ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಮೂವರು ಮಾಜಿ ಶಾಸಕರಿಗೆ ಸರ್ಕಾರಿ ವಸತಿ ಗೃಹವನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸರ್ಕಾರಿ ವಸತಿ ಗೃಹವನ್ನು 24 ಗಂಟೆಯೊಳಗೆ ಖಾಲಿ ಮಾಡಬೇಕೆಂದು ನೋಟಿಸ್ ನೀಡಲಾಗಿದೆ.
ಮೆಹಬೂಬಾ ಮುಫ್ತಿ ಮತ್ತು ಮಾಜಿ ಶಾಸಕರಾದ ಮುಹಮ್ಮದ್ ಅಲ್ತಾಫ್ ವಾನಿ, ಅಬ್ದುಲ್ ಮಜೀದ್ ಭಟ್ ಮತ್ತು ಅಬ್ದುಲ್ ರಹೀಮ್ ರಾಥರ್ ಅವರಿಗೆ 2014ರಲ್ಲಿ ಅನಂತ್‌ನಾಗ್ ಜಿಲ್ಲೆಯ ಖಾನಬಾಲ್ ಹೌಸಿಂಗ್ ಕಾಲೋನಿಯ ಸರ್ಕಾರಿ ಕ್ವಾರ್ಟರ್ಸ್ನಲ್ಲಿ ಮನೆಗಳನ್ನು ಮಂಜೂರು ಮಾಡಲಾಗಿತ್ತು.
ಇದೀಗ ಮೆಹಬೂಬಾ ಮುಫ್ತಿ ಸೇರಿ ನಾಲ್ವರಿಗೂ ಈ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಉಚ್ಚಾಟನೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಬಿಜೆಪಿಯಲ್ಲಿ ಬಣ ರಾಜಕೀಯ: ಅಣ್ಣಾಮಲೈ ವಿರುದ್ಧ ನಿಂತ ಕೆಲ ಹಿರಿಯ ನಾಯಕರು