ನವದೆಹಲಿ: ಜನಪ್ರಿಯ ಮಾರುತಿ ಸುಜುಕಿ(Maruti Suzuki) ಕಾರು ಉತ್ಪಾದನಾ ಕಂಪನಿಯು ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಶೇ. 1.9ರಷ್ಟು ಹೆಚ್ಚಿಸುವುದಾಗಿ ಹೇಳಿತ್ತು. ಆ ಘೋಷಣೆ ಇಂದಿನಿಂದ ಜಾರಿಗೆ ಬರಲಿದೆ. ಆಯ್ದ ಮಾದರಿಗಳ ಎಕ್ಸ್ ಶೋ ರೂಂ ಬೆಲೆಗಳಲ್ಲಿ ಶೇಕಡಾ 1.9ರಷ್ಟು ಸರಾಸರಿ ಬೆಲೆ ಏರಿಕೆ ಮಾಡಿದೆ.
ಇನ್ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಳೆದ ವರ್ಷ ಕಂಪನಿಯು ತೀವ್ರ ಪರಿಣಾಮ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬೆಲೆ ಏರಿಕೆ ಮಾಡಿದ್ದು, ಸೆಪ್ಟೆಂಬರ್ 2021ರಿಂದ ಪರಿಷ್ಕೃತ ಆದೇಶ ಜಾರಿಯಾಗಿದೆ.
ಈ ಹಿಂದೆ ಜನವರಿ ಮತ್ತು ಏಪ್ರಿಲ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಬೆಲೆ ಕೊಂಚ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಏರಿಕೆ ಮಾಡಿದೆ. ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೆಲೆರಿಯೊ ಹೊರತುಪಡಿಸಿ ಉಳಿದೆಲ್ಲಾ ಕಾರುಗಳ ಮೇಲೆ ದರ ಹೆಚ್ಚಳ ಮಾಡಿದೆ.