ETV Bharat / bharat

ಸೂರತ್​ ಜವಳಿ ಕಾರ್ಖಾನೆಗಳಲ್ಲಿ ಮತ್ತೆ ಬೆಂಕಿ ಅವಘಡ

author img

By

Published : Aug 27, 2022, 2:08 PM IST

ಸೂರತ್ ನಗರದಲ್ಲಿ ದಿನದಿಂದ ದಿನಕ್ಕೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಇಂದು ನಗರದ ಸಾನಿಯಾ ಅಹಮದ್ ಗ್ರಾಮದಲ್ಲಿ ಶುಭಂ ಉದ್ಯೋಗ್ ಪ್ರದೇಶದಲ್ಲಿನ ಹಲವಾರು ಜವಳಿ ಕಾರ್ಖಾನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೋಲಾಹಲ ಉಂಟಾಯಿತು.

ಸೂರತ್​ ಜವಳಿ ಕಾರ್ಖಾನೆಗಳಲ್ಲಿ ಮತ್ತೆ ಬೆಂಕಿ ಅವಘಡ
Massive fire broke out in many garment factories in Surat

ಸೂರತ್: ಸೂರತ್ ನಗರದ ಕೈಗಾರಿಕಾ ಕಾರ್ಖಾನೆಗಳಲ್ಲಿ ಬೆಂಕಿ ಅನಾಹುತದ ಘಟನೆಗಳು ಮುಂದುವರಿದಿವೆ. ಈ ಬಾರಿ ನಗರದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಸೂರತ್ ನಗರದಲ್ಲಿ ದಿನದಿಂದ ದಿನಕ್ಕೆ ಬೆಂಕಿ ಅವಘಡಗಳು ಹೆಚ್ಚಾಗುತ್ತಿವೆ. ಇಂದು ನಗರದ ಸಾನಿಯಾ ಅಹಮದ್ ಗ್ರಾಮದಲ್ಲಿ ಶುಭಂ ಉದ್ಯೋಗ್ ಪ್ರದೇಶದಲ್ಲಿನ ಹಲವಾರು ಜವಳಿ ಕಾರ್ಖಾನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೋಲಾಹಲ ಉಂಟಾಯಿತು. ಘಟನೆಯ ಮಾಹಿತಿ ತಿಳಿದ ಅಗ್ನಿಶಾಮಕ ದಳದ 8ಕ್ಕೂ ಹೆಚ್ಚು ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸತತ 2 ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.

ಸೂರತ್​ ಜವಳಿ ಕಾರ್ಖಾನೆಗಳಲ್ಲಿ ಮತ್ತೆ ಬೆಂಕಿ ಅವಘಡ
ಸೂರತ್​ ಜವಳಿ ಕಾರ್ಖಾನೆಗಳಲ್ಲಿ ಮತ್ತೆ ಬೆಂಕಿ ಅವಘಡ

ಅಗ್ನಿಶಾಮಕ ಅಧಿಕಾರಿ ದಿನು ಪಟೇಲ್ ಮಾತನಾಡಿ, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಬೆಳಗ್ಗೆ 5:18 ಕ್ಕೆ ಕರೆ ಬಂದಿತ್ತು. ಕರೆ ಬಂದ ತಕ್ಷಣ ನಾವು 4 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದೆವು. ಬೆಂಕಿಯ ಪ್ರಮಾಣ ಬಹಳ ದೊಡ್ಡದಾಗಿದ್ದರಿಂದ ಎರಡು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು.

ಬೆಂಕಿ ನಂದಿಸಲು 1 ಗಂಟೆ ನಿರಂತರವಾಗಿ ನೀರು ಹಾಯಿಸಬೇಕಾಯಿತು. ಕಾರ್ಖಾನೆಗಳಲ್ಲಿ ಬರೀ ಬಟ್ಟೆ ಮತ್ತು ಸೀರೆಗಳಿರುವುದರಿಂದ ಬೆಂಕಿ ತುಂಬಾ ತೀವ್ರವಾಗಿತ್ತು. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.