ವಿಜಯವಾಡ: ತಮ್ಮ ಕಣ್ಣೆದುರೇ ತನ್ನ ಪತಿಯೇ ಬೇರೆ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗುತ್ತಿರುವುದನ್ನು ತಪ್ಪಿಸುವ ಕೆಲಸ ಮಾಡುವುದನ್ನು ಬಿಟ್ಟು ಆಕೆ ಆ ದೃಶ್ಯಗಳನ್ನು ತನ್ನ ಫೋನ್ನಲ್ಲಿ ಚಿತ್ರೀಕರಿಸಿರುವ ವಿಚಿತ್ರ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರಿಗೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ನಗರದಲ್ಲಿ ಸಂತ್ರಸ್ತೆಯ ಗಂಡ ಕೇಟರಿಂಗ್ ವ್ಯಾಪಾರ ಮಾಡುತ್ತಿದ್ದಾರೆ. ಈ ತಿಂಗಳು 3ನೇ ತಾರೀಖಿನಂದು ರಾತ್ರಿ ಸಂತ್ರಸ್ತೆ ತನ್ನ ಇಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ನಿದ್ರಿಸುತ್ತಿದ್ದಳು. ರಾತ್ರಿ 11 ಗಂಟೆಯ ಸುಮಾರು ಎದುರು ಮನೆಯ ದಿಲೀಪ್ ಮತ್ತು ತುಳಸಿ ದಂಪತಿ ಅಕ್ರಮವಾಗಿ ಸಂತ್ರಸ್ತೆಯ ಮನೆಗೆ ನುಗ್ಗಿದ್ದಾರೆ. ಈ ವೇಳೆ ಆಕೆಯ ಬಾಯಿ ಮುಚ್ಚಿ ದಿಲೀಪ್ ದಂಪತಿ ತಮ್ಮ ಮನೆಗೆ ಎಳೆದೊಯ್ದಿದ್ದಾರೆ.
ಇದನ್ನೂ ಓದಿ: 'ಅವರು ಜೈಶ್ರೀರಾಮ್ ಎಂದು ಕೂಗಿದ್ರು, ನಾನು ಅಲ್ಲಾಹು ಅಕ್ಬರ್ ಎಂದು ಕೂಗಿದೆ, ಅವರದ್ದೂ ತಪ್ಪಿಲ್ಲ, ನನ್ನದೂ ತಪ್ಪಿಲ್ಲ'
ಮನೆಯೊಳಗೆ ಎಳೆದೊಯ್ದು ಸಂತ್ರಸ್ತೆಯ ಮೇಲೆ ಆರೋಪಿ ದಿಲೀಪ್ ಎರಡು ಬಾರಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ಎಸಗುತ್ತಿರುವ ದೃಶ್ಯಗಳು ಮತ್ತು ಫೋಟೋಗಳನ್ನು ತುಳಸಿ ತನ್ನ ಫೋನ್ ಮೂಲಕ ಚಿತ್ರೀಕರಿಸಿದ್ದಾಳೆ.
ಫೋಟೋಗಳು ಮತ್ತು ವಿಡಿಯೋ ತೋರಿಸಿ ಸಂತ್ರಸ್ತೆಯ ಮೇಲೆ ದಿಲೀಪ್ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಯಾರಿಗೂ ಹೇಳದಂತೆ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಒಂದು ವೇಳೆ ಹೇಳಿದ್ದೇ ಆದಲ್ಲಿ ಆಕೆಯ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ, ತನ್ನ ಸ್ನೇಹಿತರ ಕೋರಿಕೆಯನ್ನೂ ಈಡೇರಿಸಬೇಕೆಂದು ಹೇಳಿದ್ದಾನೆ. ಇದರಿಂದ ವಿಚಲಿತಳಾದ ಸಂತ್ರಸ್ತೆ ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಆರೋಪಿ ದಂಪತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.