ಮೀರತ್(ಉತ್ತರ ಪ್ರದೇಶ): ಇಂದಿನ ಆಧುನಿಕ ಜಗತ್ತಿನಲ್ಲೂ ವರದಕ್ಷಿಣೆ ಪ್ರಕರಣ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿರುತ್ತವೆ. ಸದ್ಯ ಅಂತಹದೊಂದು ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ವಿವಾಹಿತೆ ಮಹಿಳೆಗೆ ಥಳಿಸಿ ಅವರ ತಲೆ ಬೋಳಿಸಿ ತ್ರಿವಳಿ ತಲಾಖ್ ನೀಡಲಾಗಿದೆ.
ಮೀರತ್ನ ಲಿಸಾಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ವರದಕ್ಷಿಣೆ ದುಸಾಸೆಯಿಂದಾಗಿ ಅತ್ತೆಯಂದಿರು ಹಾಗೂ ಗಂಡ ಸೇರಿಕೊಂಡು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಗೃಹಿಣಿಯ ತಲೆ ಬೋಳಿಸಿದ್ದಾರೆ. ಇದಾದ ಬಳಿಕ ವಿಚ್ಛೇದನ ನೀಡಿ, ಮನೆಯಿಂದ ಹೊರಹಾಕಿದ್ದಾರೆ. ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಲಿಸಾಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಇತ್ತೆಫಾಕ್ನಗರ ನಿವಾಸಿ ಸಮೀನಾ ಎರಡು ವರ್ಷಗಳ ಹಿಂದೆ ಅಫ್ಜಲ್ಪುರ ಪೌಟಿ ನಿವಾಸಿ ಅಹ್ಮದ್ ಅಲಿ ಜೊತೆ ಮದುವೆ ಮಾಡಿಕೊಂಡಿದ್ದರು. ಅಂದಿನಿಂದಲೂ ಪ್ರತಿದಿನ ಗಂಡ, ಅತ್ತೆಯಂದಿರ ಕಿರುಕುಳ ಅನುಭವಿಸುತ್ತಿದ್ದಾರೆ. ತವರು ಮನೆಯಿಂದ ಬುಲೆಟ್ ಬೈಕ್ ತೆಗೆದುಕೊಂಡು ಬರುವಂತೆ ಬೇಡಿಕೆ ಇಟ್ಟಿದ್ದನು. ಆದರೆ, ಬೇಡಿಕೆ ಈಡೇರಿಸದ ಕಾರಣ, ಪತ್ನಿ ಮೇಲೆ ಹಲ್ಲೆ ಸಹ ನಡೆಸಿದ್ದನು. ಇದಕ್ಕೆ ಸಾಥ್ ನೀಡಿರುವ ಅತ್ತೆಯಂದಿರು ತಲೆ ಬೋಳಿಸಿ, ಹೊರಹಾಕಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ಮನೆಯ ಗೋಡೆಗಳ ಮೇಲೆ ಸೂಸೈಡ್ ನೋಟ್ ಬರೆದು ಮಹಿಳೆ ಆತ್ಮಹತ್ಯೆ
ಕಳೆದ ಜೂನ್ 7ರಂದು ಈ ಘಟನೆ ನಡೆದಿದೆ ಎನ್ನಲಾಗ್ತಿದ್ದು, ಬಲವಂತವಾಗಿ ತಲೆ ಬೋಳಿಸಲಾಗಿದೆ. ಇದರ ಬೆನ್ನಲ್ಲೇ ತಾಯಿ ಮನೆಯಲ್ಲಿ ಹೋಗಿ ಉಳಿದುಕೊಂಡಿದ್ದರು. ತದನಂತರ ಸುತ್ತಮುತ್ತಲಿನ ಜನರು ಪಂಚಾಯ್ತಿ ನಡೆಸಿ, ವಿಷಯ ಇತ್ಯರ್ಥ ಪಡಿಸಿದ್ದರು. ಜೊತೆಗೆ ಅತ್ತೆ ಮನೆಗೆ ಕಳುಹಿಸಿದ್ದರು. ಆದರೆ, ಕಳೆದ ಆಗಸ್ಟ್ 9ರಂದು ಮತ್ತೊಮ್ಮೆ ಗಂಡ ಹಲ್ಲೆ ನಡೆಸಿದ್ದು, ಆಗಸ್ಟ್ 14ರ ರಾತ್ರಿ ತ್ರಿವಳಿ ತಲಾಖ್ ನೀಡಿ, ಮನೆಯಿಂದ ಹೊರಹಾಕಿದ್ದಾರೆ.
ತಾಯಿ ಕರೆದುಕೊಂಡು ಪೊಲೀಸ್ ಠಾಣೆಗೆ ಬಂದಿರುವ ಮಹಿಳೆ ಪ್ರಕರಣ ದಾಖಲು ಮಾಡಿದ್ದಾರೆ. ಸಂತ್ರಸ್ತೆಯ ಮಾಹಿತಿ ಮೇರೆಗೆ ಇದೀಗ ಪೊಲೀಸರು ವರದಕ್ಷಿಣೆ ಹಾಗೂ ತ್ರಿವಳಿ ತಲಾಖ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.