ETV Bharat / bharat

ಸಿಎಂ ಯೋಗಿ ಭೇಟಿಗೂ ಮುನ್ನ ಮೀರತ್​ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಎಲ್ಲಾ ಸ್ಟೇಷನ್​ಗಳಲ್ಲೂ ಕಟ್ಟೆಚ್ಚರ - ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಅಲರ್ಟ್

ಮೀರತ್ ರೈಲ್ವೆಯ ಬಗ್ಗೆ ಸ್ಟೇಷನ್ ಮಾಸ್ಟರ್​ಗೆ ಅಂಚೆ ಮೂಲಕ ಪತ್ರವೊಂದನ್ನು ರವಾನಿಸಿರುವ ಕಿಡಿಗೇಡಿಗಳು ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ.

Meerut railway station receives bomb threat ahead of UP CM's visit
ಮೀರತ್​ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಎಲ್ಲಾ ರೈಲು ನಿಲ್ದಾಣಗಳಲ್ಲೂ ಕಟ್ಟೆಚ್ಚರ
author img

By

Published : Nov 10, 2021, 9:45 AM IST

ಮೀರತ್ (ಉತ್ತರ ಪ್ರದೇಶ): ನಾಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೀರತ್​ಗೆ ಭೇಟಿ ನೀಡಲಿರುವ ಮುನ್ನಾ ದಿನ ಮೀರತ್ ರೈಲ್ವೆ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಬಂದಿದ್ದು, ಉತ್ತರ ಪ್ರದೇಶ ಪೊಲೀಸರಿಗೆ ಆತಂಕ ವ್ಯಕ್ತವಾಗಿದೆ.

ರೈಲ್ವೆ ಅಧಿಕಾರಿಗಳ ಪ್ರಕಾರ, ಮೀರತ್ ರೈಲ್ವೆಯ ಸ್ಟೇಷನ್ ಮಾಸ್ಟರ್​ಗೆ ಅಂಚೆ ಮೂಲಕ ಬೆದರಿಕೆ ಪತ್ರವನ್ನು ರವಾನಿಸಲಾಗಿದೆ. ಈ ಪತ್ರ ರೈಲ್ವೆ ನಿಲ್ದಾಣಕ್ಕೆ ತಲುಪಿದ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.

ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಪೊಲೀಸರು ಮಂಗಳವಾರ ರಾತ್ರಿ ಪೂರ್ತಿ ಶೋಧ ಕಾರ್ಯ ನಡೆಸಿದ್ದಾರೆ. ಆದರೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.

ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ರೈಲುಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮೀರತ್ ಸೇರಿದಂತೆ ಘಾಜಿಯಾಬಾದ್, ಹಾಪುರ್, ಬುಲಂದ್ ಶಹರ್​, ಸಹರಾನ್‌ಪುರ, ಮುಜಾಫರ್‌ನಗರ, ಮೊರಾದಾಬಾದ್ ಮತ್ತು ಇತರೆ ಜಿಲ್ಲೆಗಳ ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಜೋಧ್‌ಪುರದಲ್ಲಿ ಭೀಕರ ಅಪಘಾತ: ಎದೆ ಝಲ್​ ಎನಿಸುವಂತಿದೆ ಸಿಸಿಟಿವಿ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.