ETV Bharat / bharat

ಉಕ್ರೇನ್​​ನಲ್ಲಿ 18 ಸಾವಿರ ಭಾರತೀಯರಿದ್ದಾರೆ; ಅವರನ್ನೆಲ್ಲ ಸುರಕ್ಷಿತವಾಗಿ ಕರೆ ತರುತ್ತೇವೆ- ಮುರಳೀಧರನ್​ ಅಭಯ - ಉಕ್ರೇನ್​ ಮೇಲೆ ಯುದ್ಧ ಘೋಷಿಸಿದ ರಷ್ಯಾ

ಕಿವಾ ಏರ್​​ಪೋರ್ಟ್​​​ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರೂ ಉಕ್ರೇನ್​ ರಾಜಧಾನಿಯಿಂದ ಬೇರೆ ವ್ಯವಸ್ಥೆಗಳನ್ನು ಮಾಡಿಕೊಂಡು ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ವಾಪಸ್​​​ ಕರೆತರುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆಯ ರಾಜ್ಯಖಾತೆಯ ಸಚಿವ ವಿ ಮುರಳೀಧರನ್​​ ಹೇಳಿದ್ದಾರೆ.

ಉಕ್ರೇನ್​​ನಲ್ಲಿ 18 ಸಾವಿರ ಭಾರತೀಯರಿದ್ದಾರೆ; ಅವರನ್ನೆಲ್ಲ ಸುರಕ್ಷಿತವಾಗಿ ಕರೆ ತರುತ್ತೇವೆ- ಮುರಳೀಧರನ್​ ಅಭಯ

author img

By

Published : Feb 24, 2022, 8:16 PM IST

ತಿರುವನಂತಪುರಂ( ಕೇರಳ):ಉಕ್ರೇನ್​​ನಲ್ಲಿ ಭಾರತದ ಸುಮಾರು 18 ಸಾವಿರ ಜನರಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯಖಾತೆಯ ಸಚಿವ ವಿ ಮುರಳೀಧರನ್​​ ತಿಳಿಸಿದ್ದಾರೆ.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ತ್ರಿಶೂರ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರದ ರಾಜ್ಯಖಾತೆ ಸಚಿವರು, ಉಕ್ರೇನ್​​ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಜನರ ಸುರಕ್ಷತೆ ಬಗ್ಗೆ ಮೊದಲ ಆದ್ಯತೆ ನೀಡುತ್ತಿದ್ದು, ಈ ಸಂಬಂಧ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ 18 ಸಾವಿರ ಜನರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.

ಕಿವಾ ಏರ್​​ಪೋರ್ಟ್​​​ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರೂ ಉಕ್ರೇನ್​ ರಾಜಧಾನಿಯಿಂದ ಬೇರೆ ವ್ಯವಸ್ಥೆಗಳನ್ನು ಮಾಡಿಕೊಂಡು ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ವಾಪಸ್​​​ ಕರೆತರುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ, ಈ ಸಂಬಂಧ ಎಲ್ಲ ಮಾಹಿತಿಯನ್ನು ರವಾನಿಸಲಾಗಿದೆ. ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಿರುವ ಕಾರಣ ವಿಶೇಷ ವಿಮಾನಗಳ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದರು.

ಯುದ್ಧದ ಬೆದರಿಕೆ ಇದ್ದ ಸಮಯದಲ್ಲಿ, ನಾವು ಹೆಚ್ಚಿನ ವಿಮಾನಗಳನ್ನು ಸೇವೆಯಲ್ಲಿ ಇರಿಸಲು ಮತ್ತು ಹಿಂತಿರುಗಲು ಸಿದ್ಧರಿರುವವರನ್ನು ಮರಳಿ ಕರೆತರಲು ಪ್ರಯತ್ನಿಸಿದ್ದೇವೆ. ಆದರೆ, ಉಕ್ರೇನ್‌ನಲ್ಲಿ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ನಾವು ಈ ಮೂಲಕ ಭಾರತೀಯರನ್ನು ಮರಳಿ ಕರೆತರುವ ಕ್ರಮಗಳನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ. ಇದೇ ವೇಳೆ, ಭಾರತೀಯ ರಾಯಭಾರ ಕಚೇರಿಗೆ ಸಹಾಯ ಮಾಡಲು ಈ ಪ್ರದೇಶಕ್ಕೆ ಹೆಚ್ಚಿನ ರಾಜತಾಂತ್ರಿಕರನ್ನು ಕಳುಹಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ನಾನು ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಉಕ್ರೇನ್‌ನ ದಕ್ಷಿಣ ಪ್ರದೇಶಗಳಲ್ಲಿನ ಭಾರತೀಯ ವಿದ್ಯಾರ್ಥಿಗಳು ನಮಗೆ ಆಹಾರ, ನೀರು ಮತ್ತು ವಿದ್ಯುತ್ ಸಿಗುತ್ತಿದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ಗಾಬರಿಯಾಗಬಾರದು. ನಮ್ಮ ಸರ್ಕಾರ ಇರಾಕ್‌ನಂತಹ ಸ್ಥಳಗಳಿಂದ ಭಾರತೀಯರನ್ನು ಕರೆತಂದಿದೆ. ಈಗಲೂ ಇಂತಹದ್ದೇ ಪ್ರಯತ್ನವನ್ನು ಮಾಡುತ್ತಿದ್ದೇವೆ ಯಾರೂ ಭಯಕ್ಕೆ ಒಳಗಾಗುವುದು ಬೇಡ ಎಂದು ಹೇಳಿದ್ದಾರೆ.

ಇದನ್ನು ಓದಿ: ಅಭಿಮತ: ರಷ್ಯಾದ ಸೈನ್ಯ ಶಕ್ತಿಯೆದುರು ನಿಲ್ಲುವುದೇ ಉಕ್ರೇನ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.