜನರು ತಮ್ಮ ಸಾಧನಗಳನ್ನು ಜೋಡಿಸಿದ ನಂತರ ಫೋನ್​ಗಳಿಗೆ ಮಾಲ್​ವೇರ್​ (ವೈರಸ್​) ಬಿಟ್ಟು ಫೋನ್​ನನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ. ಮಾಲ್​ವೇರ್​ ಕಳುಹಿಸುವ ಮೂಲಕ ಫೋನ್​ನಲ್ಲಿರುವ ಸಂಪರ್ಕಗಳು ಮತ್ತು ಫೋಟೋಗಳು ಇತರ ಮಾಹಿತಿಯನ್ನು ಕದಿಯುತ್ತಾರೆ. ಇಂತಹ ದಾಳಿಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೈಬರ್​ ಪೊಲೀಸರು ಜನರನ್ನು ಕೋರಿದ್ದಾರೆ.

ಇದನ್ನೂ ಓದಿ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ ವಂಚನೆ ಪ್ರಕರಣ: ಇಡಿ ಅಧಿಕಾರಿಗಳಿಂದ ರಾಜೇಶ್​ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.