ಶಿರಡಿ (ಅಹಮದ್ ನಗರ): ಮೇಕೆ ಕಳ್ಳತನ ಮಾಡುವ ಆರೋಪದ ಹಿನ್ನೆಲೆ ಹಿಂದುಳಿದ ವರ್ಗದ ಯುವಕರನ್ನು ಥಳಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಶ್ರೀರಾಂಪುರ ತಾಲೂಕಿನ ಹರೇಗಾಂವದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಮೇಕೆ ಕಳ್ಳತನ ಮಾಡುವ ಆರೋಪದ ಹಿನ್ನೆಲೆ ಹಿಂದುಳಿದ ಜಾತಿಯ ಯುವಕರನ್ನು ಮರಕ್ಕೆ ತಲೆಕೆಳಗಾಗಿ ಕಟ್ಟಿ ಹಾಕಿ ಥಳಿಸಿರುವ ಬಗ್ಗೆ ನಾಗರಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯುವರಾಜ್ ನಾನಾ ಗಲಾಂಡೆ, ಮನೋಜ್ ಬೋಡ್ಖೆ, ಪಪ್ಪು ಪರ್ಖೆ, ದೀಪಕ್ ಗಾಯಕವಾಡ, ದುರ್ಗೇಶ್ ವೈದ್ಯ, ರಾಜು ಬೋರ್ಗೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಕೆ ಕಳ್ಳತನ ಮಾಡುವ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಯುವಕರು ಥಳಿಸಿದ್ದರಿಂದ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.
ಶ್ರೀರಾಂಪುರ ತಾಲೂಕಿನ ಹರೇಗಾಂವ್ನ ನಾನಾ ಗಲಾಂಡೆ ಎಂಬುವವರಿಗೆ ಸೇರಿದ ಮೇಕೆ ಹಾಗೂ ಕೆಲವು ಪಾರಿವಾಳಗಳನ್ನು ಕೆಲ ದಿನಗಳ ಹಿಂದೆ ಕಳವು ಮಾಡಲಾಗಿತ್ತು. ನಾನಾ ಗಲಾಂಡೆ ಮತ್ತು ಆತನ ಸಹಚರರು ಮೇಕೆಗಾಗಿ ಹುಡುಕಾಟ ನಡೆಸಿ ಮೇಕೆ ಕಳ್ಳತನ ಮಾಡಿದವರನ್ನು ಹುಡುಕಾಟ ನಡೆಸುತ್ತಿದ್ದರು. ಆಡು ಮತ್ತು ಪಾರಿವಾಳಗಳನ್ನು ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ನಾಲ್ವರು ಹಿಂದುಳಿದ ವರ್ಗದ ಯುವಕರನ್ನು ಶುಕ್ರವಾರ ಬೆಳಗ್ಗೆ ಅವರ ಮನೆಯಿಂದ ಕರೆತಂದಿದ್ದಾರೆ.
ಆರೋಪಿಗಳಾದ ಯುವರಾಜ್ ನಾನಾ ಗಲಾಂಡೆ, ಮನೋಜ್ ಬೋಡ್ಖೆ, ಪಪ್ಪು ಪರ್ಖೆ, ದೀಪಕ್ ಗಾಯಕವಾಡ, ದುರ್ಗೇಶ್ ವೈದ್ಯ, ರಾಜು ಬೋರ್ಗೆ, ಈ ಯುವಕರ ಬಟ್ಟೆ ಬಿಚ್ಚಿ ಮರಕ್ಕೆ ತಲೆಕೆಳಗಾಗಿ ನೇತು ಹಾಕಿ ಬರ್ಬರವಾಗಿ ಥಳಿಸಿದ್ದಾರೆ. ಯುವಕರಿಂದ ಮೇಕೆ ಕಳ್ಳತನದ ಕುರಿತು ಮಾಹಿತಿ ಪಡೆಯಲಾಯಿತು. ಆದರೆ, ಯುವಕನಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಮೇಕೆ ಕಳ್ಳತನದ ಆರೋಪದ ಹಿನ್ನೆಲೆ ಯುವಕನನ್ನು ಥಳಿಸುತ್ತಿರುವ ಬಗ್ಗೆ ಸಂತ್ರಸ್ತರ ತಾಯಿಗೆ ತಿಳಿದ ನಂತರ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಸಂತ್ರಸರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಆದರೆ ದುಷ್ಕರ್ಮಿಗಳು ಸಂತ್ರಸ್ತರ ತಾಯಿಗೂ ಥಳಿಸಿದ್ದಾರೆ. ಇದರಿಂದ ಈ ಪ್ರಕರಣ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ.
ಆರೋಪಿಗಳ ಬಂಧನಕ್ಕೆ ಆಗ್ರಹ: ಈ ಹಲ್ಲೆ ಪ್ರಕರಣದ ನಂತರ ಭಾರಿ ಗಲಾಟೆ ನಡೆದಿದೆ. ಈ ಹಲ್ಲೆಯಿಂದ ಯುವಕನೊಬ್ಬರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಚಿಕಿತ್ಸೆಗಾಗಿ ಶ್ರೀರಾಂಪುರದ ಕಾರ್ಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ರಿಪೈ ಜಿಲ್ಲಾಧ್ಯಕ್ಷ ಸುರೇಂದ್ರ ಥೋರಟ್ ಆಗ್ರಹಿಸಿದರು. ದುಷ್ಕರ್ಮಿಗಳು ಹಿಂದುಳಿದ ವರ್ಗದ ಯುವಕರನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ.
ಪರಿಶಿಷ್ಟ ಜಾತಿ, ಪಂಗಡ ತಡೆ ಕಾಯ್ದೆಯಡಿ ದೂರು ದಾಖಲು: ಪ್ರಕರಣದಲ್ಲಿ ಭಾಗಿಯಾದ ಸಾಮಾಜಿಕ ಕಾರ್ಯಕರ್ತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸುವುದಾಗಿ ರಿಪೈ ಜಿಲ್ಲಾಧ್ಯಕ್ಷ ಸುರೇಂದ್ರ ಥೋರಟ್ ಎಚ್ಚರಿಕೆ ನೀಡಿದ್ದಾರೆ. ಘಟನೆಯ ಗಂಭೀರತೆ ಅರಿತ ಪೊಲೀಸ್ ವರಿಷ್ಠಾಧಿಕಾರಿ ಸ್ವಾತಿ ಭೋರ್ ಆಸ್ಪತ್ರೆಗೆ ತೆರಳಿ ಸಂತ್ರಸ್ತರನ್ನು ಭೇಟಿಯಾದರು. ಈ ಘಟನೆಯಲ್ಲಿ ಕಿಡಿಗೇಡಿಗಳ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ-ಪಂಗಡ ತಡೆ ಕಾಯ್ದೆ (ದೌರ್ಜನ್ಯ) ಕಲಂ 307, 364, 342, 506, 504, 143, 148, 149 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಭೇಟಿ: ಶ್ರೀರಾಂಪುರ ತಾಲೂಕಿನ ಹರೇಗಾಂವದಲ್ಲಿ ಹಿಂದುಳಿದ ವರ್ಗದ ಯುವಕರನ್ನು ಹಲ್ಲೆ ನಡೆಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಬಗ್ಗೆ ತಿಳಿದ ತಕ್ಷಣ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಓಲಾ, ಶಾಸಕ ಲಾಹು ಕಾಂಡೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರನ್ನು ವಿಚಾರಿಸಿದರು. ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕ್ಕೆ ತಂಡಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸಿಬಿಐ ಸೋಗಿನಲ್ಲಿ ದರೋಡೆ ಮಾಡಿದ್ದ ಐವರು ಆರೋಪಿಗಳು ಅಂದರ್.. 1 ಕೋಟಿ ರೂ. ಒಡಿಶಾ ಪೊಲೀಸರ ವಶ