ಲಖನೌ(ಉತ್ತರ ಪ್ರದೇಶ): ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ವರಿಷ್ಠೆ ಮಾಯಾವತಿ ಅವರು 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸಿದ್ದ ಎಲ್ಲ 403 ಅಭ್ಯರ್ಥಿಗಳು ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಕಳೆದ ಚುನಾವಣೆಯಲ್ಲಿ ಸಾಧಕ ಬಾಧಕದ ಕುರಿತು ಚರ್ಚೆ ನಡೆಸಲಾಗಿದೆ. ಚುನಾವಣಾ ಫಲಿತಾಂಶಗಳಿಂದಾಗಿ ಹತಾಶರಾಗಬೇಡಿ. ಆದರೆ, ಈಗಿನಿಂದ ಬಲವಾಗಿ ತಯಾರಾಗಿ ಮತ್ತು ಸಜ್ಜುಗೊಳ್ಳಿ ಎಂದು ಪಕ್ಷದ ಕಾರ್ಯಕರ್ತರನ್ನು ಕುರಿತು ಮಾತನಾಡಿದ್ದಾರೆ.
ಪಕ್ಷದ ಕಾರ್ಯಕರ್ತರು ಇದರಿಂದ ಕುಗ್ಗಬೇಕಿಲ್ಲ. ಆದರೆ ಸೋಲಿಗೆ ಸರಿಯಾದ ಕಾರಣಗಳನ್ನು ಅರ್ಥಮಾಡಿಕೊಂಡು ಪಕ್ಷವನ್ನು ಮುನ್ನಡೆಸಬೇಕು. ಬಿಎಸ್‌ಪಿ ಬೇಗ ಅಧಿಕಾರಕ್ಕೆ ಬರುತ್ತದೆ. ಬಿಎಸ್‌ಪಿ ಅಧಿಕಾರಕ್ಕೆ ಬಂದ ನಂತರ ಮಾತ್ರ ಬಡವರು, ಅಸಹಾಯಕರು, ದುರ್ಬಲ ವರ್ಗದವರಿಗೆ ಲಾಭವಾಗಬಹುದು. ಜಾತಿವಾದಿ ಪಕ್ಷಗಳ ಜೊತೆಗೆ ಈಗ 'ಜಾತಿವಾದಿ ಮಾಧ್ಯಮ' ಕೂಡ ತೊಡಗಿಸಿಕೊಂಡಿವೆ. ಬಾಬಾ ಸಾಹೇಬರು ಗುರುತಿಸಿದ ಮಾರ್ಗವನ್ನು ಅನುಸರಿಸಿ ದೀನದಲಿತರು ಅಧಿಕಾರವನ್ನು ಸ್ವೀಕರಿಸಲು ಅವರು ಬಯಸುವುದಿಲ್ಲ ಎಂದು ಆರೋಪಿಸಿದರು.
ಸಮಾಜವಾದಿ ಪಕ್ಷ (ಎಸ್‌ಪಿ) ಕಡೆಗೆ ಮುಸ್ಲಿಂ ಮತಗಳ ದೊಡ್ಡ ಭಾಗವು ಬದಲಾಗಿರುವುದು ವಿಷಾದನೀಯ. ಯುಪಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಮಾಧ್ಯಮಗಳಲ್ಲಿ ಬಿಎಸ್‌ಪಿಯ ಬಗ್ಗೆ ಋಣಾತ್ಮಕವಾಗಿ ತೋರಿಸಿದ್ದರಿಂದ ಈ ವಿದ್ಯಮಾನ ಸಂಭವಿಸಿದೆ. 'ಮುಸ್ಲಿಂ ಸಮಾಜ ಏಕಪಕ್ಷೀಯವಾಗಿ ಎಸ್‌ಪಿಗೆ ಮತ ನೀಡಿದ್ದು, ಬಿಜೆಪಿ ವಿರೋಧಿ ಹಿಂದೂಗಳು ಬಿಎಸ್‌ಪಿಗೆ ಸೇರದಿರಲು ಇದೇ ಕಾರಣ ಎಂದು ಹೇಳಿದರು.
ಇದನ್ನೂ ಓದಿ: ಕಾರ್ಯಕ್ರಮದಲ್ಲಿ ದಿಢೀರ್ ನುಗ್ಗಿ ಬಂದ ಯುವಕ.. ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆ- ವಿಡಿಯೋ
ಇವರೆಲ್ಲ ಈ ವದಂತಿಗಳಿಗೆ ಬಲಿಯಾಗದೇ ಇದ್ದಿದ್ದರೆ ಯುಪಿಯ ಚುನಾವಣಾ ಫಲಿತಾಂಶದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಲಾಭ ಆಗುತ್ತಿತ್ತು. ಮುಸ್ಲಿಂ ಮತಗಳು ಏಕಪಕ್ಷೀಯವಾಗಿ ಎಸ್‌ಪಿಗೆ ಹೋಗುವುದನ್ನು ನೋಡಿ, ದಲಿತರನ್ನು ಹೊರತುಪಡಿಸಿ ಇತರ ಎಲ್ಲ ಹಿಂದೂ ಸಮುದಾಯಗಳು ಇದನ್ನು ಅನುಸರಿಸಿದವು ಎಂದು ಅವರು ತಿಳಿಸಿದರು.