ETV Bharat / bharat

ತಮಿಳುನಾಡಿನಲ್ಲಿ ಹೆಚ್ಚಿದ ತಾಪಮಾನ.. ಬಿಸಿಲಿನ ಕಿರಿಕಿರಿ - ಸೂರ್ಯನ ಪ್ರಖರತೆ ಹಚ್ಚಲಿದೆ

ಈ ಬಾರಿ ಮಳೆ ಕೊರತೆ ಎದುರಾಗಿದೆ. ತಮಿಳುನಾಡಿನಾದ್ಯಂತ ಬಿಸಿಲಿನ ತಾಪ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆ ಕಾಣಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Mercury likely to rise in Tamil Nadu
ತಮಿಳುನಾಡಿನಲ್ಲಿ ಹೆಚ್ಚಿದ ತಾಪಮಾನ.. ಬಿಸಿಲಿನ ಕಿರಿಕಿರಿ
author img

By

Published : Aug 14, 2023, 6:54 AM IST

ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ದಿನಗಳಲ್ಲಿ ಸೂರ್ಯನ ಪ್ರಖರತೆ ಹಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಆರ್​ಎಂಸಿ ಹೇಳಿದೆ.

ಆರ್‌ಎಂಸಿಯ ಹಿರಿಯ ಅಧಿಕಾರಿಯೊಬ್ಬರು ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದು,ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಒಳ ಪ್ರದೇಶಗಳು ಸೇರಿ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮುಂಬರುವ ದಿನಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ಗೆ ಏರಿಕೆ ಕಾಣಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಚೆನ್ನೈ ಮತ್ತು ಪುದುಚೇರಿಯಲ್ಲಿ ಸಮುದ್ರದ ಮೇಲಿನ ಗಾಳಿಯಿಂದ ಉಂಟಾಗುವ ಚಂಡಮಾರುತಗಳು ಮಳೆ ತರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ.

ರಾಜ್ಯದ ಹಲವು ಕಡೆ ಒಣ ಹವೆ ಮುಂದುವರೆದಿದ್ದು, ಸೂರ್ಯನ ಪ್ರಕಾಶಮಾನತೆ ಹೆಚ್ಚಿದೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳವರೆಗೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚು ದಾಖಲಾಗಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ತಾಪಮಾನ ಹೆಚ್ಚಳವು ಹೀಗೆ ಮುಂದುವರಿದರೆ, ಕೆಲ ಭಾಗಗಳಲ್ಲಿ ಮಳೆ ತರಬಹುದು ಎಂದು ಅಂದಾಜಿಸಲಾಗಿದೆ. ನೈಋತ್ಯ ಮಾನ್ಸೂನ್ ತಮಿಳುನಾಡಿಗೆ ಅನುಕೂಲಕರ ಸ್ಥಿತಿಯಲ್ಲಿಲ್ಲದ ಕಾರಣ, ಗರಿಷ್ಠ ತಾಪಮಾನ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ ಮತ್ತು ಸುತ್ತಮುತ್ತಲಿನ ಇತರ ನಗರಗಳಲ್ಲಿ ಗರಿಷ್ಠ ತಾಪಮಾನದ ಹೆಚ್ಚಳದಿಂದಾಗಿ ಕೆಲವು ಕಡೆಗಳಲ್ಲಿ ಸಂಜೆ ವೇಳೆಗೆ ಲಘುವಾಗಿ ಸಾಧಾರಣ ಮಳೆಯಾಗಬಹುದು. ನುಂಗಂಬಾಕ್ಕಂ ಮತ್ತು ಮೀನಂಬಾಕ್ಕಂನಲ್ಲಿನ ಹವಾಮಾನ ಕೇಂದ್ರಗಳು ಕ್ರಮವಾಗಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಗಾಳಿಯ ಅಸ್ಥಿರತೆಯಿಂದಾಗಿ ಭಾರತದ ಉತ್ತರ ಭಾಗಗಳ ಕಡೆಗೆ ತಳ್ಳುವುದರಿಂದ ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆ ಕಡಿಮೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ಕರ್ನಾಟಕದಲ್ಲಿ ಈ ಬಾರಿ ಮಳೆ ಕೊರತೆ ಉಂಟಾಗಿದೆ. ಕಳೆದ ಒಂದು ವಾರದಿಂದ ಮಳೆಯ ಅಬ್ಬರ ಕಡಿಮೆ ಆಗಿದ್ದು ಬಿಸಿಲಿನ ವಾತಾವರಣ ಕಂಡು ಬಂದಿದೆ. ಇದು ರಾಜ್ಯದ ಜನರ ನಿದ್ದೆ ಗೆಡಿಸಿದೆ. ಮೊದಲೇ ತಡವಾಗಿ ಮಳೆ ಬಂದಿದ್ದರಿಂದ ಬಿತ್ತನೆ ಕಾರ್ಯವೂ ತಡವಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.

ಇದನ್ನು ಓದಿ:Fishing: ಕಾರ್ಮಿಕರಿಲ್ಲದೆ ಲಂಗರು ಹಾಕಿದ ಬೋಟ್​ಗಳು; ಉತ್ತಮ ವಾತಾವರಣವಿದ್ದರೂ ಶುರುವಾಗದ ಮೀನುಗಾರಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.