ಪಣಜಿ (ಗೋವಾ): ಇಂದು ಪ್ರಪಂಚದಾದ್ಯಂತ ಕ್ರಿಸ್‌ಮಸ್ ಸಂಭ್ರಮ ಮನೆಮಾಡಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಗೋವಾದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಯೇಸು ಕ್ರಿಸ್ತನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜನ ಸಂಭ್ರಮ ನಡುವೆಯೂ ಕೋವಿಡ್ ನಿಯಮ ಪಾಲಿಸುವುದನ್ನು ಮರೆಯಲಿಲ್ಲ.
ಗೋವಾದ ಚರ್ಚ್ಗಳಲ್ಲಿ ನಡೆಯವ ಕಾರ್ಯಕ್ರಮಗಳಲ್ಲಿ ಸ್ಥಳೀಯರು, ವಿವಿಧ ರಾಜ್ಯಗಳ ಹಾಗೂ ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದರು. ತಡರಾತ್ರಿಯಿಂದಲೇ ಕ್ರೈಸ್ತ ಬಾಂಧವರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.
ಇದನ್ನೂ ಓದಿ: ಕಲಬುರಗಿ ಜಿಲ್ಲೆಯಾದ್ಯಂತ ಕ್ರಿಸ್‌ಮಸ್ ಹಬ್ಬದ ಸಂಭ್ರಮ..
ನಾರ್ವೆ ಮೂಲದ ಹನ್ಸ್ ಯಾಕುಬ್ ಫರ್ನಾಂಡೋ ಮತ್ತು ಹಿನಾ ಕೂಡ ತಮ್ಮ ಅನುಭವಗಳನ್ನು 'ಈಟಿವಿ ಭಾರತ'ದೊಂದಿಗೆ' ಹಂಚಿಕೊಂಡರು.