ETV Bharat / bharat

ಮುಂದಿನ ಕೆಲವೇ ವರ್ಷಗಳ ಬಳಿಕ ಕಾಶ್ಮೀರಕ್ಕೆ ಸಿಆರ್​ಪಿಎಫ್ ಅಗತ್ಯವಿರಲ್ಲ: ಅಮಿತ್​ ಶಾ ವಿಶ್ವಾಸ - CRPF parade in Srinagar

ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್​ ಪೀಡಿತ... ಹೀಗೆ ಮೂರು ಭಾಗಗಳಲ್ಲಿ ಸಂಪೂರ್ಣವಾದ ಶಾಂತಿ ಸ್ಥಾಪನೆಯಾದರೆ, ಅದರ ಸಂಪೂರ್ಣ ಹೆಗ್ಗಳಿಕೆಯೂ ಸಿಆರ್​ಪಿಎಫ್​ಗೆ ಸಲ್ಲುತ್ತದೆ ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದರು.

Union Home Minister Amit Shah
Union Home Minister Amit Shah
author img

By

Published : Mar 20, 2022, 11:21 AM IST

ಶ್ರೀನಗರ(ಜಮ್ಮು-ಕಾಶ್ಮೀರ): ಮುಂದಿನ ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​) ನಿಯೋಜನೆಗೊಳಿಸುವ ಅಗತ್ಯವೇ ಬೀಳುವುದಿಲ್ಲ ಎಂದು ಗೃಹ ಸಚಿವ ಅಮಿತ್​ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶ್ರೀನಗರದ ಮೌಲಾನಾ ಆಜಾದ್​ ಮೈದಾನದಲ್ಲಿ ರವಿವಾರ ಸಿಆರ್​ಪಿಎಫ್​ನ 83ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಪರೇಡ್​ನ ಪರಿವೀಕ್ಷಣೆ ಮಾಡಿ ಮಾತನಾಡಿದ ಅವರು, ಕಾಶ್ಮೀರ ಮತ್ತು ಈಶಾನ್ಯ ಭಾಗ ಮತ್ತು ನಕ್ಸಲ್​ ಪೀಡಿತ ಪ್ರದೇಶಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಸಿಆರ್​ಪಿಎಫ್ ಸಂಕಲ್ಪ ಮಾಡಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಈ ಮೂರು ಪ್ರದೇಶಗಳಲ್ಲಿ ಶಾಂತಿಯ ವಾತಾವರಣ ನೆಲೆಸಲಿದ್ದು, ಸಿಆರ್​ಪಿಎಫ್ ಅಗತ್ಯ ಇರುವುದಿಲ್ಲ ಎಂದು ಅವರು ಹೇಳಿದರು.

ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್​ ಪೀಡಿತ... ಹೀಗೆ ಮೂರು ಭಾಗಗಳಲ್ಲಿ ಸಂಪೂರ್ಣವಾದ ಶಾಂತಿ ಸ್ಥಾಪನೆಯಾದರೆ, ಅದರ ಸಂಪೂರ್ಣ ಹೆಗ್ಗಳಿಕೆಯೂ ಸಿಆರ್​ಪಿಎಫ್​ಗೆ ಸಲ್ಲುತ್ತದೆ ಎಂದು ಗೃಹಸಚಿವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಜಮ್ಮು-ಕಾಶ್ಮೀರದಲ್ಲಿ 370 ಪರಿಚ್ಛೇದ ರದ್ದುಗೊಳಿಸಿದ ಬಳಿಕ ಭಯೋತ್ಪಾದನೆಯ ಮೇಲೆ ನಿರ್ಣಾಯಕ ನಿಯಂತ್ರಣ ಸಾಧಿಸಲು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.

ಇನ್ನು, ಸಿಆರ್​ಪಿಎಫ್ ಸಂಸ್ಥಾಪನಾ ದಿನದ ಅಂಗವಾಗಿ ನಡೆಯುವ ಪರೇಡ್​ ಅನ್ನು​ ಇದೇ ಮೊದಲ ಬಾರಿಗೆ ದೆಹಲಿಯ ಹೊರಗಡೆ ಆಯೋಜಿಸಲಾಗಿದೆ. ಈ ಪರೇಡ್​​ನಲ್ಲಿ ಹುತಾತ್ಮ ಸಿಆರ್​ಪಿಎಫ್ ಯೋಧರ ಕುಟುಂಬಸ್ಥರಿಗೆ ಪದಕಗಳು ಮತ್ತು ಪ್ರಶಸ್ತಿಗಳನ್ನು ಅಮಿತ್​ ಶಾ ಪ್ರದಾನ ಮಾಡಿದರು.

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕಲು ಮತ್ತು ಕಾನೂನು ಸುವ್ಯವಸ್ಥೆ ಸ್ಥಾಪಿಸಲು ಸಿಆರ್​ಪಿಎಫ್ ಜತೆಗೆ ಸೇನೆ, ಬಿಎಸ್​ಎಫ್​, ಐಟಿಬಿಪಿ ಮತ್ತು ಎಸ್​ಎಸ್​ಬಿ ಮತ್ತು ಪೊಲೀಸ್​ ಇಲಾಖೆಯನ್ನೂ ನಿಯೋಜಿಸಲಾಗಿದೆ.

ಇದನ್ನೂ ಓದಿ: ಹುಟ್ಟೂರು, ಆಸ್ತಿಪಾಸ್ತಿ ಬಿಟ್ಟು ಬೆಂಗಳೂರಿಗೆ ಭಾರವಾದ ಹೆಜ್ಜೆ..: ಕಾಶ್ಮೀರ ಪಂಡಿತ ಮಹಿಳೆಯರ ಮನದಾಳದ ನೋವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.