ETV Bharat / bharat

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಇತಿಹಾಸಪೂರ್ವದ ಮಹತ್ವದ ಕುರುಹು ಪತ್ತೆ - ಪ್ರಾಚೀನ ಶಿಲಾಯುಗ, ನವಶಿಲಾಯುಗ

ಪ್ರಾಚೀನ ನಾಗರಿಕತೆಯ ಜನರಿಗೆ ಸಂಗೀತ ಜ್ಞಾನವಿತ್ತೇ? ಅವರು ಸಂಗೀತ ವಾದ್ಯಗಳನ್ನು ಬಳಸುತ್ತಿದ್ದರೇ ಎಂಬ ಹಲವಾರು ಅನುಮಾನಗಳು ಇಂದಿಗೂ ನಮ್ಮನ್ನು ಕಾಡುತ್ತಿವೆ. ಇದರ ಬಗ್ಗೆ ಜಾರ್ಖಂಡ್​ನಲ್ಲಿ ಪುರಾತತ್ವ ಶಾಸ್ತ್ರಜ್ಞರು ಸಂಶೋಧನೆ ನಡೆಸುತ್ತಿದ್ದಾರೆ.

Megalith
ಮೆಗಾಲಿಥ್
author img

By

Published : Oct 25, 2021, 8:27 AM IST

ಜಾರ್ಖಂಡ್: ಪುರಾತತ್ವ ತಜ್ಞರ ತಂಡ ಹಜಾರಿಬಾಗ್​ನ ಮೆಗಾಲಿಥ್​ (ಬೃಹತ್​​ ಬಂಡೆ) ಪ್ರದೇಶದಲ್ಲಿ ಕೊಳಲನ್ನು ಹೋಲುವ ಉಪಕರಣವೊಂದನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಗಮನಿಸಿದರೆ, ಇತಿಹಾಸ ಪೂರ್ವ ಕಾಲದಲ್ಲಿ ಇದೇ ಮಾದರಿಯ ಹಲವು ಉಪಕರಣಗಳು ಇದ್ದಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.

ಸಂಶೋಧಕರು, ಹಜಾರಿಬಾಗ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಮೆಗಾಲಿಥ್ ಸ್ಥಳಗಳನ್ನು ಗುರುತಿಸಿದ್ದಾರೆ. ಹೀಗೆ ಗುರುತಿಸಲಾದ ಪ್ರದೇಶಗಳಲ್ಲಿ ಪ್ರಾಚೀನ ನಾಗರೀಕತೆಗೆ ಸಂಬಂಧಿಸಿದ ಅನೇಕ ಕುರುಹುಗಳು ದೊರೆತಿದೆ. ಪುರಾತತ್ವಶಾಸ್ತ್ರದ ಸಂಶೋಧಕ ಸುಭಾಶಿಶ್​ ದಾಸ್​​, ಸಂಶೋಧನೆಯ ಆಧಾರದ ಮೇಲೆ ‘ಜಾರ್ಖಂಡ್‌ನ ಕೆಲವು ಮೆಗಾಲಿಥ್ ಸೈಟ್‌ಗಳ ಆರ್ಕಿಯೋಆಸ್ಟ್ರೊನಮಿ’ (The Archaeoastronomy of few megalithic sites of Jharkhand) ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅವರು ಪುರಾತನ ವಸ್ತುಗಳು, ಪುರಾವೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಹಜಾರಿಬಾಗ್​ನ ಚಾನೊ ಗ್ರಾಮದಲ್ಲಿ ಮನುಷ್ಯ ಅಥವಾ ಇತರೆ ಪ್ರಾಣಿಗಳ ಮೂಳೆಗಳಿಂದ ತಯಾರಿಸಿದ ಕೊಳಲಿನಂತರ ಉಪಕರಣ ಪತ್ತೆಯಾಗಿದೆ. ಆ ಕಾಲದಲ್ಲಿ ಸಂಗೀತ ಉಪಕರಣಗಳನ್ನು ಬಳಸಲು ಮೂಳೆಗಳನ್ನು ಬಳಸಲಾಗುತ್ತಿತ್ತು. ಇದನ್ನು ಖಚಿತಪಡಿಸಲು ಸಂಶೋಧನೆಯ ಅಗತ್ಯವಿದೆ ಎಂದು ದಾಸ್ ಹೇಳಿದ್ದಾರೆ.

ಹಜಾರಿಬಾಗ್​ನಲ್ಲಿ ಖಾಸಗಿ ವಸ್ತು ಸಂಗ್ರಹಾಲಯ ಅಭಿವೃದ್ಧಿಪಡಿಸಿರುವ ದಾಸ್, ಪುರಾತನ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿದ್ದಾರೆ. ಈ ಸಂಗ್ರಹಾಲಯಕ್ಕೆ ದೇಶ-ವಿದೇಶದ ತಜ್ಞರು, ಖಗೋಳ ಶಾಸ್ತ್ರಜ್ಞರು ಭೇಟಿ ನೀಡಿದ್ದಾರೆ. ಪ್ರಾಚೀನ ಶಿಲಾಯುಗ, ನವಶಿಲಾಯುಗದ ನಾಗರಿಕತೆಗಳನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ಈ ಕೊಳಲು ಮಹತ್ವದ್ದಾಗಿದೆ ಎಂದು ದಾಸ್​ ತಿಳಿಸಿದ್ದಾರೆ.

ಚಾನೊ ಹಳ್ಳಿಯಲ್ಲಿರುವ ಮೆಗಾಲಿಥ್​​ ಪ್ರದೇಶವನ್ನು ಬ್ರಿಟಿಷ್​ ಆಳ್ವಿಕೆಯಲ್ಲಿ ಪವಿತ್ರ ಮೌಂಟ್ ಎಂದು ಕರೆಯಲಾಗುತ್ತಿತ್ತು. ಈ ಸ್ಥಳದಲ್ಲಿ ಕೆಂಪು, ಕಪ್ಪು ಮಡಿಕೆಗಳು ಪತ್ತೆಯಾಗಿದ್ದು, ಇವು ಕ್ರಿಸ್ತಪೂರ್ವ 700 ರಿಂದ 500 ರ ಕಾಲದಲ್ಲಿ ಬಳಸಿದ್ದವು ಎನ್ನಲಾಗಿವೆ.

ಇದನ್ನೂ ಓದಿ: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿರುವ ಇಂಡೋನೇಷ್ಯಾ ಮಾಜಿ ಅಧ್ಯಕ್ಷರ ಪುತ್ರಿ

ಮೆಗಾಲಿಥ್ ಪ್ರದೇಶಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರೂ, ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.