ETV Bharat / bharat

ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ: ಮಮತಾ ಕರೆದ ಸಭೆಯಲ್ಲಿ 17 ಪಕ್ಷಗಳ ನಾಯಕರು ಭಾಗಿ

ದೆಹಲಿಯಲ್ಲಿ ಮಮತಾ ಬ್ಯಾನರ್ಜಿ ಕರೆದಿರುವ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್​ಸಿಪಿ ವರಿಷ್ಠ ಶರದ್​​ ಪವಾರ್ ಸೇರಿದಂತೆ ಹಲವು ವಿಪಕ್ಷ ನಾಯಕರು​ ಪಾಲ್ಗೊಂಡಿದ್ದಾರೆ.

presidential candidate
ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ
author img

By

Published : Jun 15, 2022, 4:15 PM IST

Updated : Jun 15, 2022, 4:45 PM IST

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಂಬಂಧ ತೃಣಮೂಲ ಕಾಂಗ್ರೆಸ್​​ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ಮಹತ್ವದ ಸಭೆ ಕರೆದಿದ್ದು, ಕಾನ್ಸ್‌ಟಿಟ್ಯೂಷನ್ ಕ್ಲಬ್‌ ಆಫ್‌ ಇಂಡಿಯಾದಲ್ಲಿ 17 ಪಕ್ಷಗಳ ಮುಖಂಡರು ಸೇರಿದ್ದಾರೆ.

ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಪ್ರತಿಪಕ್ಷಗಳಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಮತಾ ಬ್ಯಾನರ್ಜಿ ವಿವಿಧ ಪಕ್ಷಗಳೊಂದಿಗೆ ಚರ್ಚಿಸುತ್ತಿದ್ದಾರೆ. ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​​.ಡಿ.ದೇವೇಗೌಡ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್​ಸಿಪಿ ವರಿಷ್ಠ ಶರದ್​​ ಪವಾರ್, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್​ ಅಬ್ದುಲ್ಲಾ, ಮೆಹಬೂಬ​ ಮುಫ್ತಿ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್​​.ಡಿ.ಕುಮಾರಸ್ವಾಮಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಷ್​ ಯಾದವ್​ ಪಾಲ್ಗೊಂಡಿದ್ದಾರೆ.

  • #WATCH Opposition leaders' meeting called by TMC leader & West Bengal CM Mamata Banerjee ahead of Presidential poll, underway at Constitution Club of India in Delhi pic.twitter.com/BJjzUaIbig

    — ANI (@ANI) June 15, 2022 " class="align-text-top noRightClick twitterSection" data=" ">

ಕಾಂಗ್ರೆಸ್​​ ರಾಜ್ಯಸಭೆ ಸದಸ್ಯ ಜೈರಾಂ ರಮೇಶ್, ಆರ್​ಜೆಡಿ ಪ್ರತಿನಿಧಿಗಳಾಗಿ ಮನೋಜ್​ ಝಾ, ಎ.ಡಿ.ಸಿಂಗ್​, ಶಿವಸೇನೆ ಪ್ರತಿನಿಧಿಗಳಾಗಿ ಪ್ರಿಯಾಂಕಾ ಚತುರ್ವೇದಿ, ಸುಭಾಷ್​ ದೇಸಾಯಿ ಮತ್ತು ಡಿಎಂಕೆಯಿಂದ ಟಿ.ಆರ್​.ಬಾಲು ಹಾಗೂ ಹಿರಿಯ ನಾಯಕರಾದ ಯಶ್ವಂತ್​ ಸಿನ್ಹಾ, ಪ್ರಫುಲ್​​ ಪಟೇಲ್​ ಸೇರಿದಂತೆ ಅನೇಕ ಮುಖಂಡರಿದ್ದಾರೆ.

ಓವೈಸಿಗಿಲ್ಲ ಆಹ್ವಾನ: ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್​ ಓವೈಸಿ ಅವರಿಗೆ ಈ ಸಭೆಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಓವೈಸಿ, "ನನಗೆ ಆಹ್ವಾನ ಕೊಟ್ಟಿಲ್ಲ. ಒಂದು ವೇಳೆ ನನಗೆ ಆಹ್ವಾನ ನೀಡಿದ್ದರೂ ನಾನು ಸಭೆಗೆ ಹೋಗುತ್ತಿರಲಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್​ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಟಿಎಂಸಿಯವರು ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾರೆ. ಆದಾಗ್ಯೂ, ನಮ್ಮನ್ನು ಕರೆದಿದ್ದರೂ ನಾವು ಹೋಗುತ್ತಿರಲ್ಲ. ಯಾಕೆಂದರೆ, ಅವರು ಕಾಂಗ್ರೆಸ್​​ಗೆ ಆಹ್ವಾನ ನೀಡಿದ್ದಾರೆ" ಎಂದು ಕುಟುಕಿದ್ದಾರೆ.

ಗಾಂಧಿ ಮೊಮ್ಮಗನಿಗೆ ಮಣೆ?: ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರತಿಪಕ್ಷಗಳು ಕಸರತ್ತು ನಡೆಸುತ್ತಿದ್ದು, ಹಲವರ ಹೆಸರುಗಳು ಹರಿದಾಡುತ್ತಿವೆ. ಶರದ್​ ಪವಾರ್​ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದು, ಸ್ವತ: ಪವಾರ್‌ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಇದೀಗ, ಮಹಾತ್ಮ ಗಾಂಧೀಜಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರತ್ತ ಪ್ರತಿಪಕ್ಷಗಳ ಚಿತ್ತ ಹರಿದಿದೆ ಎಂದು ವರದಿಯಾಗಿದೆ.

ಗೋಪಾಲಕೃಷ್ಣ ಗಾಂಧಿ ಅವರನ್ನು ಪ್ರತಿಪಕ್ಷಗಳ ಕೆಲ ನಾಯಕರು ಫೋನ್​ ಮೂಲಕ ಸಂಪರ್ಕಿಸಿದ್ದಾರೆ. ಇವರನ್ನು ಕಣಕ್ಕಿಳಿಸುವ ಬಗ್ಗೆ ಎಡಪಕ್ಷಗಳು ಸಲಹೆ ನೀಡಿವೆ. ಪ್ರತಿಪಕ್ಷಗಳ ಒತ್ತಾಸೆಗೆ ಗಾಂಧಿ ಕೂಡ ಸಕಾರಾತ್ಮಕವಾದ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2004-2009ರ ಅವಧಿಯವರೆಗೆ ಗೋಪಾಲಕೃಷ್ಣ ಗಾಂಧಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. 2017ರ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿ ಎನ್​ಡಿಎ ಅಭ್ಯರ್ಥಿ ಎಂ.ವೆಂಕಯ್ಯ ನಾಯ್ಡು ವಿರುದ್ಧ ಸೋಲು ಕಂಡಿದ್ದರು.

ಇದನ್ನೂ ಓದಿ: ED ಅಂದ್ರೆ ಎಕ್ಸಾಮಿನೇಶನ್ ಇನ್ ಡೆಮಾಕ್ರಸಿ : ಪ್ರತಿಪಕ್ಷದವರು ಪಾಸು ಮಾಡ್ಲೇಬೇಕು.. ಅಖಿಲೇಶ್‌ ಯಾದವ್

Last Updated : Jun 15, 2022, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.