ETV Bharat / bharat

ಕೆಲಸ ಮುಗಿಸಿ ಮಲಗಿದ್ದ ಕಾರ್ಮಿಕರು.. ಗುಡಿಸಲಿಗೆ ನುಗ್ಗಿ ಮೂವರ ಪ್ರಾಣ ಪಡೆದ ವಾಹನ!

ಮಹಾರಾಷ್ಟ್ರದ ಮುಂಬೈ ನಾಗ್ಪುರ ರಾಷ್ಟ್ರೀಯ ಹೆದ್ದಾರಿಯ ಬುಲ್ಧಾನದ ಖಮಗಾಂವ್ ಮಲ್ಕಾಪುರ ನಡುವಿನ ವಡ್ನೇರ್ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಹಲವಾರು ಸಾವು - ನೋವುಗಳು ಸಂಭವಿಸಿವೆ.

MH buldhana accident 10 labours crushed by truck  truck several killed injured  vadner khamgaon malkapur  MH buldhana accident  ಗುಡಿಸಲಿಗೆ ನುಗ್ಗಿ ಮೂವರನ್ನು ಪ್ರಾಣ ಪಡೆದ ವಾಹನ  ಕೆಲಸ ಮುಗಿಸಿ ಮಲಗಿದ್ದ ಕಾರ್ಮಿಕರು  ಮಹಾರಾಷ್ಟ್ರದ ಮುಂಬೈ ನಾಗ್ಪುರ ರಾಷ್ಟ್ರೀಯ ಹೆದ್ದಾರಿ  ಬುಲ್ಧಾನದ ಖಮಗಾಂವ್ ಮಲ್ಕಾಪುರ ನಡುವಿನ ವಡ್ನೇರ್ ಗ್ರಾಮ  ಭೀಕರ ರಸ್ತೆ ಅಪಘಾತದ ಸುದ್ದಿ  ಬುಡಕಟ್ಟು ಕಾರ್ಮಿಕರ ಮೇಲೆ ಟ್ರಕ್‌ ಹರಿದಿದ್ದು  ಹಲವಾರು ಸಾವು ನೋವು
ಕೆಲಸ ಮುಗಿಸಿ ಮಲಗಿದ್ದ ಕಾರ್ಮಿಕರು
author img

By ETV Bharat Karnataka Team

Published : Oct 2, 2023, 11:10 AM IST

ಅಮರಾವತಿ, ಮಹಾರಾಷ್ಟ್ರ: ಅಮರಾವತಿ ಜಿಲ್ಲೆಯಿಂದ ಭೀಕರ ರಸ್ತೆ ಅಪಘಾತದ ಸುದ್ದಿಯೊಂದು ಹೊರಬಿದ್ದಿದೆ. ಸೋಮವಾರ (ಇಂದು) ಮುಂಜಾನೆ 5.30ಕ್ಕೆ ರಸ್ತೆ ಕಾಮಗಾರಿಗೆ ಎಂದು ಮೆಲ್ಘಾಟ್‌ಗೆ ತೆರಳಿದ್ದ ಬುಡಕಟ್ಟು ಕಾರ್ಮಿಕರ ಮೇಲೆ ಟ್ರಕ್‌ ಹರಿದಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ.

ಬಂದಿರುವ ಮಾಹಿತಿ ಪ್ರಕಾರ ಬುಲ್ಧಾನ ತಾಲೂಕಿನ ಮಲ್ಕಾಪುರದಿಂದ ನಂದೂರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ನಂ.6ರಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ನಿಮಿತ್ತ ನಂದೂರಕ್ಕೆ ತೆರಳಿ ರಸ್ತೆ ಬದಿ ನಿರ್ಮಿಸಿದ್ದ ಗುಡಿಸಲಿನಲ್ಲಿ ಮೊರಗಡ ತಾಲೂಕು ಚಿಕಲದಾರದ 10 ಕೂಲಿ ಕಾರ್ಮಿಕರು ಮಲಗಿದ್ದರು. ಇಂದು ಬೆಳಗ್ಗೆ ವೇಗವಾಗಿ ಬಂದ ಲಾರಿ ಗುಡಿಸಲಿಗೆ ಡಿಕ್ಕಿ ಹೊಡೆದಿದೆ.

ಈ ಹೃದಯ ವಿದ್ರಾವಕ ಅಪಘಾತದಲ್ಲಿ ಗುಡಿಸಲಿನಲ್ಲಿ ಮಲಗಿದ್ದ ಪ್ರಕಾಶ್ ಬಾಬು ಜಂಭೇಕರ್ (26 ವರ್ಷ), ಪಂಕಜ್ ತುಳಶಿರಾಮ್ ಜಂಭೇಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ವೇಳೆ ಅಭಿಷೇಕ್ ರಮೇಶ್ ಜಂಭೇಕರ್ (18) ಮೃತಪಟ್ಟಿದ್ದು, ಇತರ ಕಾರ್ಮಿಕರು ಗಾಯಗೊಂಡಿದ್ದಾರೆ.

ದೀಪಕ್ ಶೋಗಿ ಬೆಲ್ಸಾರೆ (25 ವರ್ಷ) ಮತ್ತು ರಾಜ ದಾದು ಜಂಭೇಕರ್ (35 ವರ್ಷ) ಮಲ್ಕಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಮೆಲ್ಘಾಟ್ ಶಾಸಕ ರಾಜಕುಮಾರ್ ಪಟೇಲ್ ಸಾಹೇಬ್ ಬುಲ್ಧಾನಾಗೆ ತೆರಳಿದರು. ಬಳಿಕ ಹಿರಿಯ ಅಧಿಕಾರಿಗಳಿಂದ ಅಪಘಾತದ ಬಗ್ಗೆ ಮಾಹಿತಿ ಪಡೆದರು.

ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ ಬುಲ್ಧಾನ ಪೊಲೀಸ್ ಠಾಣಾಧಿಕಾರಿ ಅನಿಲ್ ಬೆಹ್ರಾನಿ, ಅಪಘಾತದಲ್ಲಿ ಗಾಯಗೊಂಡವರಿಗೆ ಪರಿಹಾರ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಸ್ಥಳದಲ್ಲಿದ್ದು, ಮುಂದಿನ ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಎಲ್ಲ ಕಾರ್ಮಿಕರು ಮಧ್ಯಪ್ರದೇಶದವರಾಗಿದ್ದು, ಹೆದ್ದಾರಿಯಲ್ಲಿ ಕೆಲಸ ಮಾಡಲು ಬಂದಿದ್ದರು. ಬೆಳಗಿನ ಜಾವ ಐದೂವರೆ ಗಂಟೆಗೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮೃತರ ಸಂಬಂಧಿಗಳಿಗೆ ಮಾಹಿತಿ ಒದಗಿಸುವ ಪ್ರಯತ್ನದಲ್ಲಿದ್ದಾರೆ.

ಓದಿ: ಟ್ರಕ್​ ಅಪಘಾತ 10 ಕ್ಯೂಬಾ ವಲಸಿಗರ ಸಾವು..17 ಮಂದಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.