ನವದೆಹಲಿ: ಬೃಹತ್ ಸಾಮಾಜಿಕ ಮಾಧ್ಯಮ ಕಂಪನಿ ಮೆಟಾ ನವೆಂಬರ್‌ನಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾರತೀಯ ಬಳಕೆದಾರರು ಪೋಸ್ಟ್ ಮಾಡಿದ್ದ 2.29 ಕೋಟಿಗೂ ಹೆಚ್ಚು ಕಂಟೆಂಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಕಂಪನಿ ಗುರುವಾರ ಬಿಡುಗಡೆ ಮಾಡಿದ ಇಂಡಿಯಾ ಮಾಸಿಕ ವರದಿ ತಿಳಿಸಿದೆ. ವರದಿಯಲ್ಲಿನ ಮಾಹಿತಿಯ ಪ್ರಕಾರ, ಫೇಸ್‌ಬುಕ್‌ನಲ್ಲಿ 1.95 ಕೋಟಿಗೂ ಹೆಚ್ಚು ಕಂಟೆಂಟ್ ಪೀಸ್ಗಳು ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 33.9 ಲಕ್ಷ ಕಂಟೆಂಟ್ ಪೀಸ್ಗಳ ಮೇಲೆ ಕಂಪನಿಯು ಕ್ರಮ ಕೈಗೊಂಡಿದೆ.
ಕಂಪನಿಯು 1.49 ಕೋಟಿಗೂ ಹೆಚ್ಚು ಸ್ಪ್ಯಾಮ್ ಕಂಟೆಂಟ್ ಮೇಲೆ ಕ್ರಮ ಕೈಗೊಂಡಿದೆ. ಅಲ್ಲದೇ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ 18 ಲಕ್ಷ ಕಂಟೆಂಟ್, ಹಿಂಸಾತ್ಮಕ ಮತ್ತು ಗ್ರಾಫಿಕ್ ವಿಷಯ ಇತ್ಯಾದಿಗಳಿಗೆ ಸಂಬಂಧಿಸಿದ 12 ಲಕ್ಷ ಕಂಟೆಂಟ್ ಪೋಸ್ಟ್ಗಳ ಮೇಲೆ ಫೇಸ್‌ಬುಕ್ ಕ್ರಮ ಕೈಗೊಂಡಿದೆ.
ಪ್ರಚೋದನಾತ್ಮಕ ವಿಷಯ ವಜಾ: ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ, ಆತ್ಮಹತ್ಯೆ ಮತ್ತು ಸ್ವಯಂ - ಗಾಯಕ್ಕೆ ಸಂಬಂಧಿಸಿದ 10 ಲಕ್ಷ ಕಂಟೆಂಟ್, ಹಿಂಸಾತ್ಮಕ ವಿಷಯಕ್ಕೆ ಸಂಬಂಧಿಸಿದ 7.27 ಲಕ್ಷ ಕಂಟೆಂಟ್, 7.12 ಲಕ್ಷ ವಯಸ್ಕ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಯ ಕಂಟೆಂಟ್, 4.84 ಲಕ್ಷ ಬೆದರಿಸುವ ಅಥವಾ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್, ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಇತರ ವಿಷಯದ ಹಿಂಸೆ ಮತ್ತು ಪ್ರಚೋದನೆಯನ್ನು ಉತ್ತೇಜಿಸುವ 2.25 ಲಕ್ಷ ಕಂಟೆಂಟ್ಗಳನ್ನು ಮೆಟಾ ತೆಗೆದುಹಾಕಿದೆ.
2021 ರ ಐಟಿ ನಿಯಮಗಳ ಅಡಿ ಇನ್‌ಸ್ಟಾಗ್ರಾಮ್ ಬಳಕೆದಾರರಿಂದ ಮೆಟಾ 2,368 ದೂರುಗಳನ್ನು ಸ್ವೀಕರಿಸಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ದೂರುಗಳು ಖಾತೆಯನ್ನು ಹ್ಯಾಕ್ ಮಾಡಿರುವ (939), ನಕಲಿ ಪ್ರೊಫೈಲ್ (891), ಬೆದರಿಸುವಿಕೆ ಅಥವಾ ಕಿರುಕುಳ (136), ಬಳಕೆದಾರರನ್ನು ನಗ್ನವಾಗಿ ತೋರಿಸುವ ವಿಷಯ ಅಥವಾ ಭಾಗಶಃ ನಗ್ನತೆ ಅಥವಾ ಲೈಂಗಿಕ ಕ್ರಿಯೆಯಲ್ಲಿ (94) ತೊಡಗಿರುವ ಇತ್ಯಾದಿ ಪೋಸ್ಟ್ ಬಗೆಗಿನ ದೂರುಗಳಿವೆ.
ನಾವು ಪಡೆಯಲಾದ ಒಳಬರುವ ದೂರುಗಳ ಪೈಕಿ 1,124 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುವಂತೆ ಪರಿಕರಗಳನ್ನು (ಟೂಲ್ಸ್) ಒದಗಿಸಿದ್ದೇವೆ ಎಂದು ಮೆಟಾ ಹೇಳಿದೆ. ಕಂಪನಿಯು ನಕಲಿ ಪ್ರೊಫೈಲ್‌ಗಳ 555 ದೂರುಗಳು, 253 ಖಾತೆಗಳನ್ನು ಹ್ಯಾಕಿಂಗ್, 31 ಬೆದರಿಸುವಿಕೆ ಅಥವಾ ಕಿರುಕುಳದ ಕುರಿತು, 30 ಬಳಕೆದಾರರನ್ನು ನಗ್ನತೆ ಅಥವಾ ಭಾಗಶಃ ನಗ್ನತೆ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೋರಿಸುವ ವಿಷಯದ ಮೇಲೆ ಕ್ರಮ ಕೈಗೊಂಡಿದೆ.
ಫೇಸ್‌ಬುಕ್ 2021 ರ ಐಟಿ ನಿಯಮಗಳ ಅಡಿ 889 ದೂರುಗಳನ್ನು ಸ್ವೀಕರಿಸಿದೆ, ಇದಕ್ಕಾಗಿ ಬಳಕೆದಾರರಿಗೆ 511 ಪ್ರಕರಣಗಳಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಧನಗಳನ್ನು ಒದಗಿಸಿದೆ.
ಇದನ್ನೂ ಓದಿ: ಫೇಸ್‌ಬುಕ್ ಪ್ರೇಯಸಿಯಿಂದ 40 ಲಕ್ಷ ವಂಚನೆ: ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು